ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕ ಬೀರುತ್ತಿದೆ ದುರ್ನಾತ
Team Udayavani, Feb 21, 2019, 1:00 AM IST
ಉಡುಪಿ: ಕುಂದಾಪುರ-ಉಡುಪಿ ಸಂಪರ್ಕದ ರಾ.ಹೆ. 66ರಲ್ಲಿ ನಿಟ್ಟೂರು ಪರಿಸರ ಈಗ ನಿತ್ಯ ದುರ್ವಾಸನೆಯ ಬೀಡಾಗಿದೆ. ಇದಕ್ಕೆ ಕಾರಣ ಇಲ್ಲಿನ ಕೊಳಚೆ ನೀರು ಶುದ್ಧೀಕರಣ ಘಟಕ. ಇದರಿಂದ ಇಲ್ಲಿನ ನಿವಾಸಿಗಳಿಗೆ ಬದುಕು ದುಸ್ತರವಾಗಿದೆ. ನಗರದ ಫ್ಲಾಟ್, ಅಂಗಡಿ, ಹೊಟೇಲ್‌ಗಳ ಕೊಳಚೆ ನೀರು, ಶೌಚಾಲಯದ ನೀರು ಒಳಚರಂಡಿಯ ಮೂಲಕ ನೇರವಾಗಿ ನಿಟ್ಟೂರಿನಲ್ಲಿರುವ ಶುದ್ಧೀಕರಣ ಘಟಕಕ್ಕೆ ತಲುಪುತ್ತದೆ. ಇಲ್ಲಿ ಕೊಳಚೆ ನೀರನ್ನು ಶುದ್ಧೀಕರಣಗೊಳಿಸಿ ಹೊರಗೆ ಬಿಡಲಾಗುತ್ತದೆ. ಕೊಳಚೆ ನೀರು ಶುದ್ಧೀಕರಣ ವೇಳೆ (ಪ್ಯೂರಿಫೈ)ಗೆ ಅಗತ್ಯವಿರುವಷ್ಟು ಆಲಂ (ಭೂಗರ್ಭದಲ್ಲಿ ಸಿಗುವ ಸುಣ್ಣ) ಬಳಸಬೇಕಾಗುತ್ತದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಆಲಂ ಬಳಸದೇ ಇರುವುದರಿಂದ ವಾಸನೆ ವಿಪರೀತವಾಗಿದೆ.
2005ರಲ್ಲಿ 2ನೇ ಹಂತ ವಿಸ್ತರಣೆ
1988ರಲ್ಲಿ ಮೊದಲ ಹಂತದಲ್ಲಿ ತೆರೆದ ಕೊಳಚೆ ನೀರು ಹೊಂಡ ನಿರ್ಮಿಸಲಾಗಿತ್ತು. ಅನಂತರ 2ನೇ ಹಂತದಲ್ಲಿ 2005ರಲ್ಲಿ ಒಳಚರಂಡಿ ನೀರು ಶುದ್ಧೀಕರಣ ಯೋಜನೆಯಡಿ ಘಟಕ ವಿಸ್ತರಣೆಯಾಗಿತ್ತು. ಆಗ ಈ ಪ್ರದೇಶದಲ್ಲಿ ಕೆಲವು ಮನೆಗಳಿದ್ದವು. ಈಗ ಸಾಕಷ್ಟಿವೆ. ಆಸುಪಾಸು ಮನೆಗಳು ನಿರ್ಮಾಣವಾಗುವ ಮೊದಲೇ ಕಡಿವಾಣ ಹಾಕಬೇಕಿತ್ತು. ಈಗ ನಿಯಮ ಮೀರಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಸಮಸ್ಯೆ ಜಟಿಲ
ಗೊಳಿಸಿದೆ.
ಉಸ್ತುವಾರಿಗೆ ಸಿಬಂದಿ ಇಲ್ಲ
ಘಟಕ ವಿಸ್ತರಣೆಯಾಗಿ 14 ವರ್ಷಗಳು ಕಳೆದಿವೆ. ಇದುವರೆಗೂ ಘಟಕಕ್ಕೆ ಸಂಬಂಧಿಸಿ ಒಬ್ಬ ಅಧಿಕಾರಿಯೂ ನೇಮಕವಾಗಿಲ್ಲ. ಇದರ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಹೊರ ಗುತ್ತಿಗೆದಾರರು ಕೊಳಚೆ ನೀರಿನ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಹೀಗಾಗಿದೆ ಎಂಬ ಆರೋಪವಿದೆ.
ಸಂಕಷ್ಟದಲ್ಲಿವೆ 250 ಮನೆ
ನಿಟ್ಟೂರು ಸುತ್ತಮುತ್ತ ಸುಮಾರು 250 ಮನೆಗಳಿವೆ. ಇಲ್ಲಿ ನಿವಾಸಿಗಳಿಗೆ ಪ್ರತಿನಿತ್ಯ ಕೆಟ್ಟವಾಸನೆಯಿಂದ ವಾಕರಿಕೆ ಹುಟ್ಟಿಸುತ್ತಿದೆ. ಇದರಿಂದ ಬೇಸತ್ತ ಅವರು ಬದುಕೇ ಬೇಡವೆನ್ನಿಸುವ ಮಟ್ಟಿಗೆ ಪರಿತಪಿಸುತ್ತಿದ್ದಾರೆ. ಈಗಾಗಲೇ ಆನೇಕ ಕುಟುಂಬಗಳು ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ತಮ್ಮ ಜಾಗವನ್ನು ಮಾರಾಟ ಮಾಡಿ ಬೇರೆಡೆಗೆ ಬಂದು ನೆಲೆಸಿದ್ದಾರೆ. ಇನ್ನೂ ಹಲವರು ಕಡಿಮೆ ಕ್ರಯಕ್ಕೆ ಸ್ಥಳ ಮಾರಾಟಕ್ಕೆ ಸಿದ್ಧವಾಗಿದ್ದಾರೆ.
ನಗರಸಭೆ ಜನಪ್ರತಿನಿಧಿಗಳು ಇನ್ನೂ ಅಧಿಕಾರ ಸ್ವೀಕರಿಸದೆ ಇರುವುದರಿಂದ ಚುನಾಯಿತ ವಾರ್ಡ್ ಸದಸ್ಯರಿಗೆ ಸಮಸ್ಯೆಯ ಬಗ್ಗೆ ಕೇಳುವ ಅಧಿಕಾರವಿಲ್ಲದಂತಾಗಿದೆ. ಇದರಿಂದಾಗಿ ವಾಸನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.
ಬೆಳಗ್ಗೆ -ಸಂಜೆ ದುರ್ನಾತ ವಿಪರೀತ
ಚಳಿಗಾಲದಲ್ಲಿ ಕೊಳಚೆ ನೀರಿನ ಘಟಕದಲ್ಲಿ ದುರ್ವಾಸನೆ ಹೆಚ್ಚಾಗಿರುತ್ತದೆ. ಕೊಳೆಚೆ ನೀರು ಮೇಲೆ ಕೆಳಗೆ ಆಗುವ ಸಂದರ್ಭ ಹೈಡ್ರೋಜನ್ ಕಣವು ಹಿಮದ ಪದರದೊಂದಿಗೆ ಸೇರಿಕೊಂಡು ಗಾಳಿಯಲ್ಲಿ ಪಸರಿಸುತ್ತದೆ. ಇದರಿಂದಾಗಿ ಬೆಳಗ್ಗೆ ಹಾಗೂ ಸಂಜೆ ವಾಸನೆ ಹೆಚ್ಚಾಗಿರುತ್ತದೆ.
-ರಾಘವೇಂದ್ರ, ಪರಿಸರ ಎಂಜಿನಿಯರ್, ನಗರಸಭೆ, ಉಡುಪಿ.
ಅಧಿಕಾರಿಗಳ ನಿರ್ಲಕ್ಷ್ಯ
ನಗರಸಭೆಯಲ್ಲಿ ಜನಪ್ರತಿನಿಧಿಗಳು ಇನ್ನೂ ಅಧಿಕಾರ ಸ್ವೀಕಾರ ಮಾಡಿಲ್ಲ. ನಿಟ್ಟೂರಿನಲ್ಲಿ ಕಳೆದ ಹಲವು ತಿಂಗಳಿನಿಂದ ಫಟಕದಲ್ಲಿ ಕೊಳಚೆ ನೀರು ಶುದ್ಧೀಕರಣಕ್ಕೆ ಅಗತ್ಯವಿರುವಷ್ಟು ಆಲಂ ಬಳಸದ ಕಾರಣ ನಿಟ್ಟೂರು ಪರಿಸರ ವಾಸನಾಮಯವಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ
-ಸಂತೋಷ್ ಜತ್ತನ್, ಸ್ಥಳೀಯ ನಗರಸಭೆ ಸದಸ್ಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.