ನಗರದ ಕೊಳಚೆ ನೀರಿಗೆ ಬಲಿಯಾಯಿತೆ ನಿಟ್ಟೂರು ವಾರ್ಡ್‌?

ಡ್ರೈನೇಜ್‌ ಪೈಪ್‌ಲೈನ್‌ ಸೋರಿಕೆಗೆ ಬೇಸತ್ತ ಜನ

Team Udayavani, Dec 9, 2019, 5:23 AM IST

5250IMG-20191208-WA0053

ವಿಶೇಷ ವರದಿಉಡುಪಿ: ಅಸಮರ್ಪಕ ಚರಂಡಿ, ಹದಗೆಟ್ಟ ರಸ್ತೆ, ಅಲ್ಲಲ್ಲಿ ಕಾರಂಜಿಯಂತೆ ಉಕ್ಕಿ ಹರಿಯುತ್ತಿರುವ ಕೊಳಚೆ ನೀರಿನ ಮ್ಯಾನ್‌ಗಳು, ಕಿ.ಮೀ. ಒಂದರಂತೆ ಅಗೆದ ರಸ್ತೆ, ಬಾವಿಯಲ್ಲಿ ವರ್ಷ ಪೂರ್ತಿ ನೀರು ಇದ್ದರೂ ನಗರಸಭೆ ನೀರಿಗಾಗಿ ಕಾದು ಕುಳಿತುಕೊಳ್ಳಬೇಕಾದ ದೃಶ್ಯ ಕಂಡು ಬಂದಿರುವುದು ಉಡುಪಿ ನಗರ ಸಭೆಯ ನಿಟ್ಟೂರು ವಾರ್ಡ್‌ನಲ್ಲಿ.

ಡ್ರೈನೇಜ್‌ ಸಂಪರ್ಕ ಇಲ್ಲ!
ಕಳೆದ 10 ವರ್ಷಗಳಿಂದ ಉಡುಪಿ ನಗರದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ನಿಟ್ಟೂರು ವಾರ್ಡ್‌ನಲ್ಲಿ ಸಹ ವಾಣಿಜ್ಯ ಮಳಿಗೆ, ಸೇರಿದಂತೆ ಹತ್ತಾರು ಕಟ್ಟಡಗಳು ತಲೆ ಎತ್ತಿ ನಿಂತಿವೆ. ಆದರೆ ಹೊಸದಾಗಿ ನಿರ್ಮಾಣವಾದ ಶೇ. 50 ರಷ್ಟು ಕಟ್ಟಡಗಳು ನಗರಸಭೆಯಿಂದ ಡ್ರೈನೇಜ್‌ ಸಂಪರ್ಕ ಪಡೆಯದ ಹಿನ್ನೆಲೆಯಲ್ಲಿ ಮಳೆ ನೀರಿನ ಚರಂಡಿಗಳಿಗೆ ಮನೆ ಹಾಗೂ ಹೊಟೇಲ್‌ಗ‌ಳ ಕೊಳಚೆ ನೀರು ಹರಿ ಬಿಡಲಾಗುತ್ತಿದೆ. ಈ ಡ್ರೈನೇಜ್‌ ನೀರು ಬಾವಿಗೆ ಸೇರುತ್ತಿರುವುದರಿಂದ ಹ‌ನುಮಂತ ನಗರದ ಸುಮಾರು 10ಕ್ಕೂ ಅಧಿಕ ಮನೆಗಳ ಬಾವಿ ಹಾಳಾಗಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಅರಿವಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವ ಆರೋಪಗಳಿವೆ.

ತೋಡಿಗೆ ಕೊಳಚೆ ನೀರು !
ಪ್ರಸ್ತುತ ನಗರಸಭೆ ಅಧಿಕಾರಿಗಳು ಮೂಡುತೋಟದ ಸಮೀಪದಲ್ಲಿ ಕೊಳಚೆ ನೀರಿನ ಚರಂಡಿಯನ್ನು ದುರಸ್ತಿಗೊಳಿಸುತ್ತಿದ್ದಾರೆ. ಇದರಿಂದಾಗಿ ಕಲ್ಸಂಕದ ವೆಟ್‌ವೆಲ್‌ನಿಂದ ಸಂಪೂರ್ಣ ಕೊಳಚೆ ನೀರು ನೇರವಾಗಿ ತೋಡಿಗೆ ಹರಿ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ತೋಡಿನ ಮೂಲಕ ಕೊಳಚೆ ನೀರು ಗುಂಡಿಬೈಲ್‌, ಬನ್ನಂಜೆ, ನಿಟ್ಟೂರು, ಕೊಡವೂರು ಮಾರ್ಗವಾಗಿ ಅರಬಿ ಸಮುದ್ರವನ್ನು ಸೇರುತ್ತಿದೆ.

ಕಾನೂನು ಉಲ್ಲಂಘನೆ
ಕೊಳಚೆ ನೀರನ್ನು ನೇರವಾಗಿ ಜಲ ಮೂಲಗಳಿಗೆ ಬಿಡಬಾರದು ಎನ್ನುವ ಕಾನೂನು ಇದೆ. ಆದರೂ ನಗರಸಭೆ ಅಧಿಕಾರಿಗಳು ಅದನ್ನು ಉಲ್ಲಂ ಸಿ ಕೊಳಚೆ ನೀರು ಜಲಮೂಲಕ್ಕೆ ಹರಿ ಬಿಡುತ್ತಿದ್ದಾರೆ. ಈ ಮಾರ್ಗವಾಗಿ ನೂರಾರು ಮನೆಗಳಲ್ಲಿ ಸಾವಿರಾರು ಜನರು ವಾಸವಾಗಿದ್ದಾರೆ. ಅವರೆಲ್ಲ ಈ ಕೊಳಚೆ ನೀರಿನ ಸಮಸ್ಯೆಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಡ್ರೈನೇಜ್‌ ಒಡೆದು ಹೋಗುವ ಘಟನೆಗಳು ಮರುಕಳಿಸುತ್ತಿವೆ. ಈ ಸಮಸ್ಯೆಗೆ ನಗರಸಭೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಫ‌ಲವಾಗಿದ್ದಾರೆ.

ಡ್ರೈನೇಜ್‌ ಸಂಪರ್ಕ ಸಿಕ್ಕಿಲ್ಲ
ನಿಟ್ಟೂರು ವಾರ್ಡ್‌ನಲ್ಲಿ ಕೆಲವು ವಾಣಿಜ್ಯ ಮಳಿಗೆ, ಮನೆಗಳಿಗೆ ಡ್ರೈನೇಜ್‌ ಸಂಪರ್ಕ ಸಿಕ್ಕಿಲ್ಲ. ಇದರಿಂದಾಗಿ ಆ ಮನೆಗಳ ನೀರು ಮಳೆ ನೀರಿನ ಚರಂಡಿಗೆ ಹರಿಯ ಬಿಡಲಾಗುತ್ತಿದೆ. ಇದರಿಂದಾಗಿ ಹನುಮಂತ ನಗರ ರಸ್ತೆಯ ಶೇ. 90ರಷ್ಟು ಬಾವಿಗಳ ನೀರು ಹಾಳಾಗಿದೆ.

ನೀರು ಬಳಸಲು ಹಿಂದೇಟು
ನಿಟ್ಟೂರು ವಾರ್ಡ್‌ನಲ್ಲಿ ಸುಮಾರು 30ರಿಂದ 40ರಷ್ಟು ಬಾವಿಗಳಲ್ಲಿ ವರ್ಷ ಪೂರ್ತಿ ನೀರಿದ್ದರೂ, ನಗರಸಭೆ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ. ಕೊಳಚೆ ನೀರು ಬಾವಿಗೆ ಸೇರುತ್ತಿರುವುದರಿಂದ ಬಾವಿ ನೀರು ಕಪ್ಪು ಹಾಗೂ ಹಳದಿ ಮಿಶ್ರಿತವಾಗಿದೆ. ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರಿಗೆ ಪೈಪೋಟಿ ನೀಡುವಷ್ಟು ಬಾವಿ ನೀರು ಹಾಳಾಗಿದೆ. ವರ್ಷಕ್ಕೊಮ್ಮೆ ಬಾವಿ ನೀರು ಖಾಲಿ ಮಾಡಿ ಔಷಧ ಸಿಂಪಡಿಸಿದರೂ ನೀರು ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆ ಮತ್ತೆ ಮರುಕಳಿಸುತ್ತಿದೆ.

ಸಾಂಕ್ರಾಮಿಕ
ರೋಗಗಳು ಅಧಿಕ
ನಿಟ್ಟೂರು ವಾರ್ಡ್‌ನಲ್ಲಿ ವರ್ಷದಿಂದ ವರ್ಷಕ್ಕೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹನುಮಂತ ನಗರದ ನಿವಾಸಿಗಳು ಮಾರ್ಚ್‌ ನಿಂದ ಅಗಸ್ಟ್‌ ವರೆಗೆ ಮಲೇರಿಯಾ, ಡೆಂಗ್ಯೂ, ಜಾಂಡೀಸ್‌ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಳೆ ನೀರು ಚರಂಡಿ ಯಲ್ಲಿನ ಕೊಳಚೆ ನೀರು ಸಂಗ್ರಹದಿಂದ ಪರಿಸರ ದುರ್ನಾತ ದಿಂದ ಕೂಡಿದೆ. ಈ ಮಾರ್ಗವಾಗಿ ಜನರು ಸಂಚರಿಸಲು ಭಯಪಡುತ್ತಿದ್ದಾರೆ.

ಹಳೆಯದನ್ನು ದುರಸ್ತಿ
ಅಮೃತ್‌ ಯೋಜನೆಯಲ್ಲಿ 38 ಕೋ.ರೂ. ಉಳಿದಿದೆ. ಇದೀಗ ಹೊಸ ಯುಜಿಡಿ ಸಂಪರ್ಕ ಮಾಡಲು ಸಾಧ್ಯವಿಲ್ಲ. ಹಳೆಯದನ್ನು ದುರಸ್ತಿ ಮಾಡುವ ಯೋಜನೆ ಯಿದ್ದು, ತತ್‌ಕ್ಷಣ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ. -ಜಿ.ಜಗದೀಶ್‌, ಜಿಲ್ಲಾಧಿಕಾರಿ

ಡಿಸಿ ಗಮನಕ್ಕೆ
ನಿಟ್ಟೂರು ವಾರ್ಡ್‌ ಡ್ರೈನೇಜ್‌ ಸಮಸ್ಯೆಗೆ ಸಂಬಂಧಿಸಿದಂತೆ ಎಂಪಿ, ಎಂಎಲ್‌ಎ, ಪೌರಯುಕ್ತ, ಜಿಲ್ಲಾಧಿಕಾರಿ ಗಳಿಗೆ ದೂರು ಹಾಗೂ ಸಮಸ್ಯೆಯ ಬಗ್ಗೆ ಅವರ ಗಮನಕ್ಕೆ ತಂದಿದ್ದೇನೆ. ಡ್ರೈನೇಜ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ಸಮಸ್ಯೆಯಿಂದ ಮುಕ್ತಿ ಸಿಗಲು ಸಾಧ್ಯ.
-ಸಂತೋಷ್‌, ನಿಟ್ಟೂರು ವಾರ್ಡ್‌
ನಗರಸಭೆ ಸದಸ್ಯ

ಡ್ರೈನೇಜ್‌ ಸಂಪರ್ಕ ಸಿಕ್ಕಿಲ್ಲ
ನಿಟ್ಟೂರು ವಾರ್ಡ್‌ನಿಂದ ಬನ್ನಂಜೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ಮ್ಯಾನ್‌ ಹೋಲ್‌ಗ‌ಳು ಉಕ್ಕಿ ಹರಿಯುತ್ತಿದೆ. ಈ ಮಾರ್ಗವಾಗಿ ಸಂಚರಿಸಲು ಕಷ್ಟವಾಗುತ್ತಿದೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲಶೀಘ್ರ ಇದಕ್ಕೊಂದು ಪರಿಹಾರ ಕಲ್ಪಿಸುವ ಅಗತ್ಯವಿದೆ.
-ರುದ್ರಪ್ಪ

ಬಾವಿ ನೀರು ಸಂಪೂರ್ಣ ಹಾಳು
ಬಾವಿಯಲ್ಲಿ ನೀರಿದ್ದರೂ ಬಳಕೆ ಮಾಡಲು ಸಾಧ್ಯವಾಗು ತ್ತಿಲ್ಲ. ಮಳೆ ನೀರಿನ ಚರಂಡಿಗಳಲ್ಲಿ ಮನೆಗಳ ಕೊಳಚೆ ನೀರು ಹರಿಬಿಡ ಲಾಗುತ್ತಿದೆ. ಇದರಿಂದಾಗಿ ಬಾವಿ ನೀರು ಸಂಪೂರ್ಣವಾಗಿ ಹಾಳಾಗುತ್ತಿದೆ. ವರ್ಷಕ್ಕೊಮ್ಮೆ ನೀರು ಖಾಲಿ ಮಾಡಿ ಔಷಧ ಸಿಂಪಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
-ಈರಮ್ಮ

ಶಾಶ್ವತ ಪರಿಹಾರ ಯಾವಾಗ
ತಿಂಗಳಿಗೊಮ್ಮೆ ನಿಟ್ಟೂರು ಎಸ್‌ಟಿಪಿಗೆ ಹೋಗುವ ಪೈಪ್‌ಗ್ಳು ಒಡೆದು ಹೋಗುತ್ತಿರುವುದರಿಂದ ಅಡ್ಕದ ಕಟ್ಟೆ ಮಾರ್ಗವಾಗಿ ಬನ್ನಂಜೆ, ಗುಂಡಿಬೈಲು, ಉಡುಪಿ, ಕಲ್ಸಂಕ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದಾಗ ಮಾತ್ರ ಸ್ಥಳೀಯರು ನೆಮ್ಮದಿಯಿಂದ ಇರಬಹುದಾಗಿದೆ.
-ಪ್ರಕಾಶ್‌

ನಾಗರಿಕ ಸಮಸ್ಯೆ ಇದ್ದರೆ ನಮಗೆ ತಿಳಿಸಿ
9148594259

ಟಾಪ್ ನ್ಯೂಸ್

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.