ಆಡಳಿತ ವಿರೋಧಿ ಅಲೆ ಇಲ್ಲ: ಸಿದ್ದರಾಮಯ್ಯ


Team Udayavani, Jan 9, 2018, 10:16 AM IST

09-19.jpg

ಬ್ರಹ್ಮಾವರ: ರಾಜ್ಯದ 24 ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದ್ದು, ಜ.13ರೊಳಗೆ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುವೆ. ಸರಕಾರದ ವಿರುದ್ಧ ಅಲೆ ಇಲ್ಲ, ಬದಲಾಗಿ ಸರಕಾರ ಪರ ಅಲೆ ಇದೆ ಎಂದು ಪ್ರವಾಸ ದಲ್ಲಿ ಕಂಡುಬಂದಿದ್ದು, ಇದು ತೃಪ್ತಿ, ಸಮಾಧಾನ ತಂದುಕೊಟ್ಟಿದೆ. ನುಡಿದಂತೆ ನಡೆದಿರುವುದೇ ಇದಕ್ಕೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 592 ಕೋ.ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಅವರು, ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 155ನ್ನು ಈಡೇರಿಸಿದ್ದೇವೆ. ಮಾರ್ಚ್‌ ಒಳಗೆ ಶತಪ್ರತಿಶತದ ಗುರಿ ಸಾಧಿಸುತ್ತೇವೆ ಎಂದರು. 

ಮಾರ್ಚ್‌ ಒಳಗೆ ಕ್ಯಾಂಟೀನ್‌ 
ರಾಜ್ಯದಲ್ಲಿ 1.82 ಲಕ್ಷ ಕೃಷಿ ಹೊಂಡಗಳನ್ನು ತೆಗೆಯಲಾಗಿದೆ. ಬೆಂಗಳೂರಿನಲ್ಲಿ 200 ಇಂದಿರಾ ಕ್ಯಾಂಟೀನ್‌ ತೆರೆದಿದ್ದು, ಇಲ್ಲಿ
5 ರೂ.ಗೆ ಉಪಾಹಾರ, 10 ರೂ.ಗೆ ಊಟ ದೊರಕುತ್ತದೆ. ಮಾರ್ಚ್‌ ಒಳಗೆ ಎಲ್ಲ ಜಿಲ್ಲೆಗಳಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯಲಾಗುತ್ತದೆ. ಬಡವರಿಗೆ ಅನಿಲಭಾಗ್ಯ ಯೋಜನೆ, ಆರೋಗ್ಯ ಭಾಗ್ಯ ಯೋಜನೆಯನ್ನು ತರಲಾಗುತ್ತಿದೆ ಎಂದರು. ಪ್ರಮೋದ್‌ ಮಧ್ವರಾಜ್‌ ಅವರು ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಲಭಿಸಿದ ಅವಕಾಶವನ್ನು ಬಳಸಿಕೊಂಡಾಗ ಜನರ ಆಶೀರ್ವಾದ ಸಿಕ್ಕೇ ಸಿಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನಾಶೀರ್ವಾದವೇ ಶ್ರೀರಕ್ಷೆ ಎಂದರು. 

ಸಚಿವ ಯು.ಟಿ. ಖಾದರ್‌, ಎಐಸಿಸಿ ಪ್ರ.ಕಾರ್ಯದರ್ಶಿ ಆಸ್ಕರ್‌ ಫೆರ್ನಾಂಡಿಸ್‌, ಬ್ಲಾಸಂ ಫೆರ್ನಾಂಡಿಸ್‌, ಶಾಸಕರಾದ ಗೋಪಾಲ ಪೂಜಾರಿ, ಪ್ರತಾಪಚಂದ್ರ ಶೆಟ್ಟಿ, ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫ‌ೂರ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ತೋನ್ಸೆ, ಬ್ಲಾಕ್‌ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ, ಸತೀಶ ಅಮೀನ್‌ ಪಡುಕರೆ, ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ನಾಯಕರಾದ ಜಿ.ಎ. ಬಾವ, ಸರಳಾ ಕಾಂಚನ್‌, ಭುಜಂಗ ಶೆಟ್ಟಿ, ಯುವರಾಜ್‌, ರಮೇಶ್‌ ಕಾಂಚನ್‌ ಉಪಸ್ಥಿತರಿದ್ದರು. ಪ್ರಶಾಂತ ಶೆಟ್ಟಿ ನಿರ್ವಹಿಸಿದರು.

ವಿವಿಧ ಯೋಜನೆಗಳು
ಸಚಿವ ಪ್ರಮೋದ್‌ ಮಧ್ವರಾಜ್‌ ಸ್ವಾಗತಿಸಿ ಪ್ರಸ್ತಾವನೆಗೈದರು. ಇದುವರೆಗೆ ಕ್ಷೇತ್ರಕ್ಕೆ 1,873 ಕೋ.ರೂ. ಅನುದಾನ ಒದಗಿದೆ. 16 ಜನ
ಸಂಪರ್ಕ ಸಭೆ ನಡೆದಿವೆ. 871 ಕೋ.ರೂ. ವೆಚ್ಚದಲ್ಲಿ 771 ಕಿ.ಮೀ. ಹೊಸ ರಸ್ತೆ, ಸೇತುವೆ ನಿರ್ಮಾಣವಾಗಿದೆ. ಉಡುಪಿ ನಗರಕ್ಕೆ 24 ತಾಸು ನೀರು
ಸಿಗುವಂತಾಗಲು ವಾರಾಹಿ ನದಿಯಿಂದ ನೀರು ಒದಗಿಸುವ 270 ಕೋ.ರೂ. ವೆಚ್ಚದ ಯೋಜನೆ, ಉಡುಪಿ ಬನ್ನಂಜೆಯ 3.5 ಎಕ್ರೆಸ್ಥಳ
ದಲ್ಲಿ 31 ಕೋ. ರೂ. ವೆಚ್ಚದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಯೋಜನೆಗೆ ಶಿಲಾನ್ಯಾಸ ನಡೆಸಲಾಗುತ್ತಿದೆ. 3 ಬಹುಗ್ರಾಮ ಯೋಜನೆ ಮಂಜೂ
ರಾದರೆ ಇಡೀ ಕ್ಷೇತ್ರದಲ್ಲಿ 24 ತಾಸು ನೀರು ಸಿಗುತ್ತದೆ ಎಂದರು. 

ಟಾಪ್ ನ್ಯೂಸ್

vidhana-Soudha

Karnataka Government: 7ನೇ ವೇತನ ಆಯೋಗದ ಶಿಫಾರಸಿಗೆ ಎಳ್ಳುನೀರು?

High-Court

HSRP ಅಳವಡಿಕೆ ಅವಧಿ ಸೆ. 15ರವರೆಗೆ ವಿಸ್ತರಣೆ

Dengue

Health Problem: ಕರುನಾಡ‌ ಜೀವ‌ ಹಿಂಡುತ್ತಿರುವ ಡೆಂಗ್ಯೂ!

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ

Agri

Agriculture: ಗ್ರಾಮೀಣ ಬದುಕಿನ ಚಾವಡಿ ಚರ್ಚೆ; ಕೇವಲ ನೆನಪು

Prajwal-revanna

Hasana Pendrive Case; ಪ್ರಜ್ವಲ್‌ ಸಮರ್ಥ ಪುರುಷ: ವೈದ್ಯಕೀಯ ವರದಿ

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!

ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Heavy Rain ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

1-asdsdas

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

vidhana-Soudha

Karnataka Government: 7ನೇ ವೇತನ ಆಯೋಗದ ಶಿಫಾರಸಿಗೆ ಎಳ್ಳುನೀರು?

High-Court

HSRP ಅಳವಡಿಕೆ ಅವಧಿ ಸೆ. 15ರವರೆಗೆ ವಿಸ್ತರಣೆ

Dengue

Health Problem: ಕರುನಾಡ‌ ಜೀವ‌ ಹಿಂಡುತ್ತಿರುವ ಡೆಂಗ್ಯೂ!

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ

Agri

Agriculture: ಗ್ರಾಮೀಣ ಬದುಕಿನ ಚಾವಡಿ ಚರ್ಚೆ; ಕೇವಲ ನೆನಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.