ಕಟಪಾಡಿಯಲ್ಲಿ ಬಸ್ ನಿಲ್ದಾಣ ಇಲ್ಲ !
Team Udayavani, Jun 6, 2018, 6:00 AM IST
ಕಟಪಾಡಿ: ಇಲ್ಲಿನ ಪ್ರಮುಖ ಜಂಕ್ಷನ್‌ನಲ್ಲಿ ಪ್ರಯಾಣಿಕರಿಗೆ ಸುವ್ಯವಸ್ಥಿತ ತಂಗುದಾಣವಿಲ್ಲದೆ ನಿತ್ಯ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ. ಉಡುಪಿಯತ್ತ ತೆರಳುವ ಪ್ರಯಾಣಿಕರಿಗೆ ಪಕ್ಕದ ಡಿವೈಡರ್ ಮೇಲೆ ಕಟಪಾಡಿ ಗ್ರಾ.ಪಂ. ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ತಾತ್ಕಾಲಿಕ ಬಸ್ಸು ತಂಗುದಾಣ ನಿರ್ಮಿಸಲಾಗಿದ್ದು, ಇದರಲ್ಲಿ ಪ್ರಯಾಣಿಕರು ನಿಂತೇ ಬಸ್ಸುಗಳಿಗೆ ಕಾಯಬೇಕು. ಇನ್ನು ಮಂಗಳೂರು ತೆರಳುವ ಪ್ರಯಾಣಿಕರಿಗೂ ಇದೇ ಮಾದರಿಯ ತಂಗುದಾಣ ಕಟ್ಟಲಾಗಿದ್ದರೂ ಅದು ಗಾಳಿ ಮಳೆಗೆ ಬಿದ್ದು ಹೋಗಿದ್ದು ಬೋರ್ಡ್ ಮಾತ್ರ ಉಳಿದುಕೊಂಡಿದೆ.
ಬಸ್ ಸ್ಟಾಂಡ್ ಇಲ್ಲದ್ದರಿಂದ ಸಾವಿರಾರು ಸಂಖ್ಯೆಯ ಪ್ರಯಾಣಿಕರು, ಮಹಿಳೆಯರು, ಮಕ್ಕಳು ಬಿಸಿಲು, ಮಳೆಯಲ್ಲೇ ಪರದಾಡುವಂತಾಗಿದೆ. ಹೆದ್ದಾರಿ ನಿರ್ಮಾಣದ ಸಂದರ್ಭವೂ ಇಲ್ಲಿ ಬಸ್ ಬೇ ನಿರ್ಮಿಸಿಲ್ಲ. ಇದಲ್ಲದೇ ಉದ್ಯಾವರ ಫಾರೆಸ್ಟ್ ಗೇಟ್, ಬಲಾಯಿಪಾದೆ ಜಂಕ್ಷನ್, ಪಾಂಗಾಳದಲ್ಲಿ, ಕಾಪುವಿನ ಸರ್ವಿಸ್ ರಸ್ತೆಯ ಇಕ್ಕೆಲಗಳಲ್ಲೂ ಬಸ್ಸು ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸೂಕ್ತ ತಂಗುದಾಣದ ಸೌಕರ್ಯದಿಂದ ವಂಚಿತರಾಗಿದ್ದಾರೆ. ಮೊದಲು ದಾನಿಗಳ ಸಹಕಾರದಿಂದ ನಿರ್ಮಿಸಲಾಗಿದ್ದರೂ, ಹೆದ್ದಾರಿ ನಿರ್ಮಾಣಕ್ಕೆ ಬಲಿಯಾಗಿದೆ.
ತಾತ್ಕಾಲಿಕ ತಂಗುದಾಣ
ಪ್ರಯಾಣಿಕರ ಶಾಶ್ವತ ತಂಗುದಾಣಕ್ಕೆ ನವಯುಗದವರು ಸ್ಥಳ ನಿಗದಿ ಪಡಿಸಿದ್ದು, ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ತಾತ್ಕಾಲಿಕವಾಗಿ ತಂಗುದಾಣ ನಿರ್ಮಿಸಲು ಮಾತ್ರ ಪಂಚಾಯತ್‌ಗೆ ಅವಕಾಶ ಇದೆ. 2 ದಿನದೊಳಗೆ ಗಾಳಿಯಿಂದ ಹಾನಿಗೀಡಾದ ತಾತ್ಕಾಲಿಕ ತಂಗುದಾಣ ಸಿದ್ಧಗೊಳ್ಳಲಿದೆ.
ಇನಾಯತುಲ್ಲಾ ಬೇಗ್, ಪಿ.ಡಿ.ಒ. ಕಟಪಾಡಿ ಗ್ರಾ.ಪಂ.
ಭರವಸೆ ಇದೆ
ಕೆನರಾ ಬ್ಯಾಂಕ್ ಬಳಿ ಮತ್ತು ಪೆಟ್ರೋಲ್ ಬಂಕ್ ಬಳಿ ಹೆದ್ದಾರಿ ನಿರ್ಮಾಣಕಾರರು ಬಸ್ಸು ತಂಗುದಾಣಕ್ಕೆ ಫೌಂಡೇಶನ್ ಹಾಕಿದ್ದಾರೆ. ತ್ವರಿತವಾಗಿ ಶಾಶ್ವತ ಬಸ್ಸುತಂಗುದಾಣ ನಿರ್ಮಿಸಿ ಕೊಡುವ ಭರವಸೆ ಇದೆ.
ವಿನಯ ಬಲ್ಲಾಳ್, ಸದಸ್ಯರು. ಕಟಪಾಡಿ ಗ್ರಾ.ಪಂ.
ಹೆಂಗಸರಿಗೆ ಸಮಸ್ಯೆ
ಹೆಂಗಸರಿಗೆ ಮಕ್ಕಳನ್ನು ಹಿಡಿದುಕೊಂಡು ಬಸ್ಸು ಕಾಯಲು ಕಷ್ಟವಾಗುತ್ತಿದೆ. ಬಿಸಿಲು, ಮಳೆಗೆ ಇಲ್ಲಿ ನಿಲ್ಲಬೇಕಾಗಿರುವುದು ಸಮಸ್ಯೆ ತಂದೊಡ್ಡುತ್ತದೆ.
ದೀಪಾ ಪಿ. ಆಚಾರ್ಯ, ಪ್ರಯಾಣಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.