ಗಲಭೆಕೋರರ ಆಸ್ತಿ ಜಪ್ತಿಗೆ ಕಾಯ್ದೆ ಇಲ್ಲ: ಮಾಧುಸ್ವಾಮಿ
Team Udayavani, Dec 28, 2019, 5:45 AM IST
ಉಡುಪಿ: ಗಲಭೆಕೋರರ ಆಸ್ತಿ ಜಪ್ತಿ ಮಾಡುವ ಕಾಯ್ದೆ ಇಲ್ಲ. ಆದರೆ ಸಾರ್ವಜನಿಕರ ಆಸ್ತಿ ನಷ್ಟ 2 ಎ ಕಾಯ್ದೆ ಯಡಿ ಶಿಕ್ಷೆ ಮತ್ತು ದಂಡನೆಗೆ ಅವಕಾಶವಿದೆ ಎಂದು ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉತ್ತರ ಪ್ರದೇಶದ ಮಾದರಿಯಲ್ಲಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವ ಗಲಭೆಕೋರರ ಆಸ್ತಿ ಜಪ್ತಿ ಕಾನೂನು ರಾಜ್ಯದಲ್ಲಿ ಜಾರಿಯಾದರೆ ಕ್ರಮ ಕೈಗೊಳ್ಳಲು ಸಾಧ್ಯ. ಆದರೆ ಪ್ರಸ್ತುತ ಸರಕಾರ ಈ ಕುರಿತು ತೀರ್ಮಾನ ಕೈಗೊಂಡಿಲ್ಲ. ಹಿಂದೆ ಎಫ್ಐಆರ್ ದಾಖಲಾದರೆ ಮಾತ್ರ ಸಾರ್ವಜನಿಕರ ಆಸ್ತಿ ನಷ್ಟ 2 ಎ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿತ್ತು ಎಂದರು.
ಹೊರಗುತ್ತಿಗೆ-ಪಿಪಿ ನೇಮಕ
ರಾಜ್ಯದ ಕೋರ್ಟ್‌ಗಳಲ್ಲಿ ಸರಕಾರಿ ಅಭಿಯೋಜಕರ (ಪಿಪಿ) ಕೊರತೆ ಇದ್ದು, ಆಯಾ ಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುವ ವಕೀಲರನ್ನು ಹೊರಗುತ್ತಿಗೆಯ ಆಧಾರದಲ್ಲಿ ನೇಮಕ ಮಾಡಿ ಕೋರ್ಟ್ ಕಲಾಪ ಶೀಘ್ರ ಮುಗಿಸುವಂತೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
180 ಕೋ.ರೂ. ಕಾಮಗಾರಿ
ಜಿಲ್ಲೆಯಲ್ಲಿ 180 ಕೋ.ರೂ. ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ನದಿ ನೀರನ್ನು ಕಿಂಡಿ ಅಣೆಕಟ್ಟು
ಗಳಲ್ಲಿ ಸಂಗ್ರಹಿಸಿ ಕುಡಿಯುವ ನೀರಿನ ಸಂರಕ್ಷಣೆ ಮತ್ತು ಕೃಷಿಗೆ ಬಳಕೆಗೆ ಅಗತ್ಯವಿರುವ ಯೋಜನೆ ಹಾಕಲಾಗಿದೆ. ಪಶ್ಚಿಮ ವಾಹಿನಿ ಯೋಜನೆಯಡಿ ಕರಾವಳಿಯಲ್ಲಿ ಒಟ್ಟು 1,394 ಕೋ.ರೂ. ವೆಚ್ಚದ 759 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಭಾರೀ ಬೇಡಿಕೆಯಿದ್ದು, ಡಿಪಿಆರ್‌ಗೆ ಆದೇಶ ನೀಡಲಾಗಿದೆ ಎಂದರು.
ಒಬ್ಬರಿಗೆ 5 ಕಾಮಗಾರಿ!
ಸಣ್ಣ ನೀರಾವರಿ ಇಲಾಖೆಯಲ್ಲಿ ಅವ್ಯವಹಾರವಾಗಿಲ್ಲ. ಆದರೆ ಕರಾವಳಿಯಲ್ಲಿ ಕೆಲವು ಗುತ್ತಿಗೆದಾರರು ಪ್ಯಾಕೇಜ್ ಮೂಲಕ 15ರಿಂದ 20 ಕಾಮಗಾರಿಗಳನ್ನು ಪಡೆದು, ನಿಗದಿತ ಸಮಯ ದೊಳಗೆ ಕೆಲಸ ಪೂರ್ಣ ಮಾಡುತ್ತಿಲ್ಲ. ಅಂತಹವರನ್ನು ಗುರುತಿಸಿ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕೆಲಸ ಮಾಡಿರುವ ಅರ್ಹತೆಯ ಜತೆಗೆ ಪ್ರಸ್ತುತ ಹೊಂದಿರುವ ಕಾಮಗಾರಿಗಳ ಪ್ರಮಾಣಪತ್ರ ಪಡೆದ ಬಳಿಕವಷ್ಟೇ ಗುತ್ತಿಗೆ ನೀಡಲಾಗುತ್ತದೆ. ಒಬ್ಬರಿಗೆ ಕೇವಲ 5 ಗುತ್ತಿಗೆ ನೀಡಬಹುದಾದ ನಿಮಯ ಜಾರಿಗೊಳಿಸುವ ಚಿಂತನೆ ಇದೆ ಎಂದರು.
ಎತ್ತಿನಹೊಳೆ ತನಿಖೆಗೆ ಆಗ್ರಹ
ಎತ್ತಿನಹೊಳೆಯಲ್ಲಿ ಪರ್ಯಾಯ ಭೂಮಿ ವಿತರಣೆ ಯಲ್ಲಿ ಅವ್ಯವಹಾರ ನಡೆದಿರುವ ಕುರಿತು ದೂರು ಇದೆ. ಈ ಕುರಿತು ಆದೇಶ ನೀಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.