ಒಂದು ವರ್ಷದಿಂದ ಪೂರ್ಣಕಾಲಿಕ ಪಿಡಿಒ ಇಲ್ಲ

 ವರಂಗ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರಿಗೆ ಸಂಕಷ್ಟ

Team Udayavani, Jan 22, 2022, 7:20 PM IST

ಒಂದು ವರ್ಷದಿಂದ ಪೂರ್ಣಕಾಲಿಕ ಪಿಡಿಒ ಇಲ್ಲ

ಅಜೆಕಾರು: ಗ್ರಾಮೀಣ ಭಾಗದ ಜನತೆಗೆ ಪ್ರತಿಯೊಂದು ಸರಕಾರಿ ಯೋಜನೆ ಲಭ್ಯವಾಗುವುದು ಗ್ರಾಮ ಪಂಚಾಯತ್‌ ಮುಖಾಂತರವೇ. ಪಂಚಾಯತ್‌ನ ಪ್ರಮುಖ ಅಧಿಕಾರಿಯಾಗಿರುವ ಪಿಡಿಒ ಇಲ್ಲದಿದ್ದರೆ ಜನಸಾಮಾನ್ಯರಿಗೆ ಯೋಜನೆಗಳು, ಸವಲತ್ತುಗಳು ದೊರೆ ಯುವುದು ಅಸಾಧ್ಯವಾಗಿದೆ.

ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದ 4 ಬಾರಿ ಅಭಿವೃದ್ಧಿಗಾಗಿ ರಾಜ್ಯ ಸರಕಾರದ ಗಾಂಧಿ ಗ್ರಾಮ ಪುರಸ್ಕಾರ ಪಡೆದ ವರಂಗ ಗ್ರಾ.ಪಂ. ಕಳೆದ ಒಂದು ವರ್ಷಗಳಿಂದ ಪೂರ್ಣಕಾಲಿಕ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಇಲ್ಲದೆ ಬಸವಳಿಯುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ವರಂಗ ಪಂಚಾಯತ್‌ನಲ್ಲಿ ಪೂರ್ಣಕಾಲಿಕ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದವರನ್ನು 2020ನೇ ಸಾಲಿನಲ್ಲಿ ಹೆಬ್ರಿ ಪಂಚಾಯತ್‌ಗೆ ಪ್ರಭಾರವಾಗಿ ನಿಯೋಜನೆ ಮಾಡಿ, ಹೆಬ್ರಿಯಲ್ಲಿ ಪೂರ್ಣಕಾಲಿಕರಾಗಿದ್ದ ಪಿಡಿಒ ಅವರನ್ನು ವರಂಗಕ್ಕೆ ಪ್ರಭಾರವಾಗಿ ನಿಯೋಜಿಸಲಾಗಿತ್ತು. ಆದರೆ ವರಂಗಕ್ಕೆ ಪ್ರಭಾರವಾಗಿ ನಿಯೋಜನೆಗೊಂಡ ಪಿಡಿಒ ಅವರು ಪದೋನ್ನತಿಗೊಂಡು ವರ್ಗಾವಣೆ ಆದ ಬಳಿಕ ವರಂಗದಲ್ಲಿ ಪೂರ್ಣಕಾಲಿಕ ಪಿಡಿಒ ಇಲ್ಲದಂತಾಗಿದೆ.

2011ರ ಜನಗಣತಿ ಪ್ರಕಾರ ಸುಮಾರು 8,094 ಜನಸಂಖ್ಯೆ ಹೊಂದಿರುವ ವರಂಗ ಪಂಚಾಯ ತ್‌ ವ್ಯಾಪ್ತಿ ಯಲ್ಲಿ 1,474 ಮನೆಗಳಿವೆ. ಕಳೆದ 10 ವರ್ಷಗಳಲ್ಲಿ ಈ ಅಂಕಿ ಸಂಖ್ಯೆಗಳಿಗೆ ಇನ್ನಷ್ಟು ಸೇರ್ಪಡೆಗೊಂಡಿವೆ.

ಸೂಕ್ತ ಬಸ್‌ ವ್ಯವಸ್ಥೆಯೇ ಇಲ್ಲ
18 ಸದಸ್ಯರನ್ನು ಹೊಂದಿರುವ ಗ್ರಾ.ಪಂ.ನ ಕಚೇರಿ ಮುನಿಯಾಲಿನಲ್ಲಿದ್ದು ಅಂಡಾರು ಗ್ರಾಮಸ್ಥರು ಅಜೆಕಾರು ಮಾರ್ಗವಾಗಿ ಸುತ್ತು ಬಳಸಿ ಬಸ್‌ನಲ್ಲಿ ಬರಬೇಕಾದರೆ, ಪಡುಕುಡೂರು ಹಾಗೂ ಮುಟ್ಲುಪಾಡಿ ಭಾಗದ ಜನತೆಗೆ ಸೂಕ್ತ ಬಸ್‌ ವ್ಯವಸ್ಥೆಯೇ ಇಲ್ಲ. ಆದರೂ ಸಹ ಅಗತ್ಯ ಕಾರ್ಯಗಳಿಗಾಗಿ ಪಂ. ಕಚೇರಿಗೆ ಬಂದರೆ ಪಿಡಿಒ ಇಲ್ಲದೆ ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಪೂರ್ಣಕಾಲಿಕ ಪಿಡಿಒ ಇಲ್ಲದೆ ಇರುವುದರಿಂದ ದೂರದ ಗ್ರಾಮಗಳಿಂದ ಬರುವ ನಾಗರಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ.

ಅಭಿವೃದ್ಧಿ ದೃಷ್ಟಿಯಿಂದಲೂ ಪೂರ್ಣಕಾಲಿಕ ಪಿಡಿಒ ಇಲ್ಲದೆ ಇರುವುದರಿಂದ ಹಿನ್ನಡೆಯಾಗುತ್ತದೆ. ಪ್ರಸ್ತುತ ಇಲ್ಲಿ ಪ್ರಭಾರ ಇರುವ ಪಿಡಿಒ ಅವರು ಶಿವಪುರ ಗ್ರಾಮ ಪಂಚಾಯತ್‌ನಲ್ಲಿ ಪೂರ್ಣಕಾಲಿಕ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದು ವಾರದಲ್ಲಿ ಕೆಲವು ದಿನಗಳಲ್ಲಿ ವರಂಗದಲ್ಲಿ ಕಾರ್ಯನಿರ್ವಹಿಸುತ್ತಾರೆ. ಎರಡು ದೊಡ್ಡ ಪಂ.ಗಳ ಕೆಲಸ ನಿರ್ವಹಿಸಬೇಕಾದ ಒತ್ತಡ ಇವರ ಮೇಲೆ ಇರುವುದರಿಂದ ವರಂಗಕ್ಕೆ ಪೂರ್ಣಕಾಲಿಕ ಪಿಡಿಒ ನೇಮಕ ವಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರತಿ ನಿತ್ಯ ನೂರಾರು ಮನವಿ
ಪಿಡಿಒ ಇಲ್ಲದೆ ಇರುವುದರಿಂದ ಗ್ರಾ.ಪಂ. ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸಲಾಗದ ಸ್ಥಿತಿ ಬಂದಿದೆ. ಪ್ರತಿನಿತ್ಯ ನೂರಾರು ಜನ ವಿವಿಧ ಮನವಿಗಳನ್ನು ಪಂ.ಗೆ ತರುತ್ತಾರೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ, ಸ್ವತ್ಛತೆಗೆ ಸಂಬಂಧ ಪಟ್ಟ ಯೋಜನೆಗಳ ಅನುಷ್ಠಾನಕ್ಕೆ ಪಿಡಿಒ ಅತ್ಯಗತ್ಯ.

ನಿರಂತರವಾಗಿ ನಡೆಯುವ ವಾರ್ಡ್‌ ಸಭೆ, ಕೋವಿಡ್‌ ಸಭೆ, ಉದ್ಯೋಗ ಖಾತರಿ ಯೋಜನೆ ಸಭೆ, ಮಹಿಳಾ ಗ್ರಾಮ ಸಭೆ, ಗ್ರಾಮಸಭೆ, ಸಂಜೀವಿನಿ ಗುಂಪುಗಳ ಸಭೆ, ಮನೆ ತೆರಿಗೆ, ಕಟ್ಟಡ ತೆರಿಗೆ, ಪಡಿತರ ಚೀಟಿ ವಿತರಣೆ, ಹೊಸ ಕಟ್ಟಡಗಳ ಪರವಾನಿಗೆ, ಉದ್ದಿಮೆಗಳ ಪರವಾನಿಗೆ ನವೀಕರಣ, ಹೊಸ ಉದ್ದಿಮೆಗಳ ಪರವಾನಿಗೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಹೆಬ್ರಿ ತಾಲೂಕಿನ ಪ್ರಮುಖ ಗ್ರಾ.ಪಂ.ಗಳಲ್ಲಿ ಒಂದಾಗಿರುವ ವರಂಗ ಗ್ರಾ.ಪಂ.ನಲ್ಲಿ ಅತ್ಯಗತ್ಯವಾಗಿರುವ ಪಿಡಿಒ ನೇಮಕ ಶೀಘ್ರವಾಗಿ ಆಗಬೆೇಕು ಆಗ ಮಾತ್ರ ಅಭಿವೃದ್ಧಿ ಕಾರ್ಯಗಳು ನಿರಂತರ ನಡೆಯುವ ಜತೆಗೆ ಸಾರ್ವಜನಿಕರು ಅಗತ್ಯ ಸೇವೆಗಳಿಗೆ ನಿರಂತರ ಅಲೆಯು ವುದನ್ನು ತಡೆಯಬಹುದಾಗಿದೆ.

ನಿರಂತರ ಮನವಿ
ವರಂಗ ಗ್ರಾಮ ಪಂಚಾಯತ್‌ಗೆ ಪೂರ್ಣ ಕಾಲಿಕ ಪಿಡಿಒ ಅಗತ್ಯ. ನೇಮಕ ಮಾಡುವಂತೆ ನಿರಂತರ ಮನವಿ ಮಾಡಲಾಗಿದೆ. ಶೀಘ್ರ ನೇಮಕವಾಗುವ ನಿರೀಕ್ಷೆ ಇದೆ.
-ಉಷಾ ಹೆಬ್ಟಾರ್‌,
ಅಧ್ಯಕ್ಷರು ವರಂಗ ಗ್ರಾ.ಪಂ.

ಶೀಘ್ರ ನೇಮಕ
ವರಂಗ ಗ್ರಾಮ ಪಂಚಾಯತ್‌ಗೆ ಪೂರ್ಣಕಾಲಿಕ ಪಿಡಿಒ ನೇಮಕ ಶೀಘ್ರದಲ್ಲಿ ಮಾಡಲಾಗುವುದು. ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಲಾಗುವುದು
 -ಶಶಿಧರ್‌ ಕೆ.ಜಿ., ಕಾರ್ಯ ನಿರ್ವಹಣಾಧಿಕಾರಿ, ತಾ. ಪಂ. ಹೆಬ್ರಿ

-ಜಗದೀಶ್‌ ರಾವ್‌ ಅಂಡಾರು

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.