Ration card ಇಲ್ಲದವರಿಗಿಲ್ಲ “ಗ್ಯಾರಂಟಿ’: ವರ್ಷ ಕಳೆದರೂ ಹೊಸ ನೋಂದಣಿ ಇಲ್ಲ
Team Udayavani, Dec 5, 2023, 7:15 AM IST
ಉಡುಪಿ: ಹೊಸ ರೇಷನ್ ಕಾರ್ಡ್ ನೋಂದಣಿ ಪ್ರಕ್ರಿಯೆ ಒಂದು ವರ್ಷದಿಂದ ಸ್ಥಗಿತಗೊಂಡಿದ್ದು, ಇದ ರಿಂದ ಅನೇಕ ಮಂದಿ ರಾಜ್ಯ ಸರ ಕಾರದ ಗ್ಯಾರಂಟಿ ಯೋಜನೆ ಸಹಿತ ವಿವಿಧ ಪ್ರಯೋಜನಗಳಿಂದ ವಂಚಿತರಾಗುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಾರ್ಚ್ 2023ರ ವರೆಗೆ ಬಿಪಿಎಲ್ ಹಾಗೂ ಎಪಿಎಲ್ ಎರಡಕ್ಕೂ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. 2021ರ ನವೆಂಬರ್‌ನಲ್ಲಿ 3,598 ಬಿಪಿಎಲ್ ಅರ್ಜಿ ಸಕ್ರಿಯಗೊಳಿಸಲಾಗಿತ್ತು. 2022ರ ಆಗಸ್ಟ್‌ನಲ್ಲಿ 4,367 ಅರ್ಜಿಗಳನ್ನು ಸಕ್ರಿಯಗೊಳಿಸಲಾಗಿದೆ. ಮೂರನೇ ಹಂತ ದಲ್ಲಿ ಈ ವರ್ಷದ ನವೆಂಬರ್‌ಗೆ ಸುಮಾರು 1,102 ಅರ್ಜಿಗಳು ಬಂದಿವೆ. ಜಿಲ್ಲೆಯಲ್ಲಿ ಒಟ್ಟು ಸುಮಾರು 3,400 ಬಿಪಿಎಲ್ ಹಾಗೂ 3,402 ಅರ್ಜಿಗಳು ಬಾಕಿ ಉಳಿದಿವೆ. ದ.ಕ. ಜಿಲ್ಲೆಯಲ್ಲಿ ಒಟ್ಟು 5,512 ಅರ್ಜಿಗಳು ಬಾಕಿ ಉಳಿದುಕೊಂಡಿವೆ.
ಹೊಸ ಕಾರ್ಡ್ ಇಲ್ಲ
2022ರ ಸೆಪ್ಟಂಬರ್‌ನಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನವೇ ರೇಷನ್ ಕಾರ್ಡ್ ನೋಂದಣಿ ಪೋರ್ಟಲ್ ಸ್ಥಗಿತಗೊಳಿಸಲಾಗಿತ್ತು.
ಬಳಿಕ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಚುನಾವಣೆಯಲ್ಲಿ ನೀಡಿದ ಗ್ಯಾರಂಟಿ ಭರವಸೆಗಳನ್ನು ಜಾರಿಗೆ ತಂದಿತ್ತು. ಈ ಸಂದರ್ಭದಲ್ಲಿ ಮುಖ್ಯವಾಗಿ ಗೃಹಲಕ್ಷ್ಮಿ ಯೋಜ ನೆಯ ಪ್ರಯೋಜನ ಪಡೆಯಲು ರೇಷನ್ ಕಾರ್ಡ್ ಅಗತ್ಯವಾಗಿದ್ದು, ನೋಂದಣಿ ಸಂದರ್ಭ ಹಲ ವರ ರೇಷನ್ ಕಾರ್ಡ್‌ಗಳು ರದ್ದಾಗಿರುವುದು ಗಮನಕ್ಕೆ ಬಂದಿದೆ. 4 ತಿಂಗಳಿಗೂ ಅಧಿಕ ಸಮಯದಿಂದ ಪಡಿತರ ಪಡೆಯ ದಿರುವುದು ಹಾಗೂ ಹಳೆಯ ಕಾರ್ಡ್ ಗಳನ್ನು ಸೂಕ್ತ ದಾಖಲೆ ನೀಡಿ ಅಪ್‌ಡೇಟ್ ಮಾಡದಿರುವ ಕಾರಣ ಹಲವಾರು ಮಂದಿಯ ಕಾರ್ಡ್‌ಗಳನ್ನು ರದ್ದುಪಡಿಸಲಾಗಿತ್ತು.
ಪುನರಾರಂಭ ಯಾವಾಗ?
ಮೂಲಗಳ ಪ್ರಕಾರ, ರಾಜ್ಯ ಸರಕಾರ ಸದ್ಯಕ್ಕೆ ರೇಷನ್ ಕಾರ್ಡ್ ನೋಂದಣಿ ಪೋರ್ಟಲ್ ತೆರೆಯುವುದು ಕಷ್ಟ. ಒಂದೆಡೆ ಈಗಾಗಲೇ ರಾಜ್ಯದಲ್ಲಿ ಕೋಟ್ಯಂತರ ಮಂದಿ ಸರಕಾರದ ವಿವಿಧ ಯೋಜನೆಗಳ ಸದು ಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಮತ್ತೆ ರೇಷನ್ ಕಾರ್ಡ್ ಪಡೆದುಕೊಂಡವರಿಗೆ ಹೆಚ್ಚು ವರಿ ಯಾಗಿ ಈ ಸೇವೆ ನೀಡು ವುದು ಸರಕಾರಕ್ಕೆ ಹೊರೆಯಾಗಿ ಪರಿಣಮಿ ಸಲಿದೆ. ಈ ಕಾರಣಕ್ಕೆ ಆದಷ್ಟು ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಹೇಳಲಾಗಿದೆ.
ದಿನನಿತ್ಯ ವಿಚಾರಣೆ
ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರ ಸಹಿತ ಆಹಾರ ಇಲಾಖೆಗೆ ದಿನನಿತ್ಯ ಹಲ ವಾರು ಮಂದಿ ಕರೆ ಮಾಡಿ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯ ಸರಕಾರದ ಸೂಚನೆ ಬಂದರಷ್ಟೇ ಎಲ್ಲೆಡೆಪೋರ್ಟಲ್ ನೋಂದಣಿ ಆರಂಭಗೊಳ್ಳುವ ಸಾಧ್ಯತೆಗಳಿವೆ. ಶೀಘ್ರಗತಿ ಯಲ್ಲಿ ಇದು ಕಾರ್ಯರೂಪಕ್ಕೆ ಬಂದರೆ ಮಾತ್ರ ಸೌಲಭ್ಯ ವಂಚಿತರು ರಾಜ್ಯ ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಮುಖ್ಯವಾಗಿ ಸಬ್ಸಿಡಿ ದರದಲ್ಲಿ ಪಡಿತರ ಅಂಗ ಡಿಯಿಂದ ಆಹಾರ ಸರಬರಾಜು ಪಡೆ ಯಲು, ಗುರುತಿನ ಪುರಾವೆಗೆ, ಬ್ಯಾಂಕ್ ಖಾತೆ ತೆರಯಲು ಮತ್ತು ಬ್ಯಾಂಕ್‌ಗಳನಡುವೆ ಹಣ ವರ್ಗಾವಣೆಗೆ, ಆದಾಯ ತೆರಿಗೆ ಪಾವತಿಸಲು, ಹೊಸ ಮತದಾರರ ಗುರುತಿಸಿ ಚೀಟಿ ಪಡೆಯಲು, ಮೊಬೈಲ್ ಸಿಮ್ ಖರೀದಿಸಲು, ಚಾಲನಾ ಪರವಾನಿಗೆ ಪಡೆಯಲು, ಹೊಸ ಎಲ್‌ಪಿಜಿ ಸಂಪ ರ್ಕ ಪಡೆಯಲು, ಜೀವವಿಮೆ ಹಿಂಪಡೆ ಯಲು ಸಹಿತ ವಿವಿಧ ಸಂದರ್ಭಗಳಲ್ಲಿ ರೇಷನ್ ಕಾರ್ಡ್ ಅಗತ್ಯವಾಗುತ್ತದೆ.
ರೇಷನ್ ಕಾರ್ಡ್
ನೋಂದಣಿ ಸ್ಥಗಿತಗೊಂಡಿ ರುವವರು ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಬೇಕು. ಸದ್ಯಕ್ಕೆ ಯಾವುದೇ ಅರ್ಜಿಗಳನ್ನು ಸ್ವೀಕಾರ ಮಾಡುತ್ತಿಲ್ಲ. ಸರಕಾರ ಸೂಚನೆ ನೀಡಿದರೆ ಶೀಘ್ರದಲ್ಲಿ ಆಯಾ ಜಿಲ್ಲಾಮಟ್ಟದಲ್ಲಿಯೂ ಸುತ್ತೋಲೆ ಹೊರಡಿಸಲಾಗುವುದು.
– ರವೀಂದ್ರ, ಉಪ ನಿರ್ದೇಶಕರು (ಪ್ರಭಾರ) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.