Udupi ಮತ್ಸ್ಯಾಶ್ರಯದಡಿ ಹೊಸ ಮನೆ ಬಂದಿಲ್ಲ
Team Udayavani, Dec 26, 2023, 7:15 AM IST
ಉಡುಪಿ: ವಸತಿ ರಹಿತ ಅಥವಾ ವಾಸಿಸಲು ಯೋಗ್ಯ ಮನೆ ಇಲ್ಲದ ಮೀನುಗಾರರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಇರುವ ಮತ್ಸ್ಯಾಶ್ರಯ ಯೋಜನೆಯಡಿ ಈ ಸಾಲಿನಲ್ಲಿ ಒಂದೂ ಮನೆ ಮಂಜೂರಾಗಿಲ್ಲ. ಬದಲಿಗೆ ಈ ಹಿಂದಿನ ವರ್ಷಗಳಲ್ಲಿ ಹಂಚಿಕೆಯಾಗದ ಮನೆಗಳ ಮರು ಹಂಚಿಕೆಗೆ ರಾಜ್ಯ ಸರಕಾರ ಮುಂದಾಗಿದೆ.
2006ರಲ್ಲಿ ಯೋಜನೆ ಆರಂಭಗೊಂಡಿದ್ದು, ತಾಂತ್ರಿಕ ಕಾರಣದಿಂದ ಸರಕಾರ ಮತ್ತು ಮೀನು ಗಾರಿಕೆ ಇಲಾಖೆಯು ಮತ್ಸ್ಯಾಶ್ರಯ ಯೋಜನೆಯಡಿ ವಾರ್ಷಿಕ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಿಲ್ಲ. ಹಾಗಾಗಿ 2020-2021, 2021-22 ನೇ ಸಾಲಿನಲ್ಲಿ ಮನೆಯನ್ನು ಹಂಚಿಕೆ ಮಾಡಿರಲಿಲ್ಲ. 2022-23ರಲ್ಲಿ ಅವಿಭ ಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತವಾಗಿ ರಾಜ್ಯಾದ್ಯಂತ 5 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಅದರಲ್ಲಿ ಉಡುಪಿಗೆ 725 ಹಾಗೂ ದ.ಕ. ಜಿಲ್ಲೆಗೆ 450 ಮನೆ ಹಂಚಿಕೆ ಮಾಡಲಾಗಿತ್ತು.
ಪ್ರತೀ ವಿಧಾನಸಭಾ ಕ್ಷೇತ್ರದಿಂದಲೂ ಈ ಯೋಜನೆಯಡಿ ಮನೆಗಳಿಗೆ ಬೇಡಿಕೆಯಿದೆ. ಆದರೆ ಸರಕಾರದಿಂದ 2023-24ನೇ ಸಾಲಿಗೆ ಮನೆ ಹಂಚಿಕೆ ಮಾಡದ ಕಾರಣ ಎಲ್ಲ ಅರ್ಜಿಗಳು ಶಾಸಕರ ಕಚೇರಿ ಹಾಗೂ ಮೀನುಗಾರಿಕೆ ಇಲಾಖೆ ಯಲ್ಲೇ ಬಾಕಿಯಾಗಿವೆ.
ಮರು ಹಂಚಿಕೆ
2018 – 19ರಿಂದ 2022-23ನೇ ಸಾಲಿನವರೆಗೂ ಹಂಚಿಕೆ ಯಾಗಿರುವ / ಆಗದೆ ಉಳಿದಿರುವ ಮನೆಗಳ ಮಾಹಿತಿಯನ್ನು ಮೀನುಗಾರಿಕೆ ಇಲಾಖೆಯು ಜಿಲ್ಲಾ ಕೇಂದ್ರಗ ಳಿಂದ ಸರಕಾರ ಪಡೆಯುತ್ತಿದೆ. 2022-23ನೇ ಸಾಲಿಗೆ ಉಡುಪಿ ಜಿಲ್ಲೆಗೆ ಹಂಚಿಕೆಯಾದ 725 ಮನೆಗಳಲ್ಲಿ 325 ಮನೆ ಹಂಚಿಕೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ 450 ಮನೆಗಳಲ್ಲಿ ಸುಮಾರು 150 ಮನೆಗಳು ಹಂಚಿಕೆಯಾಗಿಲ್ಲ.
ತಾಂತ್ರಿಕ ಸಮಸ್ಯೆ
2020-21ರ ಮೊದಲು ಮೀನುಗಾರಿಕೆ ಇಲಾಖೆಯಿಂದ ಮಂಜೂರಾಗುತ್ತಿದ್ದ ಮನೆಗಳನ್ನು ಮೀನುಗಾರಿಕೆ
ಅಭಿವೃದ್ಧಿ ನಿಗಮದ ಮೂಲಕವೇ ಅನುಷ್ಠಾನ ಗೊಳಿಸಲಾಗುತ್ತಿತ್ತು. ಇದಕ್ಕಾಗಿ ಕ್ಷೇತ್ರವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿತ್ತು. 2020- 21ನೇ ಸಾಲಿನಲ್ಲಿ ಮನೆ ನಿರ್ಮಾಣದ ಹೊಣೆಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ವಹಿಸಿದ್ದರಿಂದ ಶಾಸಕರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ 2 ವರ್ಷ ಮನೆ ಹಂಚಿಕೆಯಾಗಿಲ್ಲ. 2022-23ನೇ ಸಾಲಿನಲ್ಲಿ ಮತ್ತೆ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೂಲಕವೇ ಮನೆ ಹಂಚಿಕೆಗೆ ಸರಕಾರ ಆದೇಶಿಸಿ, ಮನೆ ಹಂಚಿಕೆ ಮಾಡಿತ್ತು.
ಅನುದಾನವೆಷ್ಟು?
ಮತ್ಸ್ಯಾಶ್ರಯದಡಿ ಮನೆ ಪಡೆಯಲು ಅರ್ಜಿ ಸಲ್ಲಿಸಿದ ಫಲಾನುಭವಿಗಳ ಆಯ್ಕೆ ಬಳಿಕ ಇಲಾಖೆ/ ನಿಗಮದಿಂದ ಪ್ರತೀ ಫಲಾನುಭವಿ ಗಳಿಗೆ ಹಂತ ಹಂತವಾಗಿ ಅನುದಾನ ಮಂಜೂರು ಮಾಡಲಾಗುತ್ತದೆ. ಗ್ರಾಮೀಣ ಫಲಾನುಭವಿಗಳಿಗೆ 1.75 ಲಕ್ಷ ಹಾಗೂ ನಗರ ಪ್ರದೇಶ ಫಲಾನುಭವಿಗಳಿಗೆ 2 ಲಕ್ಷ ರೂ. ನೀಡಲಾಗುತ್ತದೆ. ಈ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಏರಿಸಬೇಕು ಎಂಬ ಬೇಡಿಕೆಯೂ ಇದೆ.
ಮತ್ಸ್ಯಾಶ್ರಯ ಮನೆ ಹಂಚಿಕೆಗೆ ಇರುವ ತಾಂತ್ರಿಕ ತೊಡಕು ನಿವಾರಿಸಲಾಗಿದೆ. ಉಳಿಕೆ ಮನೆಗಳ ಮರುಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ.
– ಮಂಕಾಳ ವೈದ್ಯ, ಮೀನುಗಾರಿಕೆ ಮತ್ತು ಬಂದರು ಸಚಿವ
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.