ವೇತನವಿಲ್ಲ, ವಿಶೇಷ ಆರ್ಥಿಕ ಪ್ಯಾಕೇಜ್ ಕೂಡ ಇಲ್ಲ
Team Udayavani, Nov 26, 2020, 2:49 AM IST
ಬೇಡಿಕೆಗೆ ಆಗ್ರಹಿಸಿ ಈ ಹಿಂದೆ ಪ್ರತಿಭಟನೆ ನಿರತ ಉಪನ್ಯಾಸಕರು.
ಕಾರ್ಕಳ: ಕೋವಿಡ್-19ನಿಂದ ರಾಜ್ಯದ ಪ.ಪೂರ್ವ ಕಾಲೇಜುಗಳು ಇನ್ನೂ ತೆರೆಯದ ಕಾರಣ ಅತಿಥಿ ಉಪನ್ಯಾಸಕರು 9 ತಿಂಗಳಿಂದ ಕೆಲಸ ಮತ್ತು ಸಂಪಾ ದನೆಯಿಲ್ಲದೇ ಸಂಕಷ್ಟ ದಲ್ಲಿದ್ದಾರೆ. ಅವರಿಗೆ ಕೋವಿಡ್ ಪ್ಯಾಕೇಜ್ ಕೂಡ ಸರಕಾರ ನೀಡಿಲ್ಲ.
ನೇಮಕಾತಿಯಲ್ಲೂ ನ್ಯಾಯ ಸಿಕ್ಕಿಲ್ಲ
ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯ ಕಾರಣ ಸರಕಾರ ಈಗಾಗಲೇ 1,200 ಉಪನ್ಯಾಸಕರನ್ನು ಖಾಯಂ ಆಗಿ ನೇಮಿಸಿದೆ. ಆದರೆ ಈ ವೇಳೆ ಅತಿಥಿ ಉಪ ನ್ಯಾ ಸಕರನ್ನು ಪರಿಗಣಿಸಿಲ್ಲ. ಹೀಗಾಗಿ ಅವರ ಉದ್ಯೋಗಕ್ಕೂ ಕತ್ತರಿ ಬೀಳುವ ಆತಂಕ ಎದುರಾಗಿದೆ. ರಾಜ್ಯದಲ್ಲಿ 18 ಮಂದಿ ಅತಿಥಿ ಉಪನ್ಯಾಸಕರು ಈಗಾಗಲೇ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ, ಮಾನಸಿಕ ಖನ್ನತೆ ಪ್ರಕರಣಗಳು ಹೆಚ್ಚುತ್ತಿವೆ.
ಶಾಸಕರ ಮೂಲಕವೂ ಮನವಿ
ಸೇವಾ ಭದ್ರತೆ ಹಾಗೂ ಇತರ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಉಪನ್ಯಾಸಕರು ರಾಜ್ಯಾದ್ಯಂತ ಹೋರಾಟ ನಡೆಸಿದ್ದಾರೆ. ಶಾಸಕರ ಮೂಲಕ ಮನವಿಯನ್ನೂ ನೀಡಿದ್ದಾರೆ. ವಿಶೇಷ ಆರ್ಥಿಕ ಪ್ಯಾಕೇಜಿಗೂ ಮನವಿ ಮಾಡಿದ್ದು ಇದುವರೆಗೂ ಯಾವುದೇ ಪರಿಣಾಮ ಬೀರಿಲ್ಲ.
ಬೇಡಿಕೆಗಳು
ಇಲಾಖೆಯ ಮುಂದಿನ ನೇಮಕಾತಿಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಪ್ರಾತಿನಿಧ್ಯ ನೀಡಬೇಕು, ಅವರನ್ನು ಕೆಲಸದಿಂದ ತೆಗೆಯಬಾರದು, ಅತಿಥಿ ಶಿಕ್ಷಕರು/ಉಪನ್ಯಾಸಕರಿಗೆ ಕೋವಿಡ್ ವಿಶೇಷ ಪ್ಯಾಕೆಜ್ ಬದಲಿಗೆ ಬಾಕಿ ವೇತನವನ್ನು ನೀಡುವುದು, ಗೌರವಧನ ಹೆಚ್ಚಳ, ವರ್ಷದ 12 ತಿಂಗಳು ವೇತನ, ಆತ್ಮಹತ್ಯೆಗೈದ ಉಪನ್ಯಾಸಕರಿಗೆ ಪರಿಹಾರ, ದ್ವಿತೀಯ ಪಿಯು ಮೌಲ್ಯ ಮಾಪನದಲ್ಲಿ ಪರಿಗಣಿಸುವುದು. ಸೇವಾ ಪ್ರಮಾಣ ಪತ್ರ, ಗುರುತಿನ ಚೀಟಿ, ಇಪಿಎಫ್, ಇಎಸ್‌ಐ ಸೌಲಭ್ಯ ನೀಡುವುದು. ಶೇ. 60ಕ್ಕೂ ಅಧಿಕವಿರುವ ಮಹಿಳಾ ಉಪನ್ಯಾಸಕರಿಗೆ ಭದ್ರತೆ ಒದಗಿಸುವ ಬೇಡಿಕೆ ಪಟ್ಟಿ ಇದೆ.
ಕೈಗೆ ಬಂದ ತುತ್ತು ಬಾಯಿಗಿಲ್ಲ
ಕೇಂದ್ರ ಸರಕಾರದ ನಿರ್ದೇಶನದಂತೆ ಅತಿಥಿ ಉಪ ನ್ಯಾಸಕರಿಗೆ ವೇತನ ನೀಡುವಂತೆ ಆಯನೂರು ಮಂಜುನಾಥ್ ಅಧಿವೇಶನ ದಲ್ಲಿ ಆಗ್ರಹಿಸಿದ್ದರು. ಮುಖ್ಯ ಮಂತ್ರಿಗಳು ವೇತನ ಕೊಡುತ್ತೇವೆ ಎಂದು ಹೇಳಿ 5 ತಿಂಗಳ ವೇತನ ಬಿಡುಗಡೆ ಗೊಳಿಸಿದ್ದರು. ಆದರೆ ಅತಿಥಿ ಉಪ ನ್ಯಾಸಕರನ್ನು ಅದರಿಂದ ಹೊರಗಿಟ್ಟಿರು ವುದರಿಂದ ಅನ್ಯಾಯ ಮಾಡಿದಂತಾಗಿದೆ. ಡಿ. 7ರಿಂದ ಆರಂಭವಾಗುವ ಅಧಿವೇಶನದಲ್ಲಿ ಈ ಬಗ್ಗೆ ಮತ್ತೆ ಚರ್ಚೆಯಾಗುವ ಸಾಧ್ಯತೆಗಳಿವೆ.
ಅತಿಥಿ ಉಪನ್ಯಾಸಕರನ್ನು ವಾರ್ಷಿಕವಾಗಿ ಆಯಾ ಅವಧಿಗೆ ನೇಮಿಸಲಾಗುತ್ತದೆ. ಕಳೆದ ಮಾರ್ಚ್‌ನಲ್ಲಿ ಅವರ ಅವಧಿ ಪೂರ್ಣವಾಗಿದೆ. ಬಳಿಕ ನೇಮಕವಾಗಿಲ್ಲ. ವಿಶೇಷ ಆರ್ಥಿಕ ಪ್ಯಾಕೆಜ್ ವಿಚಾರ ಸರಕಾರ ಮಟ್ಟದಲ್ಲಿ ನಿರ್ಧರಿಸುವಂತದ್ದು.
– ಭಗವಂತ ಕಟ್ಟಿಮನಿ ಉಪನಿರ್ದೇಶಕರು ಪ.ಪೂ. ಶಿಕ್ಷಣ ಇಲಾಖೆ ಉಡುಪಿ
ಪ.ಪೂ. ಉಪನ್ಯಾಸಕರಿಗೆ ಆನ್‌ಲೈನ್ ಕ್ಲಾಸ್ ಮಾಡಬೇಕೆಂದು ಮಂಡಳಿ ಸುತ್ತೋಲೆ ಹೊರಡಿಸಿತ್ತು. ಅದರಂತೆ ಉಪನ್ಯಾಸಕರೆಲ್ಲರೂ ವಿದ್ಯಾರ್ಥಿಗಳಿಗೆ ವೀಡಿಯೋ ಮೂಲಕ ಪಠ್ಯದ ಚಟುವಟಿಕೆ ನಡೆಸಿದ್ದಾರೆ. ಅವರೆಲ್ಲರಿಗೂ ವೇತನ ನೀಡಬೇಕು.
– ರಾಜೇಂದ್ರ ಭಟ್, ಪಿ. ಮುಖ್ಯಸ್ಥರು ಅ. ಭಾ. ಶಿಕ್ಷಣ ಉಳಿಸಿ ರಾಜ್ಯ ಸಮಿತಿ, ಬೆಂಗಳೂರು
ರಾಜ್ಯದಲಿರುವ ಅತಿಥಿ ಉಪನ್ಯಾಸಕರು 3050
ಉಡುಪಿ ಜಿಲ್ಲೆ 73
ದ.ಕ. ಜಿಲ್ಲೆ 142
ಮಾಸಿಕ ವೇತನ- 9000
ಇತರ ಯಾವುದೇ ಸೌಲಭ್ಯಗಳಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Malpe: ಮೀಟಿಂಗ್ ರೂಮ್‌ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು
Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.