ಅರಳಿಕೆರೆ ಪುನಶ್ಚೇತನಗೊಂಡರೆ ನೀರಿಗೆ ಬರವಿಲ್ಲ…!
Team Udayavani, May 19, 2019, 6:20 AM IST
ಹೆಮ್ಮಾಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಕಟ್ಟುವಿನಲ್ಲಿರುವ ಅರಳಿಕೆರೆಯ ಹೂಳೆತ್ತದೇ ಹಲವು ವರ್ಷಗಳೇ ಆಗಿರುವುದರಿಂದ ಈಗ ಈ ಕೆರೆ ನೀರಿಲ್ಲದೆ ಬತ್ತಿ ಹೋಗಿದೆ. ಪಂಚಾಯತ್ ಈ ಬಾರಿಯಾದರೂ ಪುನಶ್ಚೇತನಗೊಳಿಸಿದಲ್ಲಿ, ಮುಂದಿನ ವರ್ಷಕ್ಕಾದರೂ ಇದರ ಪ್ರಯೋಜನ ಆಗಬಹುದು ಎನ್ನುವುದು ಈ ಭಾಗದ ರೈತರ ಅಭಿಪ್ರಾಯ.
ಹೆಮ್ಮಾಡಿ ಗ್ರಾಮದ ಕಟ್ಟುವಿನಲ್ಲಿರುವ ಈ ಅರಳಿಕೆರೆ ಇಲ್ಲಿನ ಸುಮಾರು 60- 70ಕ್ಕೂ ಹೆಚ್ಚಿನ ರೈತರ ಕೃಷಿ ಚಟುವಟಿಕೆಗಳಿಗೆ ನೀರುಣಿಸುತ್ತಿತ್ತು. ಆದರೆ ಈ ಬಾರಿ ಜನವರಿ- ಫೆಬ್ರವರಿಯಲ್ಲೇ ನೀರಿಲ್ಲದೆ ಬರಿದಾಗಿದೆ.
ಸುಮಾರು 15ರಿಂದ 20 ಎಕ್ರೆ ಕೃಷಿ ಪ್ರದೇಶಕ್ಕೆ ಈ ಕೆರೆಯೇ ವರದಾನ. ಆದರೆ ಕಳೆದ ಹಲವು ವರ್ಷಗಳಿಂದ ಈ ಕೆರೆಯ ಹೂಳೆತ್ತದ ಕಾರಣ, ಈಗ ಬತ್ತಿಯಾಗಿದೆ.
ಪುನಶ್ಚೇತನಕ್ಕೆ ಆಗ್ರಹ
ಕಟ್ಟುವಿನಲ್ಲಿ ತೋಟ, ಸೇವಂತಿಗೆ, ಇನ್ನಿತರ ತರಕಾರಿ ಕೃಷಿಗೆ ಇದೇ ಕೆರೆಯ ನೀರು ಆಧಾರವಾಗಿತ್ತು. ಇದನ್ನೇ ನಂಬಿಕೊಂಡು ಅನೇಕ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಕೆರೆಯ ಹೂಳೆತ್ತಿರುವುದು ಸುಮಾರು 10 ವರ್ಷಗಳ ಹಿಂದೆಯಾಗಿದ್ದು, ಕಳೆದ ವರ್ಷ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 1 ಲಕ್ಷ ರೂ. ಅನ್ನು ಹೆಮ್ಮಾಡಿ ಪಂಚಾಯತ್ ವತಿಯಿಂದ ಈ ಕೆರೆಯ ಹೂಳೆತ್ತಲು ಮೀಸಲಿಡಲಾಗಿತ್ತು. ಆದರೆ ಈ ಕೆರೆಯ ಬದು (ತಡೆಗೋಡೆ) ಸರಿಯಿಲ್ಲದ ಕಾರಣ, ಅದನ್ನು ಮೊದಲು ಸರಿ ಮಾಡಿಕೊಂಡು ಅನಂತರ ಹೂಳೆತ್ತುವ ನಿರ್ಧಾರ ಮಾಡಲಾಗಿತ್ತು. ಬದು ನಿರ್ಮಿಸಲು ಸುಮಾರು 4-5 ಲಕ್ಷ ರೂ. ಅಗತ್ಯವಿದ್ದು, ಈ ಕೆರೆಯ ಪುನಶ್ಚೇತನ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.
ಕೆರೆ ಹೂಳೆತ್ತಲಿ
ಈ ಕೆರೆಯಲ್ಲಿ ನೀರಿದ್ದರೆ ಇಲ್ಲಿನ ಬಾವಿಗಳಲ್ಲಿಯೂ ನೀರು ಬತ್ತಿ ಹೋಗುವುದಿಲ್ಲ. ಆದರೆ ಈಗ ಈ ಕೆರೆಯ ನೀರು ಬತ್ತಿ ಹೋಗಿದ್ದು, ಬಾವಿಯಲ್ಲೂ ನೀರಿಲ್ಲ. ಪಂಚಾಯತ್‌ಗೆ ಈ ಬಗ್ಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಒಂದು ಬಾರಿ ಹೂಳೆತ್ತಿ, ತಡೆಗೋಡೆ ನಿರ್ಮಿಸಿದರೂ, ಅದು ಸಮರ್ಪಕವಾಗಿ ಕಾಮಗಾರಿ ನಡೆಸದ ಕಾರಣ ಕುಸಿದಿದೆ. ಈ ಬಾರಿಯಾದರೂ ಪುನಶ್ಚೇತನ ಮಾಡಲು ಮುಂದಾಗಲಿ
– ಅರುಣ್ ಕಟ್ಟು, ಕೃಷಿಕರು
ಪ್ರಸ್ತಾವನೆಯಿದೆ
ಕೆರೆಯ ಹೂಳೆತ್ತುವ ಕುರಿತು ಈ ಬಗ್ಗೆ ಈಗಾಗಲೇ ಪಂಚಾಯತ್ ವತಿಯಿಂದ ಕ್ರಿಯಾ ಯೋಜನೆಯಲ್ಲಿ ಪಟ್ಟಿ ಮಾಡಿ, ಪ್ರಸ್ತಾವನೆ ಕಳುಹಿಸಲಾಗಿದೆ. ಇನ್ನು ಸರಕಾರದ ಮಟ್ಟದಲ್ಲಿ ಇದು ಮುಂದುವರಿಯಬೇಕಾಗಿದೆ. ಈಗಾಗಲೇ ಕೆಲವು ಕೆರೆಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತಲು ಅನುದಾನ ಮೀಸಲಿರಿಸಲಾಗಿದೆ.
– ಮಂಜಯ್ಯ ಬಿಲ್ಲವ, ಪಿಡಿಒ ಹೆಮ್ಮಾಡಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.