ಶಿಲಾನ್ಯಾಸ ನಡೆದು ಮೂರು ವರ್ಷವಾದರೂ ರಸ್ತೆಗೆ ಕಾಮಗಾರಿ ಭಾಗ್ಯವಿಲ್ಲ!
Team Udayavani, Aug 29, 2018, 1:35 AM IST
ಬೆಳ್ಮಣ್: ಮುಂಡ್ಕೂರು ಗ್ರಾಮ ಪಂಚಾಯತ್‌ನ ವ್ಯಾಪ್ತಿಯ ಸಂಕಲಕರಿಯ – ಪೊಸ್ರಾಲು ದೇಗುಲ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನಡೆದು ಮೂರೂವರೆ ವರ್ಷಗಳೇ ಕಳೆದಿವೆ. ಆದರೆ, ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಪೊಸ್ರಾಲು ದೇಗುಲಕ್ಕೆ ಹತ್ತಿರದ ರಸ್ತೆ ಸಂಕಲಕರಿಯದಿಂದ ಐತಿಹಾಸಿಕ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ಈ ಉದ್ದೇಶಿತ ರಸ್ತೆ ಹತ್ತಿರದ ಸಂಪರ್ಕ ಕಲ್ಪಿಸುತ್ತದೆ. ಇಲ್ಲವಾದರೆ 10ರಿಂದ 15 ಕಿ.ಮೀ. ಸುತ್ತಿ ಬಳಸಿ ಹೋಗಬೇಕು. ಈ ಹಿನ್ನೆಲೆಯಲ್ಲಿ ಈ ರಸ್ತೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಜತೆಗೆ ಪಂಚಾಯತ್ ಅನುದಾನದಿಂದ 1 ಲಕ್ಷ ರೂ. ಪಡೆದು ಮೋರಿಗಳ ನಿರ್ಮಾಣ ಮತ್ತು ಕಚ್ಚಾರಸ್ತೆ ನಿರ್ಮಾಣವಾಗಿತ್ತು. ಈ ರಸ್ತೆ ನಿರ್ಮಾಣಗೊಂಡರೆ ಸಂಕಲಕರಿಯದಿಂದ ಮೂಡಬಿದಿರೆಗೂ ಹತ್ತಿರವಾಗಲಿದೆ. ಈ ರಸ್ತೆಯ ಮೂಲಕ ಸಾಗಿದರೆ ಮುಕ್ಕಡಪ್ಪು ಮಾರ್ಗವಾಗಿ ಕಡಂದಲೆಗೆ ಸಂಧಿಸುವ ಉತ್ತಮ ರಸ್ತೆ ಸಂಪರ್ಕವೂ ಇದೆ.
ಜನ ಜಮೀನು ಬಿಟ್ಟುಕೊಟ್ಟಿದ್ದರು
ಈ ರಸ್ತೆಗಾಗಿ ಕಲ್ಲಾಡಿ, ಉಗ್ಗೆದಬೆಟ್ಟು, ಪೆರ್ಗೊಟ್ಟು, ಪೇರುಗುತ್ತು, ಪೊಸ್ರಾಲು ಭಾಗದ ಜನ ರಸ್ತೆ ನಿರ್ಮಾಣವಾಗುತ್ತದೆ ಎಂಬ ಆಶಯದಿಂದ ಸ್ವಯಂ ಇಚ್ಛೆಯಿಂದ ಜಮೀನು ಬಿಟ್ಟು ಕೊಟ್ಟಿದ್ದರು.
ವಿಶೇಷ ಅನುದಾನದ ನಿರೀಕ್ಷೆ
ಅಂದು ಶಾಸಕ ಸುನಿಲ್ ಕುಮಾರ್ ಅವರು ರಸ್ತೆಗೆ ಶಿಲಾನ್ಯಾಸ ನೆರವೇರಿಸಿದ್ದರು ಜಮೀನು ಬಿಟ್ಟುಕೊಟ್ಟವರನ್ನೂ ಗೌರವಿಸಲಾಗಿತ್ತು. ಬಳಿಕ ಗ್ರಾಮ ಸಡಕ್‌ನಲ್ಲಿ 1 ಕೋಟಿ ರೂ. ಅನುದಾನವೂ ಮಂಜೂರಾಗಿತ್ತು. ಆದರೆ ಜನಸಂಖ್ಯೆ ಕೊರತೆ ಕಾರಣ ಅನುದಾನ ಹಿಂದೆ ಹೋಗಿತ್ತು. ಈಗ ಮತ್ತೆ ರಸ್ತೆಗಾಗಿ ಜನರ ಆಗ್ರಹವಿದ್ದು, ಶಾಸಕರು ವಿಶೇಷ ಅನುದಾನ ಕಲ್ಪಿಸುವ ಭರವಸೆ ಇದೆ.
ಕಿರು ಸೇತುವೆ ಬೇಕಾಗಿದೆ
ಪೆರ್ಗೊಟ್ಟು ಬಳಿ ನೀರಿನ ಒರತೆ ಇರುವ ಗದ್ದೆಗಳನ್ನು ಎತ್ತರ ಪಡಿಸುವುದರ ಜತೆ ಕಾಲುವೆಗೆ ಕಿರು ಸೇತುವೆಯ ನಿರ್ಮಾಣದ ಅಗತ್ಯವೂ ಇದೆ. ಈ ರಸ್ತೆಗೆ ಹಿಂದಿನ ಅಂದಾಜು ಪಟ್ಟಿ ಪ್ರಕಾರ 1 ಕೋಟಿ ರೂ. ಗೂ ಮಿಕ್ಕಿ ಬೇಕಾಗುತ್ತದೆ.
ಪ್ರಯತ್ನ ಪ್ರಗತಿಯಲ್ಲಿದೆ
ರಸ್ತೆ ಬಗ್ಗೆ ಜನರ ಆಗ್ರಹವಿತ್ತು. ವಿನಂತಿ ಮೇರೆಗೆ ಜನರು ಜಮೀನು ಕೂಡ ಬಿಟ್ಟಿದ್ದರು. ಮುಂದೆ ಹೊಸ ರಸ್ತೆ ನಿರ್ಮಾಣಗೊಳ್ಳಲಿದೆ. ಕಿರು ಸೇತುವೆ ಬೇಕಾಗಿದ್ದು ನೀರಿನ ಒರತೆ ಇರುವ ಜೌಗು ಪ್ರದೇಶಗಳನ್ನು ಎತ್ತರಗೊಳಿಸಿ ರಸ್ತೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಗೂ ಮಿಕ್ಕಿ ಅನುದಾನದ ಅಗತ್ಯ ಇದೆ. ಪ್ರಯತ್ನ ಪ್ರಗತಿಯಲ್ಲಿದೆ.
– ಸತ್ಯಶಂಕರ ಶೆಟ್ಟಿ, ಮುಂಡ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ
ಸಹಕಾರ ಬೇಕು
ಪಂಚಾಯತ್‌ನಿಂದ ಇಷ್ಟು ದೊಡ್ಡ ಮೊತ್ತದ ಅನುದಾನ ಹೊಂದಿಸಲು ಅಸಾಧ್ಯವಾದ್ದರಿಂದ ಶಾಸಕರ ಸಹಿತ ಇತರ ಜನಪ್ರತಿನಿಧಿಗಳ ಸಹಕಾರ ಕೇಳಲಾಗುವುದು.
– ಶುಭಾ ಪಿ. ಶೆಟ್ಟಿ, ಮುಂಡ್ಕೂರು ಗ್ರಾ.ಪಂ.ಅಧ್ಯಕ್ಷೆ
— ಶರತ್ ಶೆಟ್ಟಿ, ಬೆಳ್ಮಣ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.