ಮರಳಿ ಬರಲಿಲ್ಲ ಉತ್ತರ ಕರ್ನಾಟಕ ಮಂದಿ; ಪಿಯುಸಿ ದಾಖಲಾತಿಯಲ್ಲಿ ಇಳಿಮುಖ
Team Udayavani, Nov 9, 2020, 5:40 AM IST
ಉಡುಪಿ: ಲಾಕ್‌ಡೌನ್ ಸಂದರ್ಭ ತಮ್ಮ ಊರಿಗೆ ತೆರಳಿದ್ದ ಉತ್ತರ ಕರ್ನಾಟಕ ಸಹಿತ ಅನ್ಯ ಜಿಲ್ಲೆಗಳ ಬಹುತೇಕ ಕಾರ್ಮಿಕರು ಮರಳಿ ಬಾರದೆ ಇರುವುದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಪಿಯುಸಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಇಳಿಮುಖವಾಗಿದೆ.
ಉದ್ಯೋಗ ಅರಸಿಕೊಂಡು ಕರಾವಳಿಗೆ ಬಂದ ಉತ್ತರ ಕರ್ನಾಟಕದ ವಿವಿಧ ಭಾಗಗಳ ಜನರು ಇಲ್ಲಿಯೇ ಜೀವನ ಸಾಗಿಸುತ್ತಿದ್ದರು. ಅವರ ಮಕ್ಕಳು ಕೂಡ ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಕೊರೊನಾ ಬಂದಾಗ ಊರಿಗೆ ತೆರಳಿದವರು ಮರಳಲು ಮನಮಾಡುತ್ತಿಲ್ಲ.
ಉಡುಪಿ ಶೇ. 40, ದ.ಕ.: ಶೇ. 25ರಷ್ಟು ಇಳಿಮುಖ
ಉಡುಪಿ ಮತ್ತು ದ.ಕ. ಜಿಲ್ಲೆಯ ಕಾಲೇಜುಗಳಲ್ಲಿ ಉತ್ತರ ಕರ್ನಾಟಕ ಕಾರ್ಮಿಕರ ಮಕ್ಕಳ ದಾಖಲಾತಿ ಪ್ರಮಾಣ ಅನುಕ್ರಮವಾಗಿ ಶೇ. 40 ಮತ್ತು ಶೇ. 25ರಷ್ಟು ಕಡಿಮೆಯಾಗಿದೆ. ಉಡುಪಿಯ ಎರಡು ಮೊರಾರ್ಜಿ ದೇಸಾಯಿ ವಸತಿ ಪಿ.ಯು. ಕಾಲೇಜು
ಸಹಿತ 44 ಸರಕಾರಿ ಪ.ಪೂ. ಕಾಲೇಜು
ಗಳಿದ್ದರೆ 18 ಅನುದಾನಿತ ಪ.ಪೂ. ಕಾಲೇಜುಗಳಿವೆ. ದ.ಕ.ದಲ್ಲಿ 2 ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಸಹಿತ 54 ಸರಕಾರಿ ಪ.ಪೂ. ಕಾಲೇಜುಗಳಿವೆ. 42 ಅನುದಾನಿತ ಪ.ಪೂ. ಕಾಲೇಜುಗಳಿವೆ. ಎಲ್ಲ ಕಡೆ ಇದರ ಪರಿಣಾಮ ಕಂಡುಬರುತ್ತಿದೆ ಎನ್ನುತ್ತಾರೆ ಶಿಕ್ಷಣ ಅಧಿಕಾರಿಗಳು.
2 ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ!
ಅವಿಭಜಿತ ದ.ಕ. ಜಿ ಪುನೀತ್ ಸಾಲ್ಯಾನ್‌ಯ ಖಾಸಗಿ ಪ.ಪೂ. ಕಾಲೇಜುಗಳಲ್ಲಿ ಪ್ರವೇಶಕ್ಕೆ ಮಿಶ್ರ ಪ್ರತಿಕ್ರಿಯೆ ಇದೆ. ಲಭ್ಯ ಮಾಹಿತಿ ಪ್ರಕಾರ ಉಡುಪಿ ಎರಡು ಖಾಸಗಿ ಕಾಲೇಜುಗಳಲ್ಲಿ ಯಾವುದೇ ದಾಖಲಾತಿ ಆಗಿಲ್ಲ. ದ.ಕ.ದಲ್ಲಿಯೂ ಕೆಲವು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಶೇ. 50ರಷ್ಟು ಮಾತ್ರ ದಾಖಲಾತಿಯಾಗಿದೆ. ದ್ವಿತೀಯ ಪಿಯುಸಿಗೆ ಸೇರ್ಪಡೆಯೂ ಕುಸಿತ ಅನ್ಯ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ತೇರ್ಗಡೆಯಾಗಿದ್ದರೂ ಕೊರೊನಾ ಕಾರಣದಿಂದಾಗಿ ಊರಿಗೆ ಹೋದವರು ಅಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಲು ಬಯಸಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಗೂ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ.
ಹೊರಜಿಲ್ಲೆಗಳ ವಿದ್ಯಾರ್ಥಿಗಳು ಅಲ್ಲಿಯೇ ಶಿಕ್ಷಣ ಮುಂದುವರಿಸಲು ನಿರ್ಧರಿಸಿರುವುದು ಕರಾವಳಿಯ ಕಾಲೇಜುಗಳಿಗೆ ಹೊಡೆತ ನೀಡಿದೆ. ಕೆಲವು ಪಿಯು ಕಾಲೇಜುಗಳಲ್ಲಿ ಶೂನ್ಯ ದಾಖಲಾತಿಯ ಬಗ್ಗೆ ಪ.ಪೂ. ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಗೆ ವರದಿ ಮಾಡಿ ಮುಂದಿನ ಕ್ರಮಕ್ಕಾಗಿ ಸಲಹೆ ಪಡೆದುಕೊಳ್ಳುತ್ತೇವೆ.
– ಭಗವಂತ ಕಟ್ಟೇಮನಿ, ಮೊಹಮ್ಮದ್ ಇಮ್ತಿಯಾಜ್, ಉಡುಪಿ, ದ.ಕ., ಡಿಡಿಪಿಯು
ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.