ಮನೆ ನಿರ್ಮಿಸದಿದ್ದವರಿಂದ ನಿವೇಶನ ಹಿಂಪಡೆಯಲು ಸೂಚನೆ
ಕಾರ್ಕಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆ
Team Udayavani, Sep 10, 2019, 5:57 AM IST
ಕಾರ್ಕಳ (ಅಜೆಕಾರು): ಸರಕಾರದಿಂದ ನಿವೇಶನ ಪಡೆದು ಹಲವು ವರ್ಷ ಗಳಾದರೂ ಮನೆ ನಿರ್ಮಿಸದೇ ಇರುವ ಪಲಾನುಭವಿಗಳ ನಿವೇಶನವನ್ನು ಹಿಂಪಡೆದು ನಿವೇಶನ ರಹಿತರಿಗೆ ನೀಡುವಂತೆ ಆಗ್ರಹ ಕಾರ್ಕಳ ತಾ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿಬಂತು.
ಸೆ. 9 ರಂದು ತಾ.ಪಂ. ಸಾಮರ್ಥ್ಯ ಸೌಧದಲ್ಲಿ ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯರು
ನಿವೇಶನ ಪಡೆದ ಫಲಾನುಭವಿಗಳು ಮನೆ ಮಾಡುವುದಿಲ್ಲ. ಕೆಲವರು ಆ ನಿವೇಶನ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಈ ಕುರಿತು ಗ್ರಾಮಕರಣಿಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಈ ಬಗ್ಗೆ ಹಿಂದಿನ ಸಭೆಯಲ್ಲಿಯೇ ಸೂಚಿಸಲಾಗಿದ್ದರೂ ಕಂದಾಯ ಅಧಿಕಾರಿ ಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಧ್ಯಕ್ಷೆ ಮಾಲಿನಿ ಶೆಟ್ಟಿ ಸಭೆಯ ಗಮನಕ್ಕೆ ತಂದರು.
ರಸ್ತೆ ಬದಿಯಲ್ಲಿ ಮರದ ದಿಮ್ಮಿಗಳು ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿ ಗೊಳಿಸುವ ಸಂದರ್ಭ ರಸ್ತೆಯಂಚಿನ ಮರಗಳನ್ನು ತೆರವುಗೊಳಿಸಿ ದಿಮ್ಮಿಗಳನ್ನು ರಸ್ತೆ ಯಂಚಿನಲ್ಲಿಯೇ ಉಳಿಸಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಅಪಘಾತ ನಡೆಯು ತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಮನವಿ ನೀಡಿದ್ದರೂ ಯಾವುದೇ ಸ್ಪಂದನೆ ಇಲ್ಲ ಎಂದು ಸದಸ್ಯ ಚಂದ್ರಶೇಖರ ಶೆಟ್ಟಿ ಹೆಬ್ರಿ ಹೇಳಿದರು.
108 ಆ್ಯಂಬುಲೆನ್ಸ್ ಗೆ ಆಗ್ರಹ
ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಕಳೆದ ನಾಲ್ಕು ತಿಂಗಳಿನಿಂದ 108 ಆ್ಯಂಬುಲೆನ್ಸ್ ಸ್ಥಗಿತಗೊಂಡಿದ್ದು ಕೂಡಲೇ ಅಜೆಕಾರು ಕೇಂದ್ರಿತವಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸುವಂತೆ ಸದಸ್ಯ ಹರೀಶ್ ನಾಯಕ್ ಅಜೆಕಾರು ಆರೋಗ್ಯಾಧಿಕಾರಿ ಯವರಿಗೆ ಸೂಚಿಸಿದರು. ಈ ಬಗ್ಗೆ ಮಾತನಾಡಿದ ಅವರು ಅಜೆಕಾರಿನ 108 ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿದ್ದು ಈಗ ಹತ್ತಿರದ ಕೇಂದ್ರಗಳಿಂದ 108ರ ಸೇವೆ ಪಡೆಯಲಾಗುತ್ತಿದೆ.ಅಜೆಕಾರು ಕೇಂದ್ರಕ್ಕೆ ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾ.ಪಂ.ಕೆಡಿಪಿಗೆ ತಾ.ಪಂ.ಸದಸ್ಯರ ಪರಿಗಣನೆಗೆ ಆಗ್ರಹ
ಗ್ರಾ.ಪಂ.ಗಳಲ್ಲಿ ನಡೆಯುವ ಕೆಡಿಪಿ ಸಭೆಗೆ ಸ್ಥಳೀಯ ತಾ.ಪಂ. ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಎಲ್ಲ ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರದ ಗಮನಕ್ಕೆ ತರಲಾಗುವುದು ಎಂದು ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಹರ್ಷ ಕೆ.ಬಿ. ಹೇಳಿದರು.
ಬೈಲೂರು ಪಳ್ಳಿ ರಸ್ತೆ
ಬೈಲೂರು ಪಳ್ಳಿ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭಿಸಿ ವರ್ಷಗಳೂ ಕಳೆದರೂ ಕಾಮಗಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ಕಳೆದ ಸಭೆಯಲ್ಲಿಯೂ ಪ್ರಸ್ತಾವಿಸಿದ್ದರೂ ಇನ್ನೂ ಕಾಮಗಾರಿ ಆರಂಭ ಗೊಂಡಿಲ್ಲ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಜಿ.ಪಂ. ಸಭೆಯಲ್ಲಿಯೂ ಪ್ರಸ್ತಾವಗೊಂಡಿರುವ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.
ಆಯುಷ್ಮಾನ್ ಆರೋಗ್ಯ ಯೋಜನೆಯಲ್ಲಿ ಹಲವು ಗೊಂದಲಗಳಿದ್ದು ಇದನ್ನು
ಸರಿಪಡಿಸುವ ನಿಟ್ಟಿನಲ್ಲಿ ಮಾಹಿತಿ ಸಭೆಯನ್ನು ಆರೋಗ್ಯಾಧಿಕಾರಿಗಳು ನಡೆಸುವಂತೆ ಸದಸ್ಯ ಹರೀಶ್ ನಾಯಕ್ ಅಜೆಕಾರು ಹೇಳಿದರು. ಕೆಲವೆಡೆ ಆಯುಷ್ಮಾನ್ ಕಾರ್ಡ್ ಮಾಡಿಕೊಡಲಾಗು ತ್ತಿದ್ದು ಇದು ಅಸಮರ್ಪಕತೆಯಿಂದ ಕೂಡಿರುವುದರಿಂದ ತುರ್ತು ಸಂದರ್ಭ ಗಳಲ್ಲಿ ಪ್ರಯೋಜನಕ್ಕೆ ಬಾರದಂತಾಗಿದೆ. ಈ ಬಗ್ಗೆ ಆರೋಗ್ಯ ಇಲಾಖಾಧಿಕಾರಿಗಳು ಗಮನಹರಿಸಬೇಕಾಗಿದೆ ಎಂದವರು ತಿಳಿಸಿದರು.
ಇದಕ್ಕೆ ಕೈಗೊಳ್ಳುವ ಭರವಸೆ ಆರೋಗ್ಯಾ ಧಿಕಾರಿ ನೀಡಿದರು. ಸಭೆಯ ಆರಂಭದಲ್ಲಿ ಎಸೆಸೆಲ್ಸಿಯಲ್ಲಿ ತಾ|ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶ್ರುತಾ ಶೆಟ್ಟಿ, ಮಹೇಶ್, ಪ್ರಾಪ್ತಿ ಶೆಟ್ಟಿ ಯವರನ್ನು ಸಮ್ಮಾನಿಸಲಾಯಿತು. ಉಪಾಧ್ಯಕ್ಷ ಗೋಪಾಲ್ ಮೂಲ್ಯ, ಸ್ಥಾಯೀ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಹರ್ಷ ಕೆ.ಬಿ., ನಿತಿನ್ ಉಪಸ್ಥಿತರಿದ್ದರು. ತಾ. ಪಂ.ಕಾರ್ಯನಿರ್ವಹಣಾಧಿಕಾರಿ ಹರ್ಷ ಸ್ವಾಗತಿಸಿ ವಂದಿಸಿದರು.
ವಿದ್ಯುತ್ ಕಂಬ ತೆರವಿಗೆ ಮನವಿ
ಚಾರಾ ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಈ ಭಾಗದಲ್ಲಿರುವ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ತೆರವುಗೊಳಿಸುವಂತೆ ಮೆಸ್ಕಾಂ ಇಲಾಖೆಗೆ ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದರೂ ತೆರವುಗೊಂಡಿಲ್ಲ ಎಂದು ಪಂಚಾಯತ್ ಅಧ್ಯಕ್ಷ ಸಂದೀಪ್ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.