ಈಗಲೇ ನದಿಗಳಲ್ಲಿ ನೀರಿಲ್ಲ, ಬೇಸಗೆ ಹೇಗೆ?


Team Udayavani, Sep 18, 2018, 12:36 PM IST

swarna.png

ಪಶ್ಚಿಮ ಘಟ್ಟ  ನಾಶದ ಒಂದೊಂದೇ ಪರಿಣಾಮ ಗೋಚರಕ್ಕೆ ಬರುತ್ತಿದೆ. ಕರಾವಳಿಯಂಥ ಭಾಗದಲ್ಲಿ ಸೆಪ್ಟಂಬರ್‌ನಲ್ಲೇ ಬಿಸಿಲು ಹೆಚ್ಚಾಗಿ, ನವೆಂಬರ್‌ ಸುಮಾರಿನಲ್ಲೇ ಬೇಸಗೆಯ ಬವಣೆ ಆರಂಭವಾಗುವ ಆತಂಕ ಎದುರಾಗಿದೆ. ಇದ್ದ ಮರಗಳನ್ನೆಲ್ಲ ಬೃಹತ್‌ ಯೋಜನೆಗೆ ಕಡಿದುರುಳಿಸಿ ಕುರುಚಲು ಗಿಡಗಳನ್ನೇ ಕಾಡೆಂದು ಬಿಂಬಿಸುವ ಪ್ರಯತ್ನ ನಡೆದಿರುವುದೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಉಡುಪಿ: ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಕೇರಳ, ಕೊಡಗು, ದ.ಕ. ಜಿಲ್ಲೆಯ ಆಂಶಿಕ ಭಾಗದಲ್ಲಿ ವಿಪರೀತ ಹಾನಿಯಾಗಿತ್ತು. ದ.ಕ., ಕೊಡಗು ಜಿಲ್ಲೆಗಿಂತ ಹೆಚ್ಚು ಮಳೆ ಉಡುಪಿ ಜಿಲ್ಲೆಯಲ್ಲಿ ಸುರಿಯಿತು. ಕರಾವಳಿ ಭಾಗದಲ್ಲಿ ಈ ಬಾರಿ ಕುಡಿಯುವ ನೀರಿಗೇ ತತ್ವಾರ ಉಂಟಾಗುವ ಸ್ಥಿತಿಯ ಮುನ್ಸೂಚನೆ ಇದೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 3,737 ಮಿ.ಮೀ. ಮಳೆಯಾಗಿದೆ. ಇದು ವಾಡಿಕೆಯ ಮಳೆಗಿಂತ ಕೇವಲ 146 ಮಿ.ಮೀ. ಕಡಿಮೆ. ಜಿಲ್ಲೆಯಲ್ಲಿ ಈ ಬಾರಿ ಒಂದೇ ಸಮನೆ ಮೂರು ಬಾರಿ ದೊಡ್ಡ ಮಟ್ಟದ ಮಳೆ ಸುರಿಯಿತು. ಇದರಿಂದ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಯಿತು. ಆದರೆ ಈಗ ಕೇರಳದಂತೆಯೇ ಕರಾವಳಿಯಲ್ಲೂ ನದಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿದಿದೆ. 

ಈಗ ಸೆಪ್ಟಂಬರ್‌ನಲ್ಲೂ ನವೆಂಬರ್‌ನ ಸ್ಥಿತಿ ನದಿಗಳಲ್ಲಿವೆ. ಒಂದು ತಿಂಗಳಿನಿಂದ ಮಳೆ ಬಂದಿಲ್ಲ. ಕಳೆದ ವರ್ಷ ಸ್ವರ್ಣಾನದಿಯ ಹಿರಿಯಡಕ ಭಾಗದಲ್ಲಿ 50 ಅಶ್ವಶಕ್ತಿ ಮೋಟರಿನಷ್ಟು ನೀರು ಹರಿಯುತ್ತಿದ್ದರೆ ಈಗ 5-10 ಅಶ್ವಶಕ್ತಿಯಷ್ಟು ಮಾತ್ರ ಹರಿಯುತ್ತಿದೆ. ಮನೆ ಸಮೀಪದ ಸಣ್ಣ ತೋಡುಗಳೂ ಒಣಗಿವೆ ಎನ್ನುತ್ತಾರೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಸುರೇಶ ನಾಯಕ್‌ ಮುಂಡುಜೆ ಅವರು.

ಕಾಂಕ್ರೀಟ್‌ ಕಾಮಗಾರಿಯೂ ಕಾರಣ?
ಒಂದೇ ಸಮನೆ ಮಳೆ ಬಂದ ಕಾರಣ ನೀರು ಇಂಗದೆ ಸಮುದ್ರಕ್ಕೆ ಹೋದದ್ದು, ಅನಂತರ ನಿರಂತರ ಮಳೆ ಬಾರದೆ ಇದ್ದದ್ದು ನದಿಗಳಲ್ಲಿ ನೀರಿನ ಹರಿಯುವಿಕೆ ಕಡಿಮೆಯಾಗಲು ಕಾರಣ. ಬಾವಿಗಳಲ್ಲಿಯೂ ನೀರು ಇಳಿಯುತ್ತಿದೆ. ಎಲ್ಲೆಲ್ಲಿ ಕಾಂಕ್ರೀಟ್‌ ರಚನೆಗಳು ಆಗುತ್ತಿವೆಯೋ ಅಲ್ಲಿ ಎಷ್ಟೇ ಮಳೆ ಬಂದರೂ ನೀರು ಇಂಗದು. ಹಿಂದೆ ಮನೆಯಂಗಳಕ್ಕೆ ಸಿಮೆಂಟ್‌ ಹಾಕುತ್ತಿರಲಿಲ್ಲ. ಇದು ಬಾವಿಯ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗುತ್ತಿತ್ತು. ಈಗ ಮನೆ ಅಂಗಳದಿಂದ ಹಿಡಿದು ಪ್ರತಿ ರಸ್ತೆಗೂ ಕಾಂಕ್ರೀಟ್‌ ಹಾಕಲಾಗುತ್ತಿದೆ. ವಿಶೇಷವಾಗಿ ಉಡುಪಿಯಂಥ ನಗರ ಪ್ರದೇಶಗಳಲ್ಲಿ 400 ಮಿ.ಮೀ. ಮಳೆ ಬಂದರೂ ಕಾಂಕ್ರೀಟ್‌ ರಸ್ತೆಯಡಿ ನೀರಿನ ತೇವಾಂಶವಿರದು. ಇದರಿಂದ ನಗರದಲ್ಲಿ ವಿಶೇಷವಾಗಿ ನೀರಿನ ಕೊರತೆ ಹೆಚ್ಚಾಗುತ್ತಿದೆ. ನಗರ ಸಂಸ್ಥೆಗಳು ನೀರು ಕೊಡುತ್ತವೆ ಎಂದು ಕೆಲವರು ಬಾವಿ ಮುಚ್ಚಿದರು. ಇದೇ ಹೊತ್ತಿಗೆ ಒಳಚರಂಡಿ, ತೆರೆದ ಚರಂಡಿಯಂಥ ಸಮಸ್ಯೆಯಿಂದ ಬಾವಿಯ ನೀರೂ ಹಾಳಾಗಿ ಬಾವಿ ಮುಚ್ಚಲು ಕಾರಣ ಒದಗಿಸಿತು. ಈಗ ಸರಕಾರಕ್ಕೂ ನೀರು ಪೂರೈಸುವುದು ಕಷ್ಟವಾಗುತ್ತಿದೆ.

ಬೇಸಗೆಯಂತೆ ಬಿಸಿಲು
ಸ್ವರ್ಣಾ ನದಿಯಲ್ಲಿ ನೀರಿನ ಒಳ ಹರಿವು ಜನವರಿವರೆಗೆ ಇರುತ್ತಿತ್ತು. ಈಗಿನ ಸ್ಥಿತಿ ಮುಂದುವರಿದರೆ ಜನವರಿಯಲ್ಲೇ ಕುಡಿಯುವ ನೀರಿನ ಕೊರತೆ ಆದೀತೆಂಬ ಭಯ ಕಾಡುತ್ತಿದೆ. ಒಂದು ವಾರ ದಿಂದ ಎಪ್ರಿಲ್‌-ಮೇ ತಿಂಗಳಂತೆ ಬಿಸಿಲಿದೆ. ಈ ಕಾರಣದಿಂದಲೂ ನದಿಗಳ ನೀರು ವೇಗವಾಗಿ ಆವಿಯಾಗುತ್ತಿದೆ ಎನ್ನಲಾಗುತ್ತಿದೆ. ಈಗಲೇ ಬಿಸಿಲು ಹೀಗಿದ್ದರೆ ಎಪ್ರಿಲ್‌ ಕಥೆ ಏನು ಎಂಬುದು ಜನರ ಪ್ರಶ್ನೆ. ಸುಮಾರು 30-40 ವರ್ಷಗಳ ಹಿಂದೆ ಇದೇ ಸಮಯ ಬೆಟ್ಟು ಗದ್ದೆಗಳು ಒಣಗಿದ್ದವು. ಈಗ ಅದಕ್ಕಿಂತ ಭೀಕರ ಸ್ಥಿತಿ ಎದುರಾಗಿದ್ದು, ರಸ್ತೆ ಬದಿಯ ಹುಲ್ಲುಗಳೂ ಒಣಗಿವೆ.

ಒಂದೇ ಸಮನೆ ಮಳೆ ಬಂದು ಹೋದುದೇ ಇದಕ್ಕೆ ಕಾರಣ. ಕೆಲವೇ ದಿನಗಳಲ್ಲಿ ಭಾರೀ ಮಳೆ ಬಂದ ಕಾರಣ ನೀರು ಭೂಮಿಯಲ್ಲಿ ಇಂಗಲು ಸಾಧ್ಯವಾಗದೆ ಸಮುದ್ರಕ್ಕೆ ಹರಿದುಹೋಯಿತು. ಈ ಪ್ರಾಕೃತಿಕ ಅಸಮತೋಲನಕ್ಕೆ ಪಶ್ಚಿಮ ಘಟ್ಟದ ಬೃಹತ್ತಾದ ಮರಗಳ ಅವ್ಯಾಹತ ನಾಶವೇ ಕಾರಣ. ನಮಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ನೀರು ಸಿಗುತ್ತದೆ ಎನ್ನುತ್ತಾರೆ ಪರಿಸರ ತಜ್ಞ, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಎನ್‌.ಎ. ಮಧ್ಯಸ್ಥ.

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.