ಕುತ್ಯಾರು ಆನೆಗುಂದಿ ಸಂಸ್ಥಾನಕ್ಕೆ ನರ್ಮ್ ಬಸ್: ಶಾಸಕ ಸೊರಕೆ
Team Udayavani, Jul 14, 2017, 2:40 AM IST
ಪಡುಬಿದ್ರಿ: ಕುತ್ಯಾರು ವಿಶ್ವಬ್ರಾಹ್ಮಣ ಶ್ರೀ ಜಗದ್ಗುರು ಶ್ರೀ ಆನೆಗುಂದಿ ಮಹಾಸಂಸ್ಥಾನದಲ್ಲಿ ಶ್ರೀ ಕಾಳಹಸ್ತೆಂದ್ರ ಸರಸ್ವತೀ ಶ್ರೀಗಳವರ ಚಾತುರ್ಮಾಸ್ಯ ಕಾರ್ಯಕ್ರಮವು ನಡೆಯುತ್ತಿದ್ದು ಶ್ರೀ ಕ್ಷೇತ್ರಕ್ಕಾಗಮಿಸುವ ಹೊರಗಿನ ಭಕ್ತರಿಗೆ ಅನುಕೂಲವಾಗುವಂತೆ ಈಗಾಗಲೇ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗಳ ವಿಶೇಷ ಸೌಕರ್ಯವನ್ನು ಒದಗಿಸಲಾಗಿದೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನತೆಯ ಬೇಡಿಕೆಗೆ ಪೂರಕವಾಗಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯರಿಗೆ, ಅಂಗವಿಕಲರಿಗೆ, ವಿದ್ಯಾರ್ಥಿಗಳಿಗೆ, ಬಿಪಿಎಲ್ ಕಾರ್ಡ್‌ದಾರರಿಗೆ, ಸರಕಾರಿ ನೌಕರರಿಗೆ, ಮಹಿಳೆಯರಿಗೆ ರಿಯಾಯತಿ ದರದಲ್ಲಿ ನರ್ಮ್ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದೆಂದು ಶಾಸಕರು ತಿಳಿಸಿರುವರು. ಜನರ ಅಪೇಕ್ಷೆಯಂತೆ ನರ್ಮ್ ಬಸ್‌ಗಳ ಸಂಚಾರಿ ವ್ಯವಸ್ಥೆಗೆ ಸಾರಿಗೆ ಅಧಿಕಾರಿಗಳು ಈಗಾಗಲೇ ಸರ್ವೆ ನಡೆಸಿದ್ದು ಬಸ್ಸುಗಳ ಮಂಜೂರಾತಿಗಾಗಿ ಕೆಎಸ್‌ಆರ್‌ಟಿಸಿ ನಿಗಮಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದೂ ಶಾಸಕ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.