ಉಡುಪಿ: ನರ್ಮ್ ಬಸ್ ಸ್ಥಗಿತಕ್ಕೆ ಆಗ್ರಹ
Team Udayavani, Jul 4, 2017, 3:55 AM IST
ಉಡುಪಿ: ಉಡುಪಿಗೆ ಮಂಜೂರಾಗಿರುವ ನರ್ಮ್, ಗ್ರಾಮೀಣ, ನಗರ ಸಾರಿಗೆ ಸಹಿತ ಒಟ್ಟು 55 ಸರಕಾರಿ ಬಸ್‌ಗಳ ಪರವಾನಿಗೆ ರದ್ದು ಮಾಡಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದ್ದರೂ ಆದೇಶ ಪಾಲಿಸದ ಕೆಎಸ್ಸಾರ್ಟಿಸಿ ಅಧಿಕಾರಿಗಳ ನಡೆ ವಿರೋಧಿಸಿ ಸೋಮವಾರ ಖಾಸಗಿ ಬಸ್ ಮಾಲಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಪ್ರಾದೇಶಿಕ ಸಾರಿಗೆ ಉಪ ಆಯುಕ್ತ ಎಚ್. ಗುರುಮೂರ್ತಿ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಖಾಸಗಿ ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ನೇತೃತ್ವದಲ್ಲಿ ಮನವಿ ಸಲ್ಲಿಸಿ ಶೀಘ್ರ ಆದೇಶ ಪಾಲಿಸಲು ಆಗ್ರಹಿಸಿದ್ದು, ಪ್ರಾದೇಶಿಕ ಸಾರಿಗೆ ಆಯುಕ್ತರು ಸಹ ಪಕ್ಷಪಾತಿ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಶೀಘ್ರ ಮನವಿಗೆ ಸ್ಪಂದಿಸದಿದ್ದಲ್ಲಿ ಕಾನೂನಿನ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.
4 ಬಸ್ ವಶಕ್ಕೆ
ಖಾಸಗಿ ಬಸ್ ಮಾಲಕರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಆರ್‌ಟಿಒ ಅವರು ಸೋಮವಾರ ಉಡುಪಿಯಿಂದ ಸಂಚರಿಸುತ್ತಿದ್ದ ಅಮಾಸೆಬೈಲು ಕೆಳಸಂಕ, ಹೆಬ್ರಿ ನೆಲ್ಲಿಕಟ್ಟೆ, ಬಡಗಬೆಟ್ಟು, ಪಟ್ಲ ಮಾರ್ಗದ ನಾಲ್ಕು ಬಸ್‌ಗಳನ್ನು ವಶಪಡಿಸಿಕೊಂಡರು.
ತಡೆಯಾಜ್ಞೆ ತೆರವಿಗೆ ಸರ್ವ ಪ್ರಯತ್ನ : ಪ್ರಮೋದ್
ತಡೆಯಾಜ್ಞೆ ತೆರವುಗೊಳಿಸಲು ಸಾರಿಗೆ ಸಚಿವರು, ಕೆಎಸ್ಸಾರ್ಟಿಸಿ ಅಧ್ಯಕ್ಷರು, ಆಡಳಿತ ನಿರ್ದೇಶಕರೊಂದಿಗೆ ಮಾತನಾಡಿದ್ದು ಜನಸಾಮಾನ್ಯರ ಪರವಾಗಿ ಕಾನೂನು ಸಮರವನ್ನು ಮುಂದುವರಿಸುತ್ತೇವೆ. ನಾವು ಯಾವತ್ತೂ ಜನರ ಪರವಾಗಿ ಇರುತ್ತೇವೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಜೆನರ್ಮ್ಬ ಸ್‌ಗಳನ್ನು ಜಾರಿಗೆ ತಂದೆವು. ಈಗ ಖಾಸಗಿ ಬಸ್‌ನವರು ಸರಕಾರಿ ಬಸ್ ಓಡಾಟಕ್ಕೆ ತಡೆಯಾಜ್ಞೆ ತಂದಿರುವುದು ಖಂಡನೀಯ. ಜನರಿಗೆ ಅನುಕೂಲವಾಗಲು ಖಾಸಗಿ ಬಸ್‌ನವರು ಸಹಕಾರ ನೀಡಬೇಕಿತ್ತು. ಅದನ್ನು ಬಿಟ್ಟು ತಡೆಯಾಜ್ಞೆ ತಂದಿರುವುದು ಸರಿಯಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.