ಬೋಳ ಗುಡ್ಡದಲ್ಲಿ ತ್ಯಾಜ್ಯ ಎಸೆಯುವ ಬಗ್ಗೆ ಆಕ್ಷೇಪ

Team Udayavani, Jun 27, 2019, 5:48 AM IST

bola-gudda

ಬೆಳ್ಮಣ್‌: ಮುಂಡ್ಕೂರು ಗ್ರಾ.ಪಂ.ನ ಈ ಸಾಲಿನ ಪ್ರಥಮ ಗ್ರಾಮ ಸಭೆ ಪಂಚಾಯತ್‌ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮುಂಡ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಡೆಯಿತು.

ಬೋಳದಲ್ಲಿ ತ್ಯಾಜ್ಯ ರಾಶಿ

ಪಂಚಾಯತ್‌ನ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕದ ಎಸ್‌ಎಲ್ಆರ್‌ಎಂನವರು ಬೋಳಗುಡ್ಡದಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆಂದು ಲೋಕೇಶ್‌ ಪೂಜಾರಿ ಆರೋಪಿಸಿ ವೀಡಿಯೋ ತೋರಿಸಿದರು.

ಪ್ರತಿಕ್ರಿಯಿಸಿದ ಘಟಕದ ಕಾರ್ಯ ಕರ್ತರು, ಗ್ರಾಮದ ಜನ ಮಕ್ಕಳ ಮಲವನ್ನೂ ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಕೊಡುತ್ತಿದ್ದಾರೆ. ನಾವೇನು ಮಾಡುವುದು ಎಂದು ಅಸಹಾಯಕತೆ ತೋಡಿದರು. ಈ ಬಗ್ಗೆ ಪಿಡಿಒ ಕ್ರಮ ಕೈಗೊಳ್ಳಬೇಕೆಂದು ಸತ್ಯಶಂಕರ ಶೆಟ್ಟಿ ತಿಳಿಸಿದರು.

ಸಭೆಯ ನೋಡಲ್ ಅಧಿಕಾರಿಯಾಗಿದ್ದ ತೋಟಗಾರಿಕೆ ಇಲಾಖೆಯ ಅಧಿಕಾರಿ ರಮೇಶ್‌ ಉಳ್ಳಾಗಡ್ಡಿ ಕೃಷಿ ಸಮ್ಮಾನ್‌ ಮತ್ತು ಅಂತರ್ಜಲ ಬಗ್ಗೆ ಗಂಟೆಗಟ್ಟಲೆ ಮಾಹಿತಿ ನೀಡಿ ಉಳಿದ ಇಲಾಖೆಯ ಅಧಿಕಾರಿಗಳಿಗೆ ಸಮಯದ ಅಭಾವ ಸೃಷ್ಟಿಸಿದರು.

ಇತರ ಇಲಾಖಾಧಿಕಾರಿಗಳಿಗೂ ಅವಕಾಶ ಕೊಡಿ ಎಂದು ಮುಂಡ್ಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಹೇಳಿದಾಗ ಉಳ್ಳಾಗಡ್ಡಿ ಅವರು ಮಾತು ಸ್ಥಗಿತಗೊಳಿಸಿದರು.

ಕಣ್ಣಿನ ಕ್ಯಾಂಪ್‌

ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಫೌಜಿಯಾ ಮಾತನಾಡಿ, ಪ್ರತಿ ತಿಂಗಳ 9ಕ್ಕೆ ಇನ್ನಾದಲ್ಲಿ, 18ಕ್ಕೆ ಸಚ್ಚೇರಿಪೇಟೆಯಲ್ಲಿ ವಿಶೇಷ ಕಣ್ಣಿನ ಕ್ಯಾಂಪ್‌ ನಡೆಯುತ್ತಿದೆ ಎಂದರಲ್ಲದೆ ಆಯುಷ್ಮಾನ್‌ ಕಾರ್ಡ್‌ ಬಳಕೆಯ ಬಗ್ಗೆಯೂ ಮಾಹಿತಿ ನೀಡಿದರು. ಪಂಚಾಯತ್‌ ಸದಸ್ಯರಾದ ರಘುವೀರ ಶೆಣೈ ವಿಕಲಚೇತನರ ಕಾರ್ಡ್‌ ಬಗ್ಗೆ, ಸತ್ಯಶಂಕರ ಶೆಟ್ಟಿ ಸ್ವಚ್ಛತಾ ಆಂದೋಲನದ ಬಗ್ಗೆ ಮಾಹಿತಿ ನೀಡಿದರು.

ಮಳೆಗಾಲದ ಬಳಿಕ ನಗರ -ಪಟ್ಲ ರಸ್ತೆ ಕಾಮಗಾರಿ

ಮುಲ್ಲಡ್ಕದ ಇಂದಿರಾ ನಗರ -ಪಟ್ಲ ರಸ್ತೆ ದುರವಸ್ಥೆಯ ಬಗ್ಗೆ ಗ್ರಾಮಸ್ಥರು ಗಮನ ಸೆಳೆದಾಗ ಕಾರ್ಕಳ ಶಾಸಕರ 10 ಲಕ್ಷ ರೂ. ಅನುದಾನದಲ್ಲಿ ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ನಡೆಯಲಿದೆ ಎಂದು ಪಂ. ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಹೇಳಿದರು.

ಕಾರ್ಕಳ ಗ್ರಾ. ಪೊಲೀಸ್‌ ಠಾಣೆಯ ಅಧಿಕಾರಿ ಸಂಪಾ ಶೆೆಟ್ಟಿ ಇಲಾಖೆಯ ಮಾಹಿತಿ ನೀಡಿದರು. ರಸ್ತೆ ತಿರುವು, ಇಕ್ಕೆಲಗಳನ್ನು ಸ್ವಚ್ಛತೆ, ಕಾನೂನು ಪಾಲನೆ ಬಗ್ಗೆ ತಿಳಿಸಿದರು.

ಮಾಹಿತಿ ಕೊರತೆ

ಮುಂಡ್ಕೂರು-ಜಾರಿಗೆಕಟ್ಟೆ ಸರ್ಕಲ್ನ ಸಿಸಿ ಕೆಮರಾ ಕಾರ್ಯ ನಿರ್ವಹಿಸುತ್ತಿಲ್ಲ. ಕೃಷಿ ಸಮ್ಮಾನ್‌ ಯೋಜನೆಯ ಬಗ್ಗೆ ಮಾಹಿತಿಯ ಕೊರತೆ ಇದೆ ಎಂದು ನಿವೃತ್ತ ಗ್ರಾಮ ಕರಣಿಕ ಅವಿಲ್ ಡಿ’ಸೋಜಾ ಹೇಳಿದರು. ಜೋಸೆಫ್‌ ಎಂ.ಮಿನೇಜಸ್‌, ಲೋಕೇಶ್‌, ಪ್ರಭಾಕರ ಶೆಟ್ಟಿ ಜನರ ಧ್ವನಿಯಾದರು.

ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ, ಜಿ.ಪಂ. ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ತಾ.ಪಂ. ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಪಂಚಾಯತ್‌ ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಸುಧಾಕರ್‌ ಉಪಸ್ಥಿತರಿದ್ದರು.

ಪಿಡಿಒ ಶಶಿಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಅರಣ್ಯ ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ಗಿಡಗಳನ್ನು ನೀಡುವುದಾಗಿ ಅರಣ್ಯ ಇಲಾಖೆಯ ರಾಜು ತಿಳಿಸಿದರೆ, ಸರಕಾರಿ ಶಾಲೆಗಳ ಮಕ್ಕಳಿಗೆ ಪಠ್ಯ ಪುಸ್ತಕಗಳು ಸಕಾಲದಲ್ಲಿ ಬಂದಿವೆ ಎಂದು ಶಿಕ್ಷಣ ಇಲಾಖೆಯ ಪರವಾಗಿ ಚಂದ್ರಕಾಂತ ಡೇಸಾ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೌಭಾಗ್ಯಾ ಮಾಹಿತಿ ನೀಡಿದರು.

ಕಂದಾಯ ಇಲಾಖೆ ಪರವಾಗಿ ಮಾಹಿತಿ ನೀಡಿದ ಗ್ರಾಮ ಕರಣಿಕ ಸುಖೇಶ, ಪ್ರಾಕೃತಿಕ ವಿಕೋಪದ ಬಗ್ಗೆ ಮಾಹಿತಿ ನೀಡಲು ತಿಳಿಸಿದರಲ್ಲದೆ ಕೃಷಿ ಸಮ್ಮಾನ್‌ಗೆ ಅರ್ಜಿ ಸ್ವೀಕರಿಸಲು ಜೂನ್‌ 30 ಕೊನೆಯ ದಿನವಾಗಿದ್ದು, ಸೂಕ್ತ ದಾಖಲೆಗಳೊಂದಿಗೆ ಮುಂಡ್ಕೂರಿನ ಜನ ಪಂಚಾಯತ್‌ ಪಿಡಿಒ ಹಾಗೂ ಮುಲ್ಲಡ್ಕದ ಜನರು ತಮ್ಮನ್ನು ಸಂಪರ್ಕಿಸುವಂತೆ ಹೇಳಿದರು.

ಕೃಷಿ ಸಮ್ಮಾನ್‌ ಅರ್ಜಿ ಸಲ್ಲಿಕೆಗೆ ಜೂ.30 ಕಡೆ ದಿನ

ಕಂದಾಯ ಇಲಾಖೆ ಪರವಾಗಿ ಮಾಹಿತಿ ನೀಡಿದ ಗ್ರಾಮ ಕರಣಿಕ ಸುಖೇಶ, ಪ್ರಾಕೃತಿಕ ವಿಕೋಪದ ಬಗ್ಗೆ ಮಾಹಿತಿ ನೀಡಲು ತಿಳಿಸಿದರಲ್ಲದೆ ಕೃಷಿ ಸಮ್ಮಾನ್‌ಗೆ ಅರ್ಜಿ ಸ್ವೀಕರಿಸಲು ಜೂನ್‌ 30 ಕೊನೆಯ ದಿನವಾಗಿದ್ದು, ಸೂಕ್ತ ದಾಖಲೆಗಳೊಂದಿಗೆ ಮುಂಡ್ಕೂರಿನ ಜನ ಪಂಚಾಯತ್‌ ಪಿಡಿಒ ಹಾಗೂ ಮುಲ್ಲಡ್ಕದ ಜನರು ತಮ್ಮನ್ನು ಸಂಪರ್ಕಿಸುವಂತೆ ಹೇಳಿದರು.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25-kota

Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

14-malpe

Malpe: ನಿರಂತರ ರಜೆ: ಬೀಚ್‌ಗಳಲ್ಲಿ ಪ್ರವಾಸಿಗರ ದಟ್ಟಣೆ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.