ದಲಿತರ ಗ್ರಾಮಸಭೆಗೆ ಅಧಿಕಾರಿಗಳ ಗೈರು, ಸಭೆ ಬಹಿಷ್ಕರಿಸಿ ಪ್ರತಿಭಟನೆ
Team Udayavani, Jan 23, 2020, 5:53 AM IST
ಉಪ್ಪುಂದ: ಖಂಬದಕೋಣೆ ಗ್ರಾಮ ಪಂಚಾಯತ್‌ನಲ್ಲಿ ಬುಧವಾರ ನಡೆಯಬೇಕಿದ್ದ 2019-20ನೇ ಸಾಲಿನ ದಲಿತರ ಗ್ರಾಮ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳ ಗೈರು ಹಾಗೂ ವಿಳಂಬವಾಗಿ ಆಗಮಿಸಿದ್ದ ಕಾರಣ ದಲಿತರು ಸಭೆಯನ್ನು ಬಹಿಷ್ಕರಿಸಿ, ಪ್ರತಿಭಟಿಸಿದರು.
ಬೆಳಗ್ಗೆ ಗಂಟೆ 10.30ಕ್ಕೆ ಸಭೆ ನಿಗದಿ ಮಾಡಲಾಗಿದ್ದು ಸಮಯಕ್ಕೆ ಸರಿಯಾಗಿ ದಲಿತರು ಸಭೆಗೆ ಆಗಮಿಸಿದಾಗ ಕೆಲವು ಜನ ಪ್ರತಿನಿಧಿ ಹೊರತು ಪಡಿಸಿ, ನೋಡಲ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆಯವರು ಆಗಮಿಸದ ಕಾರಣ ದಲಿತರು ಸಭೆಯನ್ನು ಬಹಿಷ್ಕರಿಸಿದರು.
ಪಂಚಾಯತ್‌ನ ಎದುರು ಪ್ರತಿಭಟಿಸು ತ್ತಿರುವಾಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ನೋಡಲ್ ಅಧಿಕಾರಿಗಳು ಆಗಮಿಸಿದರು ಸಹ ಸಭೆ ನಡೆಸಲು ಒಪ್ಪಿಗೆ ನೀಡಲಿಲ್ಲ. ಕಪ್ಪು ಬಾವುಟ ಪ್ರದರ್ಶಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದು ದಿನ ಸಮಯ ನಿಗದಿಗೊಳಿಸಿ, ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಉಪಸ್ಥಿತರಿ ರುವಂತೆ ನೋಡಿಕೊಂಡು ಸಭೆ ನಡೆಸ ಬೇಕು ಎಂದು ಆಗ್ರಹಿಸಿದರು. ಹೆರಂಜಾಲು, ಹಳಗೇರಿ, ಖಂಬದಕೋಣೆಯ ಪ್ರದೇಶದಲ್ಲಿ ಕುಡಿಯು ವ ನೀರಿನ ಟ್ಯಾಂಕ್ ಸ್ವತ್ಛಗೊಳಿಸದೇ ಕಲುಷಿತ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೀಘ್ರವೇ ಮರು ಸಭೆ
ದಲಿತರ ಗ್ರಾಮ ಸಭೆಯ ಕುರಿತು ಎಲ್ಲ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ, ನೋಡಲ್ ಅಧಿಕಾರಿ ಯವರು ಇಲಾಖೆಯ ಕರ್ತವ್ಯ ನಿರ್ಹಹಣೆಯಿಂದಾಗಿ ಬರುವುದು ತಡವಾಗಿ ರುತ್ತದೆ. ಶೀಘ್ರದಲ್ಲಿ ಮರು ಸಭೆ ಮಾಡಿ ದಲಿತರ ಕುಂದು ಕೊರತೆಗಳನ್ನು ಪರಿಶೀಲಿ ಸುತ್ತೇವೆ.-ಪೂರ್ಣಿಮಾ,
ಪಿಡಿಒ ಖಂಬದಕೋಣೆ ಗ್ರಾ.ಪಂ.
ನೀರಿನ ಟ್ಯಾಂಕ್ ಸ್ವತ್ಛತೆ
2-3ದಿನಗಳಲ್ಲಿ ನೀರಿನ ಟ್ಯಾಂಕ್ ಸ್ವತ್ಛಗೊಳಿಸಲು ಕ್ರಮ ಕೈಗೊಂಡು ಶುದ್ಧ ನೀರು ನೀಡುತ್ತೇವೆ. ಈ ಕುರಿತು ಸರಿಯಾದ ಮಾಹಿತಿ ಇರಲಿಲ್ಲ. ಇದನ್ನು ಪರಿಹರಿಸಿಕೊಡುತ್ತೇವೆ.-ಆನಂದ ಬಿಲ್ಲವ ಅಧ್ಯಕ್ಷ ಗ್ರಾ.ಪಂ.ಕಂಬದಕೋಣೆ
ಮನವಿ ಮಾಡಿದರೂ ಪ್ರಯೋಜನವಿಲ್ಲ
ನೀರಿನ ಟ್ಯಾಂಕ್‌ನಲ್ಲಿ ಕಬ್ಬಿಣದ ವಸ್ತುಗಳು ಬಿದ್ದಿದ್ದು, ಸ್ವತ್ಛಗೊಳಿಸದೆ ಅದೇ ನೀರನ್ನು ನೀಡಲಾಗುತ್ತಿದೆ. ಈ ಮನವಿ ಮಾಡಿದರು ಪ್ರಯೋಜನವಾಗಿಲ್ಲ.
– ಶಿವರಾಮ
ಮೂಲ ಸೌಕರ್ಯಕ್ಕೆ ಆದ್ಯತೆ ನೀಡುತ್ತಿಲ್ಲ
ದಲಿತರ ಪ್ರತಿ ಗ್ರಾಮ ಸಭೆಗೆ ಅಧಿಕಾ ರಿಗಳು ಸರಿಯಾಗಿ ಬರುವುದಿಲ್ಲ. ಸ್ಥಳೀಯಾಡಳಿತ ಶೇ. 25ರಷ್ಟು ದಲಿತರ ಅನುದಾನವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಕಾಮಗಾರಿಗಳ ಕುರಿತು ದಲಿತ ಮುಖಂಡರಿಗೂ ಮಾಹಿತಿ ಇಲ್ಲ. ದಲಿತ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವುದಿಲ್ಲ.
– ಗೋವಿಂದ ಹಳಗೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.