ಅಧಿಕಾರಿಗಳ ಸೋಗಿನಲ್ಲಿ ಲಾರಿ ಚಾಲಕರಿಂದ ವಸೂಲಿ ಯತ್ನ:ಸೆರೆ
ಸಾೖಬ್ರಕಟ್ಟೆ ಸಮೀಪದ ಗಿರಿಕೆಮಠದಲ್ಲಿ ಘಟನೆ
Team Udayavani, Apr 9, 2019, 6:15 AM IST
ಕೋಟ: ಅಖೀಲ ಕರ್ನಾಟಕ ನೆಲ,ಜಲ,ಪರಿಸರ ಸಂರಕ್ಷಣ ವೇದಿಕೆಯ ಪದಾಧಿಕಾರಿಗಳು ಎಂದು ಹೇಳಿಕೊಂಡು, ಅಧಿಕಾರಿಗಳ ಶೈಲಿಯಲ್ಲಿ ಕಲ್ಲು ಸಾಗಾಟದ ವಾಹನಗಳನ್ನು ಅಡ್ಡಗಟ್ಟಿ, ಪರಿಶೀಲನೆ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರನ್ನು ಲಾರಿ ಮಾಲಕರು ಪೊಲೀಸರಿಗೊಪ್ಪಿಸಿದ ಘಟನೆ ಸೋಮವಾರ ಸಾೖಬ್ರಕಟ್ಟೆ ಸಮೀಪದ ಗಿರಿಕೆಮಠದಲ್ಲಿ ನಡೆದಿದೆ.
ಉಡುಪಿ ಲಕ್ಷ್ಮೀಂದ್ರ ನಗರದ ನಿವಾಸಿ ಶ್ರೀಲತಾ ಶೆಟ್ಟಿ (48), ಆಕೆಯ ಗಂಡ ಉದಯ ಕುಮಾರ್ ಶೆಟ್ಟಿ (49) ಉಡುಪಿ ಕಕ್ಕುಂಜೆಯ ನಿತ್ಯಾನಂದ ಶೆಟ್ಟಿ (53) ಹಾಗೂ ಸಂತೆಕಟ್ಟೆ ನಿವಾಸಿ ಗುರುಪ್ರಸಾದ ಶೆಟ್ಟಿ (49) ಆರೋಪಿಗಳು.
ಪರಿಸರ ಸಂರಕ್ಷರಣೆ
ಹೆಸರಲ್ಲಿ ಹಣ ವಸೂಲಿ
ಕಾರಿನಲ್ಲಿ ಆಗಮಿಸಿದ ಆರೋಪಿ ಗಳಾದ ಶ್ರೀಲತಾ ಶೆಟ್ಟಿ ತಾನು ನೆಲ, ಜಲ, ಪರಿಸರ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷೆ ಹಾಗೂ ಉದಯ ಕುಮಾರ್ ಶೆಟ್ಟಿ ಕಾರ್ಯದರ್ಶಿ ಮತ್ತು ನಿತ್ಯಾನಂದ ಜಿಲ್ಲಾಧ್ಯಕ್ಷನೆಂದು ಪರಿಚಯಿಸಿಕೊಂಡು ಗರಿಕೆಮಠದಿಂದ ಕಲ್ಲುಸಾಗಾಟ ಮಾಡುತ್ತಿದ್ದ ಉಪೇಂದ್ರ ನಾಯ್ಕ ಎನ್ನುವವರ ವಾಹನವನ್ನು ಅಡ್ಡಗಟ್ಟಿ ಟ್ರಿಪ್‌ಶೀಟ್ ಮುಂತಾದ ದಾಖಲೆಗಳನ್ನು ಕೇಳಿದ್ದರು. ತೋರಿಸದಿದ್ದಾಗ ನಿಮ್ಮ ವಾಹನವನ್ನು ಸೀಝ್ ಮಾಡಿ ಗಣಿ ಇಲಾಖೆಗೆ ನೀಡುತ್ತೇನೆ ಎಂದು ಹೆದರಿಸಿರುತ್ತಾರೆ ಹಾಗೂ ಅನಂತರ 5 ಸಾ.ರೂ. ನೀಡಿದರೆ ಬಿಡುವುದಾಗಿ ತಿಳಿಸಿದ್ದರು. ಅಷ್ಟು ಹಣ ಇಲ್ಲ ಎಂದಾಗ 2 ಸಾ.ರೂ. ಪಡೆದಿದ್ದಾರೆ. ಅಮೃತ್ ಪೂಜಾರಿ ಎನ್ನುವವರಿಂದ 1, 500 ರೂ. ವಸೂಲಿ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಬಂಧನ
ಲಾರಿ ಚಾಲಕ ಉಪೇಂದ್ರ ಅವರು ಈ ವಿಚಾರವನ್ನು ಅನಿಲ್ ಕಿಣಿ ಎಂಬವರಿಗೆ ದೂರವಾಣಿ ಮೂಲಕ ತಿಳಿಸಿದರು. ಅವರು ಸಮೀಪದ ಕೋರೆಯಲ್ಲಿದ್ದ ಕಿರಣ್ ಪೂಜಾರಿ, ಗಣೇಶ್ ಎಂಬ ವರ ಜತೆ ಸ್ಥಳಕ್ಕಾಗಮಿಸಿ ಆರೋಪಿಗಳನ್ನು ವಿಚಾರಿಸಿ, ಬಳಿಕ ಅನುಮಾನಗೊಂಡು ಕೋಟ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಗಣಿಗಾರಿಕೆಗಳೇ ಟಾರ್ಗೆಟ್
ಆರೋಪಿಗಳು ಪರಿಸರ ಸಂರಕ್ಷಣೆಯ ಹೆಸರಲ್ಲಿ ಗಣಿಗಾರಿಕೆ ಹಾಗೂ ಲಾರಿ,ಟಿಪ್ಪರ್ ವಾಹನಗಳನ್ನು ಅಡ್ಡಗಟ್ಟಿ ಇಲಾಖೆಯ ಅಧಿಕಾರಿಗಳ ಸ್ಟೆ ಲ್‌ನಲ್ಲೇ ದಾಖಲೆ ಪರಿಶೀಲಿಸುತ್ತಿದ್ದರು ಮತ್ತು ಕೇಸು ದಾಖಲಿಸುವ ಬೆದರಿಕೆಯೊಡ್ಡುತ್ತಿದ್ದರು ಎಂದು ಲಾರಿ ಮಾಲಕರು ಆರೋಪಿಸಿದ್ದಾರೆ.
ಠಾಣೆಯ ಬಳಿ ಜಮಾಯಿಸಿದ ಲಾರಿ ಮಾಲಕರು
ಲಾರಿ ಹಾಗೂ ಕೋರೆಯ ಮಾಲಕರು ಮತ್ತು ಲಾರಿ ಯೂನಿ ಯನ್ ಸಂಘಟನೆ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಠಾಣೆಯ ಬಳಿ ಜಮಾಯಿಸಿದರು. ಆರೋಪಿಗಳ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬ್ರಹ್ಮಾವರ ಸಿಐ ಪೂವಯ್ಯ ಹಾಗೂ ಕೋಟ ಠಾಣೆ ಉಪ ನಿರೀಕ್ಷಕ ರಫೀಕ್ ಎಂ. ಅವರು ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.