ಅಧಿಕಾರಿಗಳು, ಗ್ರಾಮಸ್ಥರಿಲ್ಲದ ಗ್ರಾಮಸಭೆ ಯಾರಿಗಾಗಿ?: ಆಕ್ರೋಶ
Team Udayavani, Feb 22, 2017, 5:01 PM IST
ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾಮ ಪಂಚಾಯತ್ 2016-17ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ. 20ರಂದು ತೆಕ್ಕಟ್ಟೆ ಗ್ರಾ.ಪಂ. ಅಧ್ಯಕ್ಷ ಶೇಖರ ಕಾಂಚನ್ ಅಧ್ಯಕ್ಷತೆಯಲ್ಲಿ ತೆಕ್ಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಗ್ರಾಮ ಸಭೆಯ ಆರಂಭದಲ್ಲಿಯೇ ಸಭೆಯಲ್ಲಿ ಗ್ರಾಮ ಮಟ್ಟದ ಇನ್ನಿತರ ಇಲಾಖಾ ಅಧಿಕಾರಿಗಳ ಗೈರು ಹಾಜರಾತಿ, ನಾಲ್ವರು ಗ್ರಾ.ಪಂ. ಸದಸ್ಯರ ಅನುಪಸ್ಥಿತಿ ಹಾಗೂ ಪ್ರಮುಖವಾಗಿ ಗ್ರಾಮಸ್ಥರೇ ಇಲ್ಲದೆ ಸಭೆಯಲ್ಲಿ ಇರಿಸಲಾದ ಖಾಲಿ ಕುರ್ಚಿಗಳ ದರ್ಬಾರ್ ಎದ್ದು ಕಾಣುತ್ತಿ ದ್ದಂತೆ ಸ್ಥಳೀಯ ಶ್ರೀನಿವಾಸ ಮಲ್ಯಾಡಿ ಹಾಗೂ ಸತೀಶ್ ತೆಕ್ಕಟ್ಟೆ ತೀವ್ರವಾಗಿ ವಾಗ್ಧಾಳಿ ನಡೆಸಿ ಅಧಿಕಾರಿ ಗಳು ಹಾಗೂ ಗ್ರಾಮಸ್ಥರಿಲ್ಲದ ಈ ಗ್ರಾಮಸಭೆ ಯಾರಿಗಾಗಿ? ಎಂದು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ ಸಂಬಂಧಪಟ್ಟ ಸ್ಥಳೀಯಾಡಳಿತ ಸಭೆಗೆ ಗೈರು ಹಾಜರಾದ ಕಾರಣದ ಬಗ್ಗೆ ಲಿಖೀತ ಉತ್ತರ ನೀಡಬೇಕು. ಜನರ ನಡುವಿನ ಸಂಪರ್ಕ ಸೇತುವಾದ ಗ್ರಾ.ಪಂ. ಸದಸ್ಯರು ಸಭೆಗೆ ಹಾಜರಾಗದೆ ನಿರ್ಲಕ್ಷé ಧೋರಣೆ ತೋರಿರುವುದು ಖಂಡನೀಯ. ಈ ಬಗ್ಗೆ ನಾಲ್ವರು ಪಂಚಾಯತ್ ಸದಸ್ಯರು ಕೂಡಲೇ ರಾಜೀನಾಮೆ ನೀಡಿ ಮನೆಗೆ ತೆರಳಲಿ ಎಂದು ಹೇಳಿದ ಘಟನೆ ಕೂಡಾ ಸಂಭವಿಸಿತು.
ನೋಡೆಲ್ ಅಧಿಕಾರಿ ಕುಂದಾಪುರ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಉಪಾಧ್ಯಾಯ ತೆಕ್ಕಟ್ಟೆ ಗ್ರಾ.ಪಂ. ಜನರ ಆಹವಾಲುಗಳನ್ನು ಸ್ವೀಕರಿಸಿಸಿದರು.
ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಮಾತನಾಡಿ ಸರಕಾರದ ಅನುದಾನಗಳನ್ನು ಜನರ ಬೇಡಿಕೆ ಅನುಗುಣವಾಗಿ ಸ್ಪಂದಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತೇನೆ. ಈ ಬಗ್ಗೆ ಸಾರ್ವಜನಿಕರ ಸಹಕಾರ ಅತೀ ಅಗತ್ಯ ಎಂದು ಹೇಳಿದರು.
ಗ್ರಾ. ಪಂ. ಸದಸ್ಯರಾದ ಉದಯ ಕುಮಾರ್ ಶೆಟ್ಟಿ ಮಲ್ಯಾಡಿ, ಸಂಜೀವ ದೇವಾಡಿಗ ತೆಕ್ಕಟ್ಟೆ, ವಿಜಯ ಭಂಡಾರಿ, ವಿನೋದ ದೇವಾಡಿಗ, ಸತೀಶ್ ದೇವಾಡಿಗ, ಸರೋಜಾ, ನೇತ್ರಾವತಿ, ರತ್ನಾ, ಶ್ಯಾಮ್‌ಸುಂದರ್ ತೆಕ್ಕಟ್ಟೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶುಸಂಗೋಪನ ಇಲಾಖೆ ಹಾಗೂ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ದೀಪಾ ಸ್ವಾಗತಿಸಿ, ವರದಿ ವಾಚಿಸಿ, ಸಂಜೀವ ನಿರೂಪಿಸಿ, ವಂದಿಸಿದರು.
ಬೃಹತ್ ರೈಸ್ ಮಿಲ್‌ಗಳು ಹೊರ ಹಾಕುವ ವಾಯುಮಾಲಿನ್ಯ, ಧೂಳಿ ನಿಂದಾಗಿ ಇಡೀ ತೆಕ್ಕಟ್ಟೆ ಪರಿಸರವೇ ಮಾಲಿನ್ಯವಾಗಿ ಸ್ಥಳೀಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಜತೆಗೆ ರಾ.ಹೆ. 66ರ ಬಳಿಯಲ್ಲಿ ರೈಸ್‌ಮಿಲ್‌ಗಳ ವೇ ಬ್ರಿಜ್‌ಗಳಿಗೆ ಬರುವ ಘನವಾಹನಗಳು ರಸ್ತೆಯ ಮೇಲೆ ಸಾಲುಗಟ್ಟಿ ನಿಂತು ಅಲ್ಲೇ ನೀರಿನಿಂದ ತೊಳೆಯುತ್ತಿರುವ ಮೊಬೈಲ್ ದೃಶ್ಯಾ ವಳಿಗಳನ್ನು ಸಭೆಯಲ್ಲಿ ನೆರೆದಿದ್ದ ಗ್ರಾಮಸ್ಥರಿಗೆ ಪ್ರದರ್ಶಿಸಿದರು. ಈ ಬಗ್ಗೆ ಸ್ಥಳೀಯಾಡಳಿತ ಗಂಭೀರವಾಗಿ ಪರಿಗಣಿಸಿ ರಾಜಕೀಯ ರಹಿತವಾಗಿ ಜನರ ಸ್ವಾಸ್ಥ್ಯ ಕಾಪಾಡಬೇಕು.
– ರಾಘವೇಂದ್ರ ದೇವಾಡಿಗ, ಸ್ಥಳೀಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.