ವಿಸ್ತರಿಸುತ್ತಿರುವ ತೈಲ ಜಿಡ್ಡು; ಪ್ರವಾಸೋದ್ಯಮಕ್ಕೆ ಹಿನ್ನಡೆ
ಪ್ರತಿಕೂಲ ಪರಿಣಾಮ ಆತಂಕ, ತನಿಖೆಗೆ ಆಗ್ರಹ
Team Udayavani, May 30, 2019, 10:27 AM IST
ಮಲ್ಪೆ/ಕೋಟ: ಸಸಿಹಿತ್ಲು, ಕಾಪು ಮುಂತಾದೆಡೆ ಕಡಲ ತೀರದಲ್ಲಿ ಕಂಡುಬರುತ್ತಿರುವ ಕಪ್ಪು ಬಣ್ಣದ ತೈಲಜಿಡ್ಡಿನ ಉಂಡೆಗಳು ಮಲ್ಪೆ, ಮಣೂರು -ಪಡುಕರೆ ಮತ್ತು ಕೋಡಿಕನ್ಯಾಣ ತೀರದಲ್ಲೂ ಪತ್ತೆಯಾಗಿವೆ.
ಕೋಡಿ ಕನ್ಯಾಣದಿಂದ ಬೀಜಾಡಿ ತನಕ ಕಡಲ ತೀರದಲ್ಲಿ ಇದು ಕಂಡುಬಂದಿದೆ. ಸೈಂಟ್ ಮೇರಿ ದ್ವೀಪ ಮತ್ತು ಮಲ್ಪೆ ಬೀಚ್‌ನಲ್ಲಿ ಕಪ್ಪು ಬಣ್ಣದ ತೈಲ ಮಿಶ್ರಿತ ಜಿಡ್ಡಿನ ಪ್ರಮಾಣ 2-3 ದಿನಗಳಿಂದ ತೇಲಿ ಬರುತ್ತಿದ್ದು, ಬುಧವಾರವೂ ಮುಂದುವರಿದಿದೆ. ಮಲ್ಪೆಯಲ್ಲಿ ಶೇಖರಗೊಂಡಿರುವ 50 ಕೆ.ಜಿ.ಯಷ್ಟು ಡಾಮರು ಉಂಡೆ ಯಂತಹ ವಸ್ತುವನ್ನು ಮಲ್ಪೆ ಅಭಿವೃದ್ಧಿ ಸಮಿತಿ ತೆರವು ಮಾಡಿ ಸ್ವತ್ಛಗೊಳಿಸಿದೆ.
ಹಡಗುಗಳಿಂದ ಸಾಕಷ್ಟು ದೂರ ಆಳ ಸಮುದ್ರದಲ್ಲಿ ತೈಲ ವಿಸರ್ಜನೆ ಯಾಗಿದ್ದರಿಂದ ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ತ್ಯಾಜ್ಯ ಕಡಲತೀರವನ್ನು ಪಸರಿಸಿದೆ. ತೀರಕ್ಕೆ ಸಮೀಪ ಇದು ನಡೆದಿದ್ದರೆ ಹತ್ತಿರದ ಸ್ಥಳಗಳಲ್ಲಿ ಮಾತ್ರ ಕಂಡುಬರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ತೀರವಾಸಿಗಳು.
ಕಡಲಾಮೆಗಳಿಗೆ ಆಪತ್ತು?
ಈ ಕಲ್ಮಶದಿಂದ ಮೀನುಗಾರಿಕೆಗೆ ಸಮಸ್ಯೆಯಾಗುತ್ತದೆ ಮತ್ತು ಕಡಲಾಮೆಗಳು ಸಾವನ್ನಪ್ಪುವ ಸಾಧ್ಯತೆ ಇದೆ. ಎಪ್ರಿಲ್, ಮೇ ತಿಂಗಳಲ್ಲಿ ಸಮುದ್ರದ ತೀರಪ್ರದೇಶದಲ್ಲಿ ಮೀನಿನ ಕೊರತೆಯಿಂದಾಗಿ ಮೀನುಗಾರರು ತೀವ್ರ ಸಂಕಷ್ಟವನ್ನು ಅನುಭವಿಸಿದ್ದಾರೆ. .
ಪ್ರವಾಸೋದ್ಯಮಕ್ಕೆ ಹಿನ್ನಡೆ
ಕಳೆದ ವರ್ಷವೂ ಒಂದೆರಡು ಬಾರಿ ಇದೇ ರೀತಿಯ ಜಿಡ್ಡು ಸಮುದ್ರದಲ್ಲಿ ಕಾಣಿಸಿಕೊಂಡಿತ್ತು. ಈ ಸಲ ಹಲವಾರು ಬಾರಿ ಪುನರಾವರ್ತನೆಯಾಗಿದೆ. ಸೈಂಟ್ ಮೇರಿ ದ್ವೀಪದಂತಹ ಕಡೆ ಈ ರೀತಿ ತ್ಯಾಜ್ಯ ಕಂಡುಬರುವುದು ಪ್ರವಾಸೋದ್ಯಮದ ಹಿನ್ನಡೆಗೆ ಕಾರಣವಾಗುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಮಲ್ಪೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಸ್ಥಳೀಯ ಸಮಸ್ಯೆ ಅಲ್ಲ: ಡಿಸಿ
ಮಂಗಳೂರು: ಸಮುದ್ರದಲ್ಲಿ ತೈಲ ಜಿಡ್ಡು ಮುಂಗಾರು ಮಳೆ ಆರಂಭವಾಗುವ ವೇಳೆ ಪಶ್ಚಿಮ ಕರಾವಳಿ ಉದ್ದಕ್ಕೂ ಕಂಡು ಬರುತ್ತಿದೆ. ಅದು ಕೇವಲ ಮಂಗಳೂರು ಕರಾವಳಿಗೆ ಸೀಮಿತವಾದ ಸಮಸ್ಯೆ ಅಲ್ಲ ಎಂದು ದ. ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.