ಸರಕಾರಿ ಶಾಲಾ ಕಟ್ಟಡಕ್ಕೆ ಕಾಯಕಲ್ಪ ಒದಗಿಸಿದ ಹಳೆ ವಿದ್ಯಾರ್ಥಿಗಳು
ಗೋಡೆ ಕುಸಿದು ಹಲವು ತಿಂಗಳು ಕಳೆದರೂ ಸ್ಪಂದಿಸದ ಇಲಾಖೆ
Team Udayavani, Apr 1, 2019, 6:30 AM IST
ಬೆಳ್ಮಣ್: ಕಾರ್ಕಳ ತಾಲೂಕಿನ ಹಾಳೆಕಟ್ಟೆ ಕಲ್ಯಾ ಸ.ಹಿ.ಪ್ರಾ. ಶಾಲೆಯ ಹಳೆಯ ಕಟ್ಟಡದ ಗೋಡೆ ಕುಸಿದು ಇಡೀ ಕಟ್ಟಡ ಕುಸಿಯುವ ಹಂತ ತಲುಪಿತ್ತು.ಇದನ್ನು ಮನಗಂಡ ಇಲ್ಲಿನ ಹಳೆ ವಿದ್ಯಾರ್ಥಿಗಳ ತಂಡ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡವನ್ನು ದುರಸ್ತಿ ಗೊಳಿಸಿ ಸಮಾಜಕ್ಕೆ ಮಾದರಿಯಾಗಿದೆ.
ಸರಕಾರಿ ಇಲಾಖೆಗಳ ಯಾವುದೇ ಕಟ್ಟಡ ಅಥವಾ ಇತರ ಕೆಲಸವನ್ನು ಅಧಿಕಾರಿಗಳು ಅಥವಾ ಇಲಾಖೆಗಳೇ ನಿರ್ವಹಿಸಬೇಕೆನ್ನುವುದು ಸಾಮಾನ್ಯ ಜನರ ವಾದ. ಅದರೆ ಇಲ್ಲಿನ ಸರಕಾರಿ ಶಾಲಾ ಕಟ್ಟಡ ಗೋಡೆ ಕುಸಿದು ಹಲವು ತಿಂಗಳುಗಳೇ ಕಳೆದರೂ ಇಲಾಖೆ ಹಾಗೂ ಅ ಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ಶಾಲೆಯ ಹಳೆ ವಿದ್ಯಾರ್ಥಿಗಳೇ ಒಟ್ಟಾಗಿ ಇಡೀ ಶಾಲೆಯ ಕಟ್ಟಡದ ದುರಸ್ತಿ ಕಾರ್ಯ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಮಳೆ ಗಾಳಿಗೆ ಕುಸಿದಿತ್ತ ಶಾಲೆ ಕಟ್ಟಡ
2018ರ ಆಗಸ್ಟ್ 11ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಶಾಲಾ ಹಳೆಯ ಕಟ್ಟಡದ ಗೋಡೆ ಕುಸಿತಗೊಂಡು ಅಪಾರ ನಷ್ಟ ಉಂಟಾಗಿತ್ತು. ಹಳೆಯ
ಕಟ್ಟವಾಗಿರುವ ಕಾರಣ ಇಲ್ಲಿ ಕೆಲವೊಂದು ಬಾರಿ ಮಾತ್ರ ಪಾಠ ಪ್ರವಚನಗಳು ನಡೆಯುತಿತ್ತು. ಉಳಿದಂತೆ ಈ ಕಟ್ಟಡವನ್ನು ಸಭಾಂಗಣವಾಗಿ ಉಪಯೋಗಿಸಲಾಗುತ್ತಿತ್ತು. ರಾತ್ರಿಯ ವೇಳೆಯಲ್ಲಿ ಈ ಘಟನೆ ನಡೆದಿದ್ದರಿಂದ ಸಂಭವನೀಯ ಅನಾಹುತ ತಪ್ಪಿತ್ತು. ಕಟ್ಟಡ ಹಂಚುಗಳು ಗಾಳಿಗೆ ಹಾರಿ ಹೋಗಿದ್ದು ಮಣ್ಣಿನ ಗೋಡೆಯಾದ್ದರಿಂದ ಮಳೆಯ ನೀರು ಬಿದ್ದು ಎರಡು ತರಗತಿ ಕೋಣೆಗಳ ಒಂದು ಭಾಗದ ಗೋಡೆಯೂ ಸಂಪೂರ್ಣ ಕುಸಿದಿತ್ತು. ಈ ಘಟನೆ ನಡೆದು ವರ್ಷಗಳು ಕಳೆದ್ದರೂ ಅಧಿಕಾರಿಗಳು ಮತ್ತು ಇಲಾಖೆ ಮಾತ್ರ ಇತ್ತ ಕಡೆ ಗಮನ ನೀಡಿರಲಿಲ್ಲ.
ಒಂದಾದ ಹಳೆ ವಿದ್ಯಾರ್ಥಿಗಳು
ತಮ್ಮ ಭವಿಷ್ಯ ರೂಪಿಸಿದ್ದ ಈ ಶಾಲೆಯ ದುರಾವಸ್ಥೆಯನ್ನು ಮನಗಂಡ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರೆಲ್ಲ ಒಟ್ಟಾಗಿ ಹಣ ಸಂಗ್ರಹಿಸಿ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ಕಟ್ಟಡದ ಕುಸಿದ ಗೋಡೆಯ ಸಹಿತ ಮೇಲ್ಛಾವಣಿಯನ್ನು ರಿಪೇರಿ ಮಾಡಿ ಶಾಲೆಗೆ ಹೊಸ ಮೆರಗು ನೀಡಿದ್ದಾರೆ.
ಸರಕಾರಿ ಶಾಲೆ, ಅದರಲ್ಲೂ ಕನ್ನಡ ಮಾಧ್ಯಮ ಶಾಲೆ ಎಂದ ಕ್ಷಣ ಜನ ದೂರ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ತಮ್ಮ ಗೌರವಾಧ್ಯಕ್ಷ ವಿಜಯ ರಾವ್ ಅವರ ಮುಂದಾಳತ್ವದಲ್ಲಿ ಈ ಕಾರ್ಯ ಮಾಡಿದೆ.
ಶ್ರಮದಾನದಲ್ಲಿ ಹಳೆ ವಿದ್ಯಾರ್ಥಿಗಳು
ಶಾಲಾ ಹಳೆಯ ಕಟ್ಟಡದ ಮರು ರಿಪೇರಿ ಕಾರ್ಯ ಮಾಡುವ ಸಂದರ್ಭ ಸುಮಾರು 100ಕ್ಕೂ ಅಧಿ ಕ ಮಂದಿ ಹಳೆ ವಿದ್ಯಾರ್ಥಿಗಳು, ಶಾಲಾ ಮಕ್ಕಳ ಪೋಷಕರು ಶ್ರಮದಾನವನ್ನು ಮಾಡುವ ಮೂಲಕ ಕಟ್ಟಡದ ದುರಸ್ತಿಯಲ್ಲಿ ಕೈಜೋಡಿಸಿದ್ದಾರೆ.
ಕುಸಿಯುವ ಬದಲು ಉಪಯೋಗಕ್ಕೆ ಬರಲಿ
ಶಾಲೆಯ ಚಟುವಟಿಕೆಗಳಿಗೆ ಪ್ರಸ್ತುತ ಉಪಯೋಗಕ್ಕಿಲ್ಲವಾದರೂ ಕೆಲವೊಮ್ಮೆ ಸಭಾಂಗಣವಾಗಿ ಉಪಯೋಗವಾಗುತ್ತಿತ್ತು. ಆದರೆ ತುಂಬ ದೊಡ್ಡದಾದ, ಸುಂದರವಾದ ಕಟ್ಟಡ ಇದಾಗಿದ್ದು ಕುಸಿಯುವ ಬದಲು ಉಪಯೋಗಕ್ಕೆ ಬರಲಿ ಎನ್ನುವ ದೃಷಿಯಿಂದ ಮತ್ತೆ ದುರಸ್ತಿ ಮಾಡಿದ್ದೇವೆ.
– ಯತೀಶ್ ಕೋಟ್ಯಾನ್, ಹಳೆ ವಿದ್ಯಾರ್ಥಿ
ಪೋಷಕರ ಸಹಕಾರ
ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಕಟ್ಟಡವನ್ನು ದುರಸ್ತಿ ಮಾಡಿದ್ದೇವೆ. ಇದಕ್ಕೆ ಎಲ್ಲ ಹಳೆ ವಿದ್ಯಾರ್ಥಿಗಳ ಜತೆ ಪೋಷಕರು ಸಹಕಾರ ನೀಡಿದ್ದಾರೆ.
-ವಿಜಯ್ ರಾವ್, ಗೌರವಾಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.