ಟೈಲ್ ಫ್ಯಾಕ್ಟರಿ ವಾರ್ಡ್‌ನಲ್ಲಿ ರಸ್ತೆಯದ್ದೇ ಬೇಡಿಕೆ
ಚರಂಡಿ ಕಾಮಗಾರಿ ಆಗಬೇಕಿದೆ
Team Udayavani, Mar 3, 2020, 5:05 AM IST
ಕುಂದಾಪುರ: ಚರ್ಚ್ ರೋಡ್ ಮೂಲಕ ಸಾಗಿ ಕಾನ್ವೆಂಟ್ ಬದಿಯಿಂದ ಹೋದ ರಸ್ತೆಯಲ್ಲಿ ಸಾಗಿದರೆ ರಸ್ತೆಯನ್ನು ಅಡ್ಡ ಹಾಯುವ ತೋಡು ಸಿಗುತ್ತದೆ. ಆ ತೋಡಿನಲ್ಲಿ ಸಮುದ್ರದ ಉಬ್ಬರ ಇಳಿತದ ಸಂದರ್ಭ ಉಪ್ಪುನೀರು ಹಿನ್ನೀರು ಬರುವುದು ಸ್ವಾಭಾವಿಕ. ಆದರೆ ಅದು ಮರಳಿ ಸರಿಯಾಗಿ ಹೋಗದ ಕಾರಣ ತೋಡಿನಲ್ಲಿ ನೀರು ನಿಂತು ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ. ತ್ಯಾಜ್ಯ ರಾಶಿಯ ವಾಸನೆ. ಹಾಗಾಗಿ ಈ ತೋಡಿಗೆ ಕಾಂಕ್ರಿಟ್ ಸ್ಲ್ಯಾಬ್ ಹಾಕಬೇಕೆಂದು ಸ್ಥಳೀಯರು ಬೇಡಿಕೆ ಇಡುತ್ತಲೇ
ಬಂದಿದ್ದಾರೆ. ಇನ್ನೂ ಈಡೇರಿಲ್ಲ.
ಗಾಂಧಿಮೈದಾನದಿಂದ ತೊಡಗಿ ಸುಮಾರು ಅರ್ಧಪೇಟೆಯ ಮಳೆನೀರು ಈ ವಾರ್ಡ್ ಮೂಲಕ ಹರಿಯುವ ತೋಡಿನಲ್ಲಿ ಸಾಗುತ್ತದೆ. ಅದಕ್ಕೆ ಕಳೆದ ಅವಧಿಯಲ್ಲಿ ತಡೆಗೋಡೆ ಕಟ್ಟಿ ಕಾಮಗಾರಿ ಮಾಡಲಾಗಿದೆ. ಇನ್ನೂ ಸ್ವಲ್ಪ ದೂರದ ಕಾಮಗಾರಿಯ ಅವಶ್ಯವಿದೆ. ಸ್ವಲ್ಪ ದೂರದಲ್ಲಿ ಶಾಲೆ ಕೂಡಾ ಇರುವ ಕಾರಣ ಇಲ್ಲಿನ ಶುಚಿತ್ವ ತೀರಾ ತುರ್ತಿನ ಅವಶ್ಯ.
ಸುದಿನ ವಾರ್ಡ್ ಸುತ್ತಾಟ ಸಂದರ್ಭ ಟೈಲ್ ಫ್ಯಾಕ್ಟರಿ ವಾರ್ಡ್‌ನಲ್ಲಿ ಓಡಾಡಿದಾಗ ಅನೇಕರು ರಸ್ತೆ ಬೇಡಿಕೆ ಇಟ್ಟರು.
ಚರಂಡಿ ಇಲ್ಲ
ಅಲ್ಲಲ್ಲಿ ಚರಂಡಿ ಬೇಡಿಕೆ ಇದೆ. ಚರಂಡಿ ನೀರು ನಿಂತು ಸೊಳ್ಳೆ ಕಾಟ ಎಂತೂ ಆಯಿತೇ. ಚರಂಡಿಯೇ ಇಲ್ಲದೇ ಸಮಸ್ಯೆ ಅನೇಕ ಕಡೆಯಿದೆ. ಅಷ್ಟಲ್ಲದೇ ಒಳಚರಂಡಿ ಮಾಡುವ ಸಂದರ್ಭ ಹಾಳುಗೆಡವಿದ ರಸ್ತೆಯನ್ನೂ ಇನ್ನೂ ಪರಿಪೂರ್ಣ ದುರಸ್ತಿಗೆ ಒಳಪಡಿಸಿಲ್ಲ. ಹಾಗಾಗಿ ಚರಂಡಿಯ ಜತೆಗೆ ರಸ್ತೆಯೂ ಹಾಳಾಗಿದೆ. ಒಳಚರಂಡಿ ವ್ಯವಸ್ಥೆಯಿಲ್ಲದೇ ಕೆಲವೆಡೆ ಇದ್ದ ಚರಂಡಿ ವ್ಯವಸ್ಥೆ ಬ್ಲಾಕ್ ಆಗಿ ಹಾಳಾಗಿದೆ.
ರಸ್ತೆಗಳ ಬೇಡಿಕೆ
ಬರೆಕಟ್ಟು ಬಳಿ ರಸ್ತೆಯ ಬೇಡಿಕೆಯಿದೆ. ಮಣ್ಣಿನ ಕಚ್ಛಾ ರಸ್ತೆಯನ್ನು ಕಾಂಕ್ರಿಟ್ ಅಥವಾ ಡಾಮರು ಹಾಕಿ ಈ ಭಾಗದ ಮನೆಗಳಿಗೆ ಹೋಗಲು ಅನುವಾಗುವಂತೆ ಮಾಡಬೇಕೆಂಬ ಬೇಡಿಕೆ ಇಲ್ಲಿನವರದ್ದು. ಈ ಭಾಗ ಈ ವಾರ್ಡ್‌ಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶ. ಕಾನ್ವೆಂಟ್ ಹಿಂದೆ ತೋಡಿನ ಬಳಿಯೂ ಅನೇಕ ಮನೆಗಳಿಗೆ ರಸ್ತೆಯ ಅಭಿವೃದ್ಧಿ ಅವಶ್ಯವಿದೆ. ಇಲ್ಲಿನ ಸೇತುವೆ ಎರಡೂ ಬದಿ ಗುಂಡಿ ಬಿದ್ದಿದ್ದು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಕಾಮಗಾರಿ
ಈ ವಾರ್ಡ್‌ನ ರಸ್ತೆಗಳ ಟೈಲ್ ಫ್ಯಾಕ್ಟರಿ ಹಿಂದೆ, ಬರೆಕಟ್ಟು ಬೈಲು ರಸ್ತೆ, ರಂಗನಹಿತ್ಲು ರಸ್ತೆಗಳಿಗೆ ಬೇಡಿಕೆಯಿದೆ. ಕೋಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಂದ 475 ಮೀ. ರಸ್ತೆ ಕಾಂಕ್ರೀಟ್ ಆಗಿದೆ. ಆಚಲ ಸಭಾಭವನದಿಂದ ಸೇತುವೆವರೆಗೆ ಕಾಂಕ್ರಿಟ್ ರಸ್ತೆಯಾಗಿದೆ. ಮಂಗಳೂರು ಟೈಲ್ ಫ್ಯಾಕ್ಟರಿ ಹಿಂದೆ 95 ಮೀ. ಕಾಂಕ್ರೀಟ್ ರಸ್ತೆ, ಪರಿಶಿಷ್ಟ ಜಾತಿ ಕಾಲನಿ ಬಳಿ 100 ಮೀ. ತಡೆಗೋಡೆ ರಚನೆ ಈಚೆಗೆ ಈ ವಾರ್ಡ್‌ನಲ್ಲಿ ನಡೆದ ಕಾಮಗಾರಿಗಳು.
ಆಗಬೇಕಾದ್ದೇನು?
ಉಪ್ಪುನೀರು ಬರುವ ತೋಡು ಸ್ವತ್ಛವಾಗಬೇಕು
ವಿವಿಧೆಡೆ ರಸ್ತೆಗಳ ನಿರ್ಮಾಣವಾಗಬೇಕು
ಚರಂಡಿ ಕಾಮಗಾರಿ ನಡೆಯಬೇಕು.
ಸ್ಲ್ಯಾಬ್ ಅಳವಡಿಸಿ
ಚರಂಡಿ ಮೇಲೆ ಸಿಮೆಂಟ್ ಸ್ಲ್ಯಾಬ್ ಅಳವಡಿಸಿದರೆ ರಸ್ತೆಯೂ ಅಗಲವಾಗಲಿದೆ. ಚರ್ಚ್‌ರೋಡ್‌ನಿಂದ ಬರುವಾಗ ರಸ್ತೆ ಬದಿ ಇಂಟರ್‌ಲಾಕ್ ಹಾಕಲಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಬೇಕೆಂದು ಬೇಡಿಕೆಯಿದೆ.
1 ಕೋಟಿ ಅನುದಾನ ಅಗತ್ಯ
ಈ ವಾರ್ಡ್‌ನಲ್ಲಿ ಇರುವ ರಸ್ತೆಗಳ ಬೇಡಿಕೆ ಈಡೇರಿಸಲು ಸರಿಸುಮಾರು 1 ಕೋ.ರೂ. ಅಗತ್ಯ. ಹೊಸದಾಗಿ ವಾರ್ಡ್‌ಗೆ ಸೇರ್ಪಡೆಯಾದ ಬರೆಕಟ್ಟು ಪ್ರದೇಶದಲ್ಲೂ ರಸ್ತೆಯ ಬೇಡಿಕೆಯಿದೆ. ಕಳೆದ ನನ್ನ ಅವಧಿಯಲ್ಲೂ ಸಾಕಷ್ಟು ಕೆಲಸಗಳಾಗಿದ್ದು, ಈ ಅವಧಿಯಲ್ಲೂ ಅಧಿಕಾರ ದೊರೆಯುವ ಮೊದಲೇ ಒಂದಷ್ಟು ಕೆಲಸಗಳಾಗಿವೆ.
-ವಿಜಯ್ ಎಸ್. ಪೂಜಾರಿ,
ಟೈಲ್ ಫ್ಯಾಕ್ಟರಿ ವಾರ್ಡ್
ತೋಡು ಸ್ವಚ್ಛಗೊಳಿಸಿ
ಕಾನ್ವೆಂಟ್ ಹಿಂದಿನ ರಸ್ತೆಯನ್ನುಅಡ್ಡ ವಾಗಿಹಾದುಹೋಗಿ ರುವ ತೋಡನ್ನು
ಶುಚಿಗೊಳಿಸಬೇಕು. ಸಮುದ್ರದ ಉಬ್ಬರ ಇಳಿತದ ಉಪ್ಪುನೀರು ಬರುವ ಇಲ್ಲಿ ನೀರು ನಿಂತು ಸಂಜೆಯಾಗುತ್ತಲೇ ಸೊಳ್ಳೆಗಳ ಕಲರವ ಆರಂಭವಾಗುತ್ತದೆ. ತ್ಯಾಜ್ಯ ನಿಂತು ನೀರು ಗಬ್ಬು ವಾಸನೆ ಬರುತ್ತದೆ. ಇದನ್ನು ಶುಚಿಗೊಳಿಸಲು ಮುತುವರ್ಜಿ ವಹಿಸಬೇಕು. ಇಲ್ಲಿನ ರಸ್ತೆಗಳ ಬೇಡಿಕೆಯನ್ನು ಆದ್ಯತೆ ನೆಲೆಯಲ್ಲಿ ಈಡೇರಿಸಬೇಕು. ಬಹಳಷ್ಟು ಮನೆಗಳಿಗೆ ಇದರಿಂದ ಅನುಕೂಲವಾಗುತ್ತದೆ.
-ಚಂದ್ರ ಖಾರ್ವಿ,
ಟೈಲ್ ಫ್ಯಾಕ್ಟರಿ ವಾರ್ಡ್
ಅನುದಾನ ಇಲ್ಲ
ವಾರ್ಡ್‌ನುದ್ದಕ್ಕೂ ಜನರಿಂದ ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿಗೆ ಬೇಡಿಕೆಯಿದೆ. ಟೈಲ್ ಫ್ಯಾಕ್ಟರಿ ಬಳಿ ಬೋಟ್ ನಿಲ್ಲುವಲ್ಲಿ 3.8 ಲಕ್ಷ ರೂ. ವೆಚ್ಚದಲ್ಲಿ , ಚರ್ಚ್ ರೋಡ್ ಬಳಿ, ರಂಗನಹಿತ್ಲು ದೇವಸ್ಥಾನ ಬಳಿ ಬರೆಕಟ್ಟು ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಉಳಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಅನುದಾನದ ಕೊರತೆಯಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಲಾಗುತ್ತಿದೆ.
-ಶ್ವೇತಾ ಸಂತೋಷ್, ಸದಸ್ಯರು, ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.