ಬೆಳ್ಮಣ್ ಜಂತ್ರದಲ್ಲೊಂದು ಅಪಘಾತ ವಲಯ
Team Udayavani, Jul 5, 2019, 5:32 AM IST
ಬೆಳ್ಮಣ್: ಇಲ್ಲಿಂದ ಶಿರ್ವಕ್ಕೆ ಸಾಗುವ ದಾರಿಯ ಜಂತ್ರ ಎಂಬಲ್ಲಿ ಅಪಾಯಕಾರಿ ತಿರುವಿನೊಂದಿಗೆ ಇಳಿಜಾರಿನ ರಸ್ತೆಯೊಂದಿದ್ದು, ತೀರ ಅಪಾಯಕಾರಿಯಾಗಿದೆ. ಈ ರಸ್ತೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದ್ದರೂ, ಅದನ್ನು ಸರಿಪಡಿಸುವ ಗೋಜಿಗೆ ಲೋಕೋಪಯೋಗಿ ಇಲಾಖೆ ಹೋಗಿಲ್ಲ.
ತಿರುವು ಮತ್ತು ಇಳಿಜಾರಿನ ಕಾರಣ ಶಿರ್ವದಿಂದ ಬೆಳ್ಮಣ್‌ಗೆ ಬರುವ ವಾಹನಗಳು ಅತಿ ವೇಗವಾಗಿ ಬರುತ್ತವೆ. ಎದುರಿನಿಂದ ವಾಹನಗಳು ಬರುವುದು ಅರಿವಿಲ್ಲದೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ತಜ್ಞರು, ಪೊಲೀಸ್ ಇಲಾಖೆ, ವಾಹನ ಚಾಲಕರು ಹಲವು ಬಾರಿ ಸಲಹೆಗಳನ್ನು ನೀಡಿದ್ದರೂ ಇಲಾಖೆ ಕೇಳಿಸಿಕೊಂಡಿಲ್ಲ.
ಅಪಘಾತಗಳ ಸರಮಾಲೆ
ರಸ್ತೆ ಸಮಸ್ಯೆಯಿಂದಾಗಿ ಇಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಪೊಲೀಸ್ ಪೇದೆಯೊಬ್ಬರ ಸಹೋದರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರೆ, ಕಳೆದ ಫೆ. 23ರಂದು ಖಾಸಗಿ ಬಸ್ ಟಿಪ್ಪರಿಗೆ ಢಿಕ್ಕಿಯಾಗಿ ಮೋಕ್ಷಿತಾ ಎಂಬವರು ಮೃಪಟ್ಟಿದ್ದರು.
ವಿವಾಹಿತ ಮಹಿಳೆ ಸಹಿತ ಹಲವು ಪ್ರಯಾಣಿಕರು ಗಾಯ ಗೊಂಡಿದ್ದರು. ಬಸ್ಸಿನ ಚಾಲಕನ ಕಾಲು ಊನವಾಗಿತ್ತು. ಟಿಪ್ಪರ್ ಚಾಲಕನೂ ಹಾಸಿಗೆ ಹಿಡಿದಿದ್ದಾರೆ. ಮೇ 28ರಂದು ಬೈಕ್‌ಗಳು ಢಿಕ್ಕಿಯಾಗಿ ಒಬ್ಬರು ಮೃತಪಟ್ಟಿದ್ದರು. ಹೀಗೆ ತಿರುವಿನ ಬಗ್ಗೆ ತಿಳಿಯದೆ ಅಪಘಾತಗಳು ನಡೆಯುತ್ತಲೇ ಇವೆ.
ಎಚ್ಚರಿಕೆ ಫಲಕವೂ ಬೇಕು
ಈಗಾಗಲೇ ಬೆಳ್ಮಣ್ ರೋಟರಿ ಸಂಸ್ಥೆ ಇಲ್ಲಿ ಅಪಘಾತ ವಲಯ ಎಂಬ ಎಚ್ಚರಿಕೆ ಫಲಕ ಹಾಕಿದೆ. ಆದರೆ ದೊಡ್ಡದಾದ ಫಲಕವೊಂದನ್ನು ಲೋಕೋಪಯೋಗಿ ಇಲಾಖೆ ಆಥವಾ ಪೊಲೀಸ್ ಇಲಾಖೆಯ ವತಿಯಿಂದ ಸೂಚನ ಫಲಕ ಅಳವಡಿಸಿದರೆ ಉತ್ತಮ ಎಂದು ಜನರು ಹೇಳುತ್ತಿದ್ದಾರೆ.
ಹಂಪ್ಸ್ ಅಳವಡಿಸಿ
ರಸ್ತೆಯ ಇಳಿಜಾರು ತೆಗೆದು ಅಗಲೀಕರಣ ನಡೆಸಿ, ಎರಡೂ ಭಾಗಗಳಲ್ಲಿ ರಸ್ತೆ ಉಬ್ಬು (ಹಂಪ್ಸ್ ) ಅಳವಡಿಸಬೇಕೆಂಬ ಆಗ್ರಹವಿದೆ. ಇದರಿಂದ ಎರಡೂ ಕಡೆಗಳಿಂದ ಬರುವ ವಾಹನಗಳ ವೇಗಕ್ಕೆ ತಡೆ ಬೀಳಲಿದ್ದು, ಅಪಘಾತ ತಪ್ಪಿಸ ಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.