ಕಾರ್ಕಳದಲ್ಲೊಬ್ಬ ಸ್ವಚ್ಛತಾ ರಾಯಭಾರಿ
ಸದ್ದಿಲ್ಲದೇ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಫೆಲಿಕ್ಸ್ ವಾಝ್
Team Udayavani, May 11, 2019, 6:00 AM IST
ಅಲ್ಲಲ್ಲಿ ಅಳವಡಿಸಲಾದ ಹ್ಯಾಂಗರ್ ಮತ್ತು ಜಾಗೃತಿ ಫಲಕಗಳು.
ವಿಶೇಷ ವರದಿ– ಕಾರ್ಕಳ: ಸ್ವಚ್ಛತೆ ಕುರಿತ ಅಭಿಯಾನ, ಭಾಷಣಗಳ ಮಧ್ಯೆ ತಮ್ಮ ಕೆಲಸದಿಂದಲೇ ಗಮನ ಸೆಳೆಯುತ್ತಿ ರುವವರು ಫೆಲಿಕ್ಸ್ ವಾಝ್.
ಪ್ರತಿದಿನ ಬೆಳ್ಳಂ ಬೆಳಗ್ಗೆ ಕಾರ್ಕಳದ ಸ್ವರಾಜ್ ಮೈದಾನ ಆಸುಪಾಸು ಕ್ಯಾಪ್ ಧರಿಸಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡ ಮಂಗಳಪಾದೆಯ ಫೆಲಿಕ್ಸ್ ವಾಝ್ ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಿದ್ದಾರೆ.
ತನ್ನ ಪರಿಸರದಲ್ಲಿ ಕಾಣಸಿಗುವ ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕಿ ಪುರಸಭೆಯ ಕಸ ಸಾಗಾಟದ ಲಾರಿಗೆ ತುಂಬುವುದು ಮಾತ್ರವಲ್ಲದೇ ಪ್ರತಿದಿನ ಆರೇಳು ಕಿ.ಮೀ. ತಮ್ಮ ಕಾರಿನಲ್ಲಿ ಸಾಗಿ, ರಸ್ತೆ ಬದಿಯಿರುವ ಕಸವನ್ನು ತುಂಬಿ ಬಳಿಕ ಕಸ ಸಾಗಾಟದ ವಾಹನಕ್ಕೆ ರವಾನಿಸುತ್ತಾರೆ.
ಪರಿಸರದ್ದೇ ಕಾಳಜಿ
ಸ್ವಚ್ಛತೆಯನ್ನೇ ಕಾಯಕವನ್ನಾಗಿ ಮಾಡಿ ಕೊಂಡಿರುವ ಫೆಲಿಕ್ಸ್ ಅವರಿಗೆ ಪರಿಸರದ್ದೇ ಕಾಳಜಿ. 70 ವರ್ಷದವರಾದ ಇವರು ಮಂಗಳಪಾದೆ, ಕೋರ್ಟ್ ರಸ್ತೆ, ಸ್ವರಾಜ್ ಮೈದಾನ, ರಾಮಸಮುದ್ರ ಪರಿಸರ ಸ್ವಚ್ಛವಾಗಿಡುವಲ್ಲಿ ಅಪೂರ್ವ ಸೇವೆ ಸಲ್ಲಿಸುತ್ತಿದ್ದಾರೆ.
ಭಿತ್ತಿಪತ್ರ, ಗೋಣಿ ಚೀಲ ಅಳವಡಿಕೆ
ಸ್ವರಾಜ್ ಮೈದಾನ ಸೇರಿದಂತೆ ಮುಖ್ಯ ರಸ್ತೆ ಬದಿಯಲ್ಲಿ ಗೋಣಿ ಚೀಲಗಳನ್ನಿಟ್ಟು ಸಾರ್ವಜನಿಕರಿಗೆ ಕಸ ಹಾಕಲು ಅವಕಾಶ ಮಾಡಿಕೊಟ್ಟಿದ್ದಾರೆ. ಭೂಮಿ ತಾಯಿ ಯನ್ನು ಸ್ವಚ್ಛವಾಗಿಡಿ, ಸ್ವಚ್ಛ ಭಾರತ್, ಸ್ವಚ್ಛತೆ ಕಾಪಾಡಿ ಎಂಬ ಭಿತ್ತಿಪತ್ರವನ್ನು ಅದರ ಪಕ್ಕದಲ್ಲಿ ಅಂಟಿಸಿದ್ದು, ಕೆಲವೆಡೆ ಚೀಲಗಳನ್ನು ತೂಗುಹಾಕಲು ಹ್ಯಾಂಗರ್ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.
ವಾಝ್ ಅವರು 35 ವರ್ಷಗಳ ಕಾಲ ಕುವೈಟ್‌ನಲ್ಲಿ ಚಾಲಕರಾಗಿದ್ದರು. 2009ರಲ್ಲಿ ಹುಟ್ಟೂರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
ಇಲ್ಲೇ ಸಿಂಗಾಪುರ ಕಾಣುವಂತಾಗಬೇಕು
ಸಿಂಗಾಪುರ ಸ್ವಚ್ಛ, ಸುಂದರ ನಗರವೆಂದು ಹೇಳುತ್ತಾರೆ. ನಾವ್ಯಾಕೆ ಭಾರತವನ್ನೂ ಸಿಂಗಾಪುರ ಮಾಡಬಾರದು? ಇಲ್ಲಿನ ಭ್ರಷ್ಟ ವ್ಯವಸ್ಥೆಯನ್ನು ಹೋಗ ಲಾಡಿಸಿ ಅಭಿವೃದ್ಧಿ ಪಡಿಸಿದಲ್ಲಿ ಮತ್ತು ಸ್ವಚ್ಛತೆ ಕಾಪಾಡಿಕೊಂಡಲ್ಲಿ ನಾವು ಇಲ್ಲೇ ಸಿಂಗಾಪುರವನ್ನು ಕಾಣಬಹುದು. ಸೈನಿಕರು, ರೈತರನ್ನು ಅತ್ಯಂತ ಗೌರವ ಭಾವದಿಂದ ಕಾಣುವ ನಾನು ಪೌರ ಕಾರ್ಮಿಕರನ್ನು ಗೌರವಿಸುತ್ತೇನೆ ಎನ್ನುತಾರೆ ವಾಝ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.