ಜಿಲ್ಲೆಯಲ್ಲಿ ಆನ್‌ಲೈನ್ ವಿದ್ಯುತ್ ಪಾವತಿ ಶೇ.50ರಷ್ಟು ಏರಿಕೆ
ವೆಬ್, ಮೊಬೈಲ್ ಆ್ಯಪ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾವತಿ ; ಎನಿ ಟೈಮ್ ಪೇಮೆಂಟ್ ಯಂತ್ರದಿಂದಲೂ ಪಾವತಿ
Team Udayavani, May 4, 2019, 6:00 AM IST
ವಿಶೇಷ ವರದಿ –ಉಡುಪಿ: ಹಿಂದೆ ವಿದ್ಯುತ್ ಬಿಲ್ ಪಾವತಿಗೆ ಗಂಟೆಗಟ್ಟಲೆ ಕಾಯಬೇಕಾಗಿತ್ತು. ಆದರೆ ಇದೀಗ ಮೆಸ್ಕಾಂನ ಇ -ಆಡಳಿತ ವ್ಯವಸ್ಥೆಯಿಂದ ನಿಮಿಷದಲ್ಲಿ ವಿದ್ಯುತ್ ಬಿಲ್ ಪಾವತಿಸ ಬಹುದು. ಇದರಿಂದಾಗಿ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಹಣ ಪಾವತಿಸುವವರ ಸಂಖ್ಯೆಯಲ್ಲಿ ಶೇ. 50ರಷ್ಟು ಸಂಖ್ಯೆ ಏರಿಕೆಯಾಗಿದೆ.
ಆ್ಯಪ್, ವೆಬ್ ಮೂಲಕ ಪಾವತಿ
2018ರಲ್ಲಿ ನೆಫ್ಟ್ ಮೂಲಕ 2.027, ಪೇಟಿಎಂ ಮೂಲಕ 4,179, ಮೊಬೈಲ್ ಆ್ಯಪ್ 83,ಎನ್‌ಎಸಿಎಚ್- 2,500, ಕರ್ನಾಟಕ ಒನ್- 557 ಮಂದಿ ಹೀಗೆ ಆನ್‌ಲೈನ್ ವಿವಿಧ ಆ್ಯಪ್ ಮೂಲಕ ವಿದ್ಯುತ್ ಬಿಲ್ ಹಣ ಪಾವತಿಸಿದ್ದಾರೆ. 2019ರ ಮಾರ್ಚ್ ಅಂತ್ಯದವರೆಗೆ ಗ್ರಾಹಕರು ನೆಫ್ಟ್ -5,076, ಪೇಟಿಎಂ 4,754, ವಿವಿಧ ಮೊಬೈಲ್ ಆಪ್ 80, ಎನ್‌ಎಸಿಎಚ್ 2,500, ಕೆ-ಒನ್ 557 ಗ್ರಾಹಕರು ವಿವಿಧ ಆ್ಯಪ್ ಮೂಲಕ ವಿದ್ಯುತ್ ಬಿಲ್ ಪಾವತಿಸಿದ್ದಾರೆ.
ಎಟಿಪಿ ಬಳಕೆಯಲ್ಲೂ ಹೆಚ್ಚಳ
ಉಡುಪಿ, ಮಣಿಪಾಲ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರದಲ್ಲಿ 1,02,000 ಹಾಗೂ ಕುಂದಾಪುರ, ಕೋಟ, ಬೈಂದೂರು, ಶಂಕರನಾರಾಯಣ, ತಲ್ಲೂರಿನಲ್ಲಿ 61,000 ಗ್ರಾಹಕರು ಎನಿ ಟೈಮ್ ಪೇಮೆಂಟ್ ಯಂತ್ರದ (ಎಪಿಟಿ) ಮೂಲಕ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ.
ತಿಂಗಳಿಗೆ 66 ಮಿ.ಯೂ ಬಳಕೆ ಜಿಲ್ಲೆಯಲ್ಲಿ ತಿಂಗಳಿಗೆ 66 ಮಿ.ಯೂ ವಿದ್ಯುತ್ ಬಳಕೆ ಮಾಡಲಾಗುತ್ತಿದೆ. ಅದರಲ್ಲಿ ಮಣಿಪಾಲ- 12 ಮಿ.ಯೂ, ಉಡುಪಿ 12 ಮಿ.ಯೂ, ಬ್ರಹ್ಮಾವರ 5.7 ಮಿ.ಯೂ, ಕಾಪು 5.4 ಮಿ.ಯೂ, ಕೋಟ 2.9 ಮಿ.ಯೂ, ಕುಂದಾಪುರ 6.3 ಮಿ.ಯೂ, ಬೈಂದೂರು 2.6 ಮಿ.ಯೂ ಪ್ರತಿ ತಿಂಗಳು ಬಳಕೆಯಾಗುತ್ತಿದೆ.
50 ಕೋ.ರೂ ವಿದ್ಯುತ್ ಬಳಕೆ
ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ ಸರಾಸರಿ 50 ಕೋ. ರೂ. ಹಾಗೂ ವಾರ್ಷಿಕ 600 ಕೋ.ರೂ. ವಿದ್ಯುತ್ ಬಿಲ್ ಪಾವತಿಯಾಗುತ್ತಿದೆ. ಸಿಬಂದಿಗಳ ಸಂಬಳ ಹಾಗೂ ನಿರ್ವಹಣೆಗೆ ವಾರ್ಷಿಕ 80 ಕೋ. ರೂ. ವ್ಯಯಿಸಲಾಗುತ್ತಿದೆ. ಮೆಸ್ಕಾಂ ವಿದ್ಯುತ್ ಬಿಲ್ ಪಾವತಿಯಲ್ಲಿ ಶೇ. 100ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.
ಮೊಬೈಲ್ ಸಂದೇಶ
ಉಡುಪಿ ಹಾಗೂ ಮಣಿಪಾಲ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಮೊಬೈಲ್ ಮೂಲಕ ಬಳಕೆ ಮಾಡಿದ ವಿದ್ಯುತ್ ಬಿಲ್ ಮೊತ್ತ ಕಳುಹಿಸಲಾಗುತ್ತದೆ.
ಶೇ. 100ರಷ್ಟು ಪ್ರಗತಿ
ವಿದ್ಯುತ್ ಬಿಲ್ ಪಾವತಿಯಲ್ಲಿ ಜಿಲ್ಲೆ ಶೇ 100 ರಷ್ಟು ಪ್ರಗತಿ ಸಾಧಿಸಿದೆ. ಕೆಲವೊಂದು ಪ್ರದೇಶದಲ್ಲಿ ಜನರು ಸೋಲಾರ್ ಆಳವಡಿಸಿಕೊಂಡಿದ್ದಾರೆ.
-ನರಸಿಂಹ ಪಂಡಿತ್, ಮೆಸ್ಕಾಂ ಅಧೀಕ್ಷಕ, ಉಡುಪಿ.
ಆನ್‌ಲೈನ್ ಗ್ರಾಹಕರ ಸಂಖ್ಯೆ ಶೇ. 50 ಹೆಚ್ಚಳ
ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡುವ ಗ್ರಾಹಕರ ಸಂಖ್ಯೆ 50 ಶೇ. ಹೆಚ್ಚಾಗಿದೆ.
-ಮಂಜುನಾಥ, ಉಪ ಲೆಕ್ಕ ನಿರ್ವಹಣಾಧಿಕಾರಿ ಮೆಸ್ಕಾಂ, ಉಡುಪಿ.
ಸಮಯ ಉಳಿಕೆ
ಮೆಸ್ಕಾಂನಲ್ಲಿ ಇ-ಪಾವತಿ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ನಮಗೆ ಸಾಕಷ್ಟು ಉಪಯೋಗವಾಗಿದೆ. ವಿದ್ಯುತ್ ಬಿಲ್ ಆನ್‌ಲೈನ್‌ನಲ್ಲಿ ಪಾವತಿಸುವುದರಿಂದ ಸಮಯ ಉಳಿಕೆಯಾಗಿದೆ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಕಾಯೋದು ತಪ್ಪಿದೆ.
– ರಾಘವೇಂದ್ರ,ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.