ಉನ್ನತ ಶಿಕ್ಷಣವೆಂಬ ಅವಕಾಶಗಳ ಹೆಬ್ಟಾಗಿಲು ತೆರೆಯಲಿ


Team Udayavani, Mar 8, 2018, 6:00 AM IST

0603kde1B.jpg

ಶಿಕ್ಷಣಕ್ಕೂ ಊರಿನ ಅಭಿವೃದ್ಧಿಗೂ ಅವಿನಾಭಾವ ಸಂಬಂಧವಿದೆ. ಎಷ್ಟೋ ಬಾರಿ ನಾವು ಶಿಕ್ಷಣವೆಂದರೆ ಬರೀ ಬೌದ್ಧಿಕತೆಯ ವಿಸ್ತಾರ ಎಂದುಕೊಳ್ಳುತ್ತೇವೆ. ಆದರೆ ಅದರಿಂದಲೂ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿನ ಆರ್ಥಿಕತೆಗೆ ಬೆನ್ನೆಲುಬು ಎನ್ನುವುದನ್ನು ನಮ್ಮ ಜನಪ್ರತಿನಿಧಿಗಳು ಅರಿಯುವ ಕ್ಷಣವಿದು. ಆಗ ಕುಂದಾಪುರ ಮತ್ತಷ್ಟು ಎತ್ತರಕ್ಕೆ ಏರೀತು.

ಕುಂದಾಪುರ: ತಾಲೂಕಿನ ಒಟ್ಟೂ ಚಿತ್ರಣ ಈಗಾಗಲೇ ಹೇಳಿದಂತೆ ನಗರ, ಗ್ರಾಮೀಣ ಹಾಗೂ ಅರೆ ಗ್ರಾಮೀಣ. ಹಾಗಾಗಿ ಶಿಕ್ಷಣದ ಮಹತ್ವ ಇಲ್ಲಿ ಉಳಿದೆಲ್ಲದಕ್ಕಿಂತ ಮಹತ್ವದ್ದು. ಹಾಗೆಯೇ ಶೈಕ್ಷಣಿಕ ಸ್ಥಿತಿಗತಿಯೂ ಕೊಂಚ ವಿಭಿನ್ನ.  ಉಡುಪಿ ಜಿಲ್ಲೆ ಸಾಕ್ಷರತೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಆದರೆ ಜಿಲ್ಲೆಗೆ ಹೋಲಿಸಿದರೆ ಕುಂದಾಪುರ ತಾಲೂಕಿನ ಸಾಕ್ಷರತೆಯ ಪ್ರಮಾಣ ಇನ್ನಷ್ಟು ಏರಬೇಕಿದೆ. ಇದು ಬರೀ ಹಂಬಲವಷ್ಟೇ ಅಲ್ಲ ; ಗುರಿಯಾಗುವ ಹೊತ್ತಿದು. ಪ್ರಸ್ತುತ ತಾಲೂಕಿನಲ್ಲಿ ಎರಡು ಸರಕಾರಿ ಪದವಿ ಕಾಲೇಜುಗಳಿವೆ. ಎಂಕಾಂ ಹೊರತುಪಡಿಸಿದರೆ ಬೇರೆ ಯಾವುದೇ ಸ್ನಾತಕೋತ್ತರ ಕೋರ್ಸ್‌ಗಳಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕಾಲೇಜುಗಳು, ಕೋರ್ಸ್‌ ಗಳು ಲಭ್ಯವಾಗಬೇಕಿದೆ.

ತಾಲೂಕುವಾರು ನೋಡಿದರೆ ಉಡುಪಿ ಶೇ. 89.3ರಷ್ಟು ಸಾಕ್ಷರತೆ ಹೊಂದಿದ್ದರೆ, ಕಾರ್ಕಳದಲ್ಲಿ ಶೇ. 86.7ರಷ್ಟಿದೆ. ಕುಂದಾಪುರ ಶೇ. 81.6ರಷ್ಟು ಸಾಕ್ಷರರಿದ್ದಾರೆ. ಜಿಲ್ಲೆಯ ಒಟ್ಟು ಸಾಕ್ಷರತೆಯ ಪ್ರಮಾಣ ಶೇ. 86.24. ಲಿಂಗಾಧಾರಿತ ಸಾಕ್ಷರತೆ ಪ್ರಮಾಣದಲ್ಲೂ ಕುಂದಾಪುರ ಪ್ರಗತಿ ಸಾಧಿಸಬೇಕು. 

ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಾಥಮಿಕ ಶಾಲೆಗಳನ್ನು ಹೊಂದಿದೆ ಎನ್ನುವ ಹೆಗ್ಗಳಿಕೆ ಕುಂದಾಪುರ ತಾಲೂಕಿನದ್ದು. ಇಲ್ಲಿ ಪ್ರತಿ ಸಾವಿರ ವಿದ್ಯಾರ್ಥಿಗಳಿಗೆ 8 ಶಾಲೆಗಳಿವೆ. ಕುಂದಾಪುರದಲ್ಲಿ 52 ಕಿರಿಯ, 76 ಹಿರಿಯ ಒಟ್ಟು 128 ಸರಕಾರಿ ಶಾಲೆಗಳು, 25 ಅನುದಾನಿತ ಖಾಸಗಿ, 22 ಅನುದಾನ ರಹಿತ ಖಾಸಗಿ, ಒಟ್ಟು 175 ಪ್ರಾಥಮಿಕ ಶಾಲೆಗಳಿವೆ. 20 ಸರಕಾರಿ, 18 ಅನುದಾನಿತ, 7 ಅನುದಾನ ರಹಿತ ಖಾಸಗಿ ಸೇರಿದಂತೆ ಒಟ್ಟು 45 ಪ್ರೌಢಶಾಲೆಗಳಿವೆ. 

ಸೌಕರ್ಯಗಳು ಬೇಕು
ಕುಂದಾಪುರದ 22 ಕಿರಿಯ ಪ್ರಾ. ಶಾಲೆಗಳು, 28 ಹಿ.ಪ್ರಾ. ಶಾಲೆಗಳಲ್ಲಿ ಅಡುಗೆ ಕೋಣೆ, ಹಲವು ಶಾಲೆಗಳಲ್ಲಿ ಆಟದ ಮೈದಾನ, ಆವರಣ ಗೋಡೆ, ವಿದ್ಯುತ್‌ ಸೌಕರ್ಯ, ಗ್ರಂಥಾಲಯ, ಸ್ವಂತ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. ಶೇ. 90 ರಷ್ಟು ಶಿಕ್ಷಕರಿದ್ದಾರೆ. ಹಿರಿಯ ಪ್ರಾಥಮಿಕ  15 ಹಾಗೂ  ಪ್ರೌಢಶಾಲೆಗಳಿಗೆ 3 ಮುಖ್ಯ ಶಿಕ್ಷಕರು ಬೇಕಾಗಿದ್ದಾರೆ. ಶೌಚಾಲಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಲಭ್ಯವಾದರೆ ಅನುಕೂಲ.

ಜಿಲ್ಲೆಯಲ್ಲಿ 3 ವೈದ್ಯಕೀಯ ಕಾಲೇಜು ಗಳಿದ್ದರೂ ಕುಂದಾಪುರದಲ್ಲಿಲ್ಲವೆಂಬ ಕೊರಗಿದೆ. ಕೋಟೇಶ್ವರ ಹಾಗೂ ಶಂಕರನಾರಾಯಣದಲ್ಲಿ ಎರಡು ಸರಕಾರಿ ಪದವಿ ಕಾಲೇಜುಗಳಿವೆ. ಕುಂದಾಪುರದ ಎಂಐಟಿ ಎಂಜಿನಿಯರಿಂಗ್‌ ಹಾಗೂ ಕಾಮತ್‌ ಇನ್‌ಸ್ಟಿÕಟ್ಯೂಟ್‌ ಡಿಪ್ಲೊಮಾ ಕಾಲೇಜುಗಳಿವೆ.  

ಕೋರ್ಸ್‌ಗಳ ಆಯ್ಕೆ ಬೇಕು”
ತಾಲೂಕಿನಲ್ಲಿರುವ ಎರಡು ಸರಕಾರಿ ಪದವಿ ಕಾಲೇಜುಗಳಲ್ಲಿ ಎಂಕಾಂ ಬಿಟ್ಟರೆ ಬೇರೆ ಕೋರ್ಸ್‌ಗಳಿಲ್ಲ. ಎಂಸ್ಸಿ, ಎಂಎ, ಎಂಎಸ್‌ಡಬ್ಲೂÂ ಕೋರ್ಸ್‌ಗಳಿಗಾಗಿ ಸಿದ್ದಾಪುರ, ಶಂಕರನಾರಾಯಣ ಭಾಗದ ಸುಮಾರು 19 ವಿದ್ಯಾರ್ಥಿಗಳು ಬಾಕೂìರು ಕಾಲೇಜಿಗೆ ಹೋಗುತ್ತಾರೆ. ಶಂಕರನಾರಾಯಣದ ಪದವಿ ಕಾಲೇಜಿನಲ್ಲಿ ಬಿಸಿಎ, ಬಿಎಸ್ಸಿ ಕೋರ್ಸ್‌ಗಳಿಲ್ಲ. ಅನೇಕ  ವಿದ್ಯಾರ್ಥಿಗಳು ಕುಂದಾಪುರ ಅಥವಾ ಉಡುಪಿಗೆ ತೆರಳುತ್ತಿದ್ದಾರೆ. ಎರಡೂ ಸರಕಾರಿ ಪದವಿ ಕಾಲೇಜುಗಳಲ್ಲೂ ಕಟ್ಟಡ, ತರಗತಿ ಕೋಣೆ, ಉಪನ್ಯಾಸಕರು ಬೇಕು.ವಿಶಾಲವಾದ ಮೈದಾನ ಮತ್ತು ಪ್ರತ್ಯೇಕ ಗ್ರಂಥಾಲಯಗಳದ ಬೇಡಿಕೆಯೂ ಇದೆ. 

ಆಗಬೇಕಾದದ್ದಿವು
ಕುಂದಾಪುರದಲ್ಲೂ ಸರಕಾರಿ ಎಂಜಿನಿಯರಿಂಗ್‌ ಕಾಲೇಜು, ವೈದ್ಯಕೀಯ ಕಾಲೇಜು ಆರಂಭವಾದರೆ ಹಲವರು ಪರವೂರಿಗೆ ತೆರಳುವುದು ತಪ್ಪುತ್ತದೆ. ಐಟಿಐ ಕಾಲೇಜು ಕುಂದಾಪುರದಿಂದ 20 ಕಿ.ಮೀ. ದೂರದ ಬಿದ್ಕಲ್‌ಕಟ್ಟೆಯಲ್ಲಿ ಮಾತ್ರವಿದೆ. ಕುಂದಾಪುರ ಪರಿಸರದಲ್ಲೊಂದು ಐಟಿಐ ಕಾಲೇಜು ನಿರ್ಮಾಣವಾಗಬೇಕಿದೆ. 

ಪದವಿ, ಪ.ಪೂ. ಸರಕಾರಿ, ಖಾಸಗಿ ಕಾಲೇಜುಗಳು
– ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು
–  ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜು
– ಭಂಡಾರ್‌ಕಾರ್ ಕಾಲೇಜು
–  ಡಾ| ಬಿ.ಬಿ. ಹೆಗ್ಡೆ ಕಾಲೇಜು
–  ಬಸೂÅರು ಶಾರದಾ ಕಾಲೇಜು

ಪದವಿಪೂರ್ವ ಕಾಲೇಜುಗಳು
–  ಕೋಟೇಶ್ವರ ಪ.ಪೂ.
– ತೆಕ್ಕಟ್ಟೆ ಪ.ಪೂ.
– ಕುಂದಾಪುರ ಪ.ಪೂ.
– ಬಿದ್ಕಲ್‌ಕಟ್ಟೆ ಪ.ಪೂ.
– ಶಂಕರನಾರಾಯಣ ಪ.ಪೂ.
– ಹೊಸಂಗಡಿ ಪ.ಪೂ.
– ಹಾಲಾಡಿ ಪ.ಪೂ.
– ಭಂಡಾರ್‌ಕಾರ್ 
– ಆರ್‌. ಎನ್‌. ಶೆಟ್ಟಿ
– ಬ್ಯಾರೀಸ್‌ ಕೋಡಿ
– ಸಂತ ಮೇರಿ ಪ.ಪೂ.
– ಬಸೂÅರು ಶಾರದಾ
– ಮದರ್‌ ತೆರೆಸಾ ಶಂಕರನಾರಾಯಣ
– ವೆಂಕಟರಮಣ ಕುಂದಾಪುರ
– ಗುರುಕುಲ ಕೋಟೇಶ್ವರ
– ಎಕ್ಸಲೆಂಟ್‌ ಕೋಟೇಶ್ವರ 

ಪ್ರಗತಿಗೆ  ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುತ್ತಿರುವ ಪ್ರಯತ್ನ. ಕುಂದಾಪುರ ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್‌ ನಂಬರ್‌ 91485 94259 ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ.

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.