ಬೆಳ್ಳಂಬೆಳಗ್ಗೆ ಉಡುಪಿ ನಗರಸಭೆ ಅಧಿಕಾರಿಗಳ ಕಾರ್ಯಾಚರಣೆ; ಮಸೀದಿ ಎದುರಿನ ಕಟ್ಟಡ ತೆರವು
Team Udayavani, Mar 26, 2022, 8:45 AM IST
ಉಡುಪಿ: ನಗರಸಭೆ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು, ನಗರದ ಹೃದಯ ಭಾಗದಲ್ಲಿರುವ ಜಾಮಿಯಾ ಮಸೀದಿ ಎದುರಿದ್ದ ಅನಧಿಕೃತ ಎರಡು ಹೊಟೇಲ್ ಗಳಿದ್ದ (ಝಾರ ಮತ್ತು ಝೈತೂನ್) ಕಟ್ಟಡವನ್ನು ತೆರವುಗೊಳಿಸಿದ್ದಾರೆ.
ಈ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನ್ಯಾಯಾಲಯದ ಆದೇಶವಿದ್ದರೂ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳದ ಕುರಿತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಕಾಪು ತಾಲೂಕಿನಲ್ಲೇ ಉಡುಪಿ ಮಲ್ಲಿಗೆ ಕ್ಲಸ್ಟರ್: ಜಿ.ಪಂ. ಸಿಇಒ
ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದೆ. ತಹಶೀಲ್ದಾರ್ ಮತ್ತು ಪೌರಾಯುಕ್ತರು ಮೊಕ್ಕಾಂ ಹೂಡಿದ್ದಾರೆ.
ಜಾಮಿಯಾ ಮಸೀದಿ ಎದುರು ಈ ಮೊದಲು ಗುಜರಿ ಅಂಗಡಿಯಿತ್ತು. ಮಸೀದಿಯಿಂದ ಜಾಗವನ್ನು ಲೀಸ್ ಗೆ ಪಡೆದು ನಿಯಮಗಳನ್ನು ಗಾಳಿಗೆ ತೂರಿ ಹೊಟೇಲ್ ನಿರ್ಮಿಸಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಹಲವು ತಿಂಗಳ ಹಿಂದೆಯೇ ಕಟ್ಟಡ ತೆರವುಗೊಳಿಸಲು ನ್ಯಾಯಾಲಯ ಸೂಚಿಸಿದೆ. ರಾತ್ರಿಯಿಂದಲೇ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ ನಗರಸಭೆ ಆಡಳಿತ ಶನಿವಾರ ಬೆಳಗ್ಗೆಯೇ ನೂರಾರು ಪೊಲೀಸರ ಭದ್ರತೆಯೊಂದಿಗೆ ಕಾರ್ಯಚರಣೆಗೆ ಇಳಿದಿದೆ.
ಹೊಟೇಲ್ ಮಾಲಕರ ತಾವೇ ತೆರವು ಮಾಡುತ್ತೇವೆ ಎಂಬ ಮನವಿಗೆ ನಗರಸಭೆ ಅಧಿಕಾರಿಗಳು ಪುರಸ್ಕರಿಸಿದ್ದು, ಅದರಂತೆ ತೆರವು ಕಾರ್ಯ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.