“ಕೇಂದ್ರ ಸರಕಾರದಿಂದ ಸಂವಿಧಾನ ವಿರೋಧಿ ನಿಲುವು’
Team Udayavani, Aug 19, 2017, 7:05 AM IST
ಕಾರ್ಕಳ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಸಂವಿಧಾನ ವಿರೋಧಿ ನಿಲುವನ್ನು ಹೊಂದಿದ್ದು, ಅದಾನಿ,ಅಂಬಾನಿ ಮೊದಲಾದ ಬೃಹತ್ ಉದ್ಯಮ ವಲಯದ 8 ಲಕ್ಷ ಕೋಟಿಗೂ ಹೆಚ್ಚು ಸಾಲ ಮರುಪಾವತಿ ಮನ್ನಾ ಮಾಡುವ ಮೂಲಕ ಉಳ್ಳವರ ಸರಕಾರವೆಂದು ಸಾಬೀತುಗೊಳಿಸಿದೆ ಎಂದು ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದ್ದಾರೆ.
ಅವರು ನಿಟ್ಟೆ ಪರಪ್ಪಾಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಚೈತನ್ಯಧಾರಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಬ್ಯಾಂಕ್ ರಾಷ್ಟ್ರೀಕರಣ ಮತ್ತು ಸಾಲಮೇಳದ ಮೂಲಕ ಅಂದು ಕಾಂಗ್ರೆಸ್ ಬಡವರಿಗೆ ಬ್ಯಾಂಕಿನೊಂದಿಗಿನ ವ್ಯವಹಾರದ ಅವಕಾಶ ಮಾಡಕೊಟ್ಟರೆ,ಇಂದು ಮೋದಿ ನೇತೃತ್ವ ಬಿಜೆಪಿ ಸರಕಾರ ನೋಟು ಅಪನಗದೀಕರಣದ ಮೂಲಕ ಬಡವರಿಗೆ ಬ್ಯಾಂಕ್ ವ್ಯವಹಾರದ ಅವಕಾಶವನ್ನೆ ಮುಚ್ಚಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಎನ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿ, ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಂತೆ ಕರೆನೀಡಿದರು. ಹಾಗೂ ಬೂತ್ ಸಮಿತಿ ರಚನೆ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ನೇಮಿರಾಜ ರೈ ಸಂದಭೋìಚಿತವಾಗಿ ಮಾತನಾಡಿದರು.
ಸಭೆಯಲ್ಲಿ ಭೋಜ ಶೆಟ್ಟಿಗಾರ್, ಲೀಲ ಪೂಜಾರ್ತಿ, ದಿವಾಕರ ನಿಟ್ಟೆ, ಏಸುದಾಸ, ಹರೀಶ ಆಚಾರ್ಯ, ಯಶೋಧಾ ಪೂಜಾರಿ ಹಾಗೂ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.