ಆಹಾರ ಪದಾರ್ಥಗಳಿಗೆ ಆರ್ಡರ್ ಮಾಡಿ ವಂಚನೆ!
ಕುಂದಾಪುರದ ಹೊಟೇಲ್‌ನಲ್ಲಿ ನಡೆದ ಘಟನೆ
Team Udayavani, Sep 11, 2019, 5:08 AM IST
ಕುಂದಾಪುರ: ಸೈನಿಕನ ಹೆಸರಿನಲ್ಲಿ ಹೊಟೇಲ್‌ಗೆ ಕರೆ ಮಾಡಿ ಆಹಾರ ಪದಾರ್ಥಗಳಿಗೆ ಆರ್ಡರ್ ಮಾಡಿ ಹೊಟೇಲ್‌ನವರ ಖಾತೆಯಿಂದಲೇ ಹಣ ಎಗರಿಸಿದ ಘಟನೆ ಕುಂದಾಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಇಲ್ಲಿನ ಹೊಟೇಲ್ ಒಂದಕ್ಕೆ ನಾಸಿಕ್ ರೆಜಿಮೆಂಟಿನ ಸೈನಿಕ ಪರ್ಮಿಲ್ ಕುಮಾರ್ ಎಂಬ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಸುಮಾರು 4 ಸಾವಿರ ರೂ.ಗಳ ಆಹಾರ ಪದಾರ್ಥಕ್ಕೆ ಆರ್ಡರ್ ಮಾಡಿದ. ಆಹಾರ ಸಾಮಗ್ರಿ ಕೊಂಡೊಯ್ಯಲು ನಮ್ಮ ಕಡೆಯ ವ್ಯಕ್ತಿಯೊಬ್ಬರು ಬರುತ್ತಾರೆ, ಆನ್‌ಲೈನ್ ಪಾವತಿ ಮಾಡುತ್ತೇನೆ ನಿಮ್ಮ ಬ್ಯಾಂಕ್ ವಿವರ ಕೊಡಿ ಎಂದು ಕೇಳಿದ. ತನ್ನ ಐಡೆಂಟಿಟಿ ಕಾರ್ಡ್ ಎಂದು ವಾಟ್ಸ್‌ಆ್ಯಪ್‌ಗೆ ಕ್ಯಾಂಟೀನ್ ಸ್ಮಾರ್ಟ್ ಕಾರ್ಡ್ ಗುರುತಿಚೀಟಿ, ಎಟಿಎಂ ಕಾರ್ಡ್ ಚಿತ್ರಗಳನ್ನು ಕಳುಹಿಸಿದ. ರಾತ್ರಿ 11.30ರ ವರೆಗೂ ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಮೊಬೈಲ್‌ಗೆ ಬರುವ ಪಿನ್ ನಂಬರ್‌ನ್ನು ಪದೇ ಪದೇ ಕೇಳುತ್ತಿದ್ದ. ಹಣ ಮಾತ್ರ ವರ್ಗಾಯಿಸಿಲ್ಲ. ಬದಲಿಗೆ ಹೊಟೇಲ್ ಸಿಬಂದಿ ನೀಡಿದ ಸಂಖ್ಯೆ ಉಪಯೋಗಿಸಿ ಅವರ ಖಾತೆಯಲ್ಲಿದ್ದ ಹಣವನ್ನೇ ಲಪಟಾಯಿಸಿರುವ ಸಂಶಯ ಇದೆ. ಆಹಾರವನ್ನು ಫ್ರಿಜ್‌ನಲ್ಲಿಡಿ, ಹಣ ವರ್ಗಾವಣೆಯಾಗುತ್ತಿಲ್ಲ ಎಂದ ಆಸಾಮಿ ಅನಂತರ ಹಣವನ್ನೂ ನೀಡಿಲ್ಲ, ಕರೆಯನ್ನೂ ಸ್ವೀಕರಿಸುತ್ತಿಲ್ಲ, ಆಹಾರವನ್ನೂ ಕೊಂಡೊಯ್ದಿಲ್ಲ ಎಂದು ಹೊಟೇಲ್‌ನವರು ದೂರಿದ್ದಾರೆ.
ಎಷ್ಟು ಮೊತ್ತ ಖಾತೆಯಿಂದ ಹೋಗಿದೆ ಎನ್ನುವುದು ಬ್ಯಾಂಕ್‌ಗೆ ಹೋಗಿ ಖಾತೆ ಪರಿಶೀಲಿಸಿದ ಬಳಿಕವಷ್ಟೇ ತಿಳಿಯಬೇಕಿದೆ. ಇನ್ನೊಂದು ರೀತಿಯ ವಂಚನಾ ಜಾಲವಿದೆ. ಗೂಗಲ್‌ಪೇ, ಪೇಟಿಎಂ, ಭೀಮ್ ಮೊದಲಾದ ಹಣ ವರ್ಗಾವಣೆ ತಾಣಗಳ ಮೂಲಕ ಹಣ ವರ್ಗಾಯಿ ಸುತ್ತೇವೆ ಎಂದು ಇವರು ಹಣ ವಂಚಿಸುತ್ತಾರೆ. ನಿಮಗೆ ಬಹುಮಾನ ಬಂದಿದೆ, ನಿಮ್ಮ ಗೂಗಲ್ ಪೇಗೆ ಹಣ ಕಳುಹಿಸಿದ್ದೇವೆ, ಮೊಬೈಲ್‌ಗೆ ಬಂದ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್ ಸಂಖ್ಯೆ) ನಂಬರ್ ಒತ್ತಿಬಿಡಿ ಎಂದು ಕೇಳುತ್ತಾರೆ. ಗೂಗಲ್ ಪೇಗೆ ಹೋದಾಗ ಅಲ್ಲಿ ಮೊತ್ತ ನಮೂದಿಸಿ ಹಣ ಕೇಳಿದವರ ಹೆಸರು ಇರುತ್ತದೆ. ಅವಸರದಲ್ಲಿ ಇದನ್ನು ನೋಡಿ ಒಟಿಪಿ ಕೊಟ್ಟರೆ ನಿಮ್ಮ ಖಾತೆಯಲ್ಲಿದ್ದ ಹಣವೇ ಹೋಗುತ್ತದೆ. ಏಕೆಂದರೆ ಅವರು ಹಣ ಕಳುಹಿಸಿಲು ವಿನಂತಿ ಮಾಡಿರುತ್ತಾರೆ. ಒಟಿಪಿ ನೀಡುವ ಮೂಲಕ ನಿಮ್ಮದೇ ಖಾತೆ ಯಿಂದ ಅವರಿಗೆ ಹಣ ನೀಡಲು ಅನುಮತಿ ನೀಡಿದಂತಾಗು ತ್ತದೆ. ಈ ಕುರಿತು ತೀವ್ರ ಎಚ್ಚರ ವಹಿಸುವ ಅಗತ್ಯವಿದೆ.
ಹೊಸ ವಿಧದ ವಂಚನೆ
ಬೇರೆ ಬೇರೆ ಕಂಪನಿಗಳು ಈಗ ಆನ್‌ಲೈನ್ ಮೂಲಕ ಆಹಾರ ವಿತರಣೆ ಮಾಡುತ್ತಿವೆ. ಇದೇ ನಂಬಿಕೆಯಲ್ಲಿ ಹೋಟೆಲ್‌ನವರು ಕೂಡ ಕರೆ ನಂಬಿ ಆಹಾರ ಸಿದ್ಧ ಪಡಿಸಿ ದ್ದರು. ಆದರೆ ಆತ ಎಟಿಎಂ ಕಾರ್ಡ್ ನಂಬರ್ ಹಾಗೂ ಪಿನ್ ನಂಬರ್ ಕೊಟ್ಟ ಕಾರಣ ಹೋಟೆಲ್‌ನವರ ಹಣವೇ ಕಳವಾಗು ವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಗಳ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದರೆ 21 ಲಕ್ಷ ಬಹುಮಾನ: ಬಿಗ್ ಬಾಸ್‌ಗೆ ಸವಾಲು
Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್ ನ್ಯೂಸ್ ಕೊಟ್ಟ ಚಿತ್ರತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.