“ಸಾವಯವ ಊಟಕ್ಕೆ ಜನಜಾಗೃತಿ ಅಗತ್ಯ’
Team Udayavani, Aug 9, 2017, 6:40 AM IST
ಉಡುಪಿ: ಸಾವಯವ ಊಟದ ಇನ್ನಷ್ಟು ಜನಜಾಗೃತಿ ರೂಪಿಸಬೇಕಾಗಿದೆ ಎಂದು ಸ್ವತಃ ಎಂಬಿಬಿಎಸ್ ಪದವೀಧರರೂ, ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟ ದಲ್ಲಿ 37ನೇ, ರಾಜ್ಯದಲ್ಲಿ 3ನೇ ರ್‍ಯಾಂಕ್ ಗಳಿಸಿದ ಬಂಟ್ವಾಳದ ನವೀನ್ ಭಟ್ ಅಭಿಪ್ರಾಯಪಟ್ಟರು.
ಬನ್ನಂಜೆ ಶಿರಿಬೀಡು ಶಾಲೆ ಬಳಿಯ ಶಿರಿಬೀಡು ಕ್ಯಾಂಟೀನ್‌ನಲ್ಲಿ ಶನಿವಾರ ಮಣ್ಣಿನ ಮಡಕೆಯಲ್ಲಿ ತಯಾರಿಸಿದ ಊಟವನ್ನು ಸವಿದ ಅವರು ಸುದ್ದಿಗಾರರ ಜತೆ ಮಾತನಾಡಿ, ಇದೊಂದು ಉತ್ತಮ ಆರಂಭ. ಆದರೆ ವಿವಿಧೆಡೆಗಳಲ್ಲಿ ಇಂತಹ ಕೇಂದ್ರಗಳು ಆರಂಭವಾಗಬೇಕು, ಜನರಲ್ಲಿ ಜಾಗೃತಿ ರೂಪುಗೊಳ್ಳಬೇಕು.
ಇದು ಲಾಭಕ್ಕೆ ಎಂಬ ಅರ್ಥವಲ್ಲ. ಇಲ್ಲಿಗೇ ಈ ಪ್ರಯತ್ನ ನಿಲ್ಲದೆ ಇದನ್ನು ಅನುಸರಿಸುವಂತಾಗಲು ಜನರಿಗೆ ಇಂತಹ ಅಡುಗೆ ತಯಾರಿಸಲು ಬೇಕಾದ ತರಬೇತಿ ಕೇಂದ್ರಗಳು ಆರಂಭಗೊಳ್ಳಬೇಕು ಎಂದರು.
ಈಗ ಜಲಮಾಲಿನ್ಯ, ಆಹಾರ ಮಾಲಿನ್ಯದಂತಹ ಸಮಸ್ಯೆಗಳು ಹೆಚ್ಚುತ್ತಿರುವಾಗ ಎಲ್ಲರೂ ಸಾವಯವ ಪದಾರ್ಥಗಳ ಸೇವನೆಗೆ ಬರಬೇಕಾಗುತ್ತದೆ ಎಂದು ಭಟ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.