ಗ್ರಾಮೀಣ ಭಾಗದಲ್ಲಿ ಸೇವೆ ‘ನೇತ್ರ ಜ್ಯೋತಿ’ ವಿದ್ಯಾರ್ಥಿಗಳ ಗುರಿಯಾಗಲಿ
Team Udayavani, Jul 31, 2017, 5:35 AM IST
‘ಓರಿಯೆಂಟೇಷನ್ – 2017’: ನೇತ್ರಜ್ಯೋತಿ ಕಾಲೇಜು : ಹೊಸ ಬ್ಯಾಚ್ ಉದ್ಘಾಟನೆ
ಉಡುಪಿ: ವಿದ್ಯಾರ್ಥಿಗಳು ತಮ್ಮ ಪದವಿಯ ಬಳಿಕ ಗ್ರಾಮೀಣ ಪ್ರದೆಶಗಳಲ್ಲಿ ಸೇವೆಯನ್ನು ಸಲ್ಲಿಸಲು ಆಸಕ್ತಿಯನ್ನು ತೋರಿಸಬೇಕು ಎಂದು ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾಗಿರುವ ಹಾಗೂ ಗ್ರಾಮೀಣ ಭಾಗದಲ್ಲಿ ಹಲವಾರು ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಿರುವ ಅನುಭವವನ್ನು ಹೊಂದಿರುವ ಡಾ. ಕೃಷ್ಣಪ್ರಸಾದ್ ಅವರು ಹೊಸ ವಿದ್ಯಾರ್ಥಿಗಳಿಗೆ ಕರೆಯನ್ನು ನೀಡಿದರು. ಕರ್ನಾಟಕ ಸರಕಾರದ ‘ದೃಷ್ಟಿ ಸಮಿತಿ’ಯ ಅಧ್ಯಕ್ಷರಾಗಿರುವ ತಾವು ರಾಜ್ಯಾದ್ಯಂತ ಶಾಲೆಗಳಲ್ಲಿ ಉಚಿತ ಕಣ್ಣಿನ ಪರೀಕ್ಷಾ ಕ್ಯಾಂಪ್ ಗಳನ್ನು ಕಡ್ಡಾಯವಾಗಿ ನಡೆಸಲು ಅನುಕೂಲವಾಗುಂತೆ ಕಾನೂನು ಒಂದನ್ನು ರೂಪಿಸುತ್ತಿರುವುದಾಗಿ ಡಾ. ಕೃಷ್ಣಪ್ರಸಾದ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಸಾದ್ ನೇತ್ರಾಲಯದಲ್ಲಿ ಲಭ್ಯವಿರುವ ವಿಶ್ವದರ್ಜೆಯ ಸೌಲಭ್ಯಗಳ ಸದುಪಯೋಗವನ್ನು ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೆಲ್ಲರೂ ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಉಡುಪಿಯ ಸಹಾಯಕ ಜಿಲ್ಲಾಧಿಕಾರಿಯಾಗಿರುವ ಶ್ರೀಮತಿ ಅನುರಾಧ ಜಿ. ಅವರು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬಿಎಸ್ಸಿ (ನೇತ್ರಶಾಸ್ತ್ರ – ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟಿದೆ) ಮತ್ತು ಡಿಒಟಿ (ಪ್ಯಾರಾ ಮೆಡಿಕಲ್ ಬೋರ್ಡ್, ಕರ್ನಾಟಕ ಸರಕಾರ ಇದರ ಅಧೀನಕ್ಕೊಳಪಟ್ಟಿರುವುದು) ವಿದ್ಯಾರ್ಥಿ ಸಮೂಹಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯವನ್ನು ಒದಗಿಸುತ್ತಿರುವುದಕ್ಕೆ ಅನುರಾಧ ಅವರು ಡಾ. ಕೃಷ್ಣ ಪ್ರಸಾದ್ ಅವರನ್ನು ವಿಶೇಷವಾಗಿ ಅಭಿನಂದಿಸಿದರು. ಅವರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಅಂಗಸಂಸ್ಥೆಯಾಗಿರುವ ನೇತ್ರಜ್ಯೋತಿ ಕಾಲೇಜಿನ ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಪ್ರಸಾದ್ ನೇತ್ರಾಲಯದ ನಿರ್ದೇಶಕರಾಗಿರುವ ಶ್ರೀ ರಘುರಾಮ್ ರಾವ್ ಅವರು ಮಾತನಾಡಿ ನಾವೆಷ್ಟು ಗುಣಮಟ್ಟದ ಬೋಧನಾ ವ್ಯವಸ್ಥೆಯನ್ನು ಕಲ್ಪಿಸಿದರೂ ಅದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಫಲಿತಾಂಶವನ್ನು ತಂದುಕೊಡುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದೆ ಎಂದರು.
ಆಸ್ಪತ್ರೆಯ ಬೆಳವಣಿಗೆ, ಕಾಲೇಜನ್ನು ಪ್ರಾರಂಭಿಸುವ ಹಿಂದಿನ ಉದ್ದೇಶ, ವಿಶ್ವದರ್ಜೆಯ ಬೋಧನಾ ಕ್ರಮ ಮತ್ತು ವೈದ್ಯಕೀಯ ಸಲಕರಣೆಗಳ ಕುರಿತಾಗಿ ಡಾ. ಕೃಷ್ಣಪ್ರಸಾದ್ ಅವರು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲೆಯಾಗಿರುವ ಶ್ರೀಮತಿ ಪೂರ್ಣಿಮಾ ಅವರು ಕೋರ್ಸ್, ಅದರ ಪ್ರಯೋಜನಗಳು ಹಾಗೂ ಉದ್ಯೋಗವಕಾಶಗಳ ಕುರಿತಾಗಿ ಮಾಹಿತಿಯನ್ನು ನೀಡಿದರು. ಕಾಲೇಜಿನ ನಿಯಮಗಳು ಹಾಗೂ ಕಾಲೇಜು ಕ್ಯಾಲೆಂಡರ್ ಸಂಬಂಧಿ ಮಾಹಿತಿಗಳನ್ನು ನೇತ್ರಜ್ಯೋತಿ ಕಾಲೇಜಿನ ಆಡಳಿತಾಧಿಕಾರಿಯಾಗಿರುವ ಡಾ. ಗಿರಿಧರ ಕಾಂತಿ ನೀಡಿದರು.
ಇದೇ ಸಂದರ್ಭದಲ್ಲಿ ಕಾಲೇಜು ನಿಮಾರ್ಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅಬ್ದುಲ್ ಖಾದರ್ ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ. ಪರೇಶ್ ಪೂಜಾರಿ, ಡಾ. ಹರಿಪ್ರಸಾದ್ ಓಕುಡ, ಡಾ. ಶಮಂತ ಶೆಟ್ಟಿ ಸೇರಿದಂತೆ ಕಾಲೇಜಿಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನಜ್ವಾ ಶಬ್ಬರ್ ಅವರು ಸ್ವಾಗತಿಸಿದರು. ಎಂ.ವಿ. ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.