Sullia ನಿಯಂತ್ರಣಕ್ಕೆ ಬಾರದ ಅಡಿಕೆ ಎಲೆಚುಕ್ಕಿ ರೋಗ: ಕೃಷಿಕ ಆತ್ಮಹತ್ಯೆ
Team Udayavani, Jan 21, 2024, 11:19 PM IST
ಸುಳ್ಯ: ಅಡಿಕೆ ಕೃಷಿಗೆ ಎಲೆಚುಕ್ಕಿ ರೋಗ ಬಾಧಿಸಿ ನಿಯಂತ್ರಣಕ್ಕೆ ಬಾರದ ಕಾರಣ ಕೃಷಿಕರೋರ್ವರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.21ರಂದು ಸಂಭವಿಸಿದೆ. ಈ ಮೂಲಕ ತಾಲೂಕಿನಲ್ಲಿ ಒಂದು ತಿಂಗಳೊಳಗೆ ಇಬ್ಬರು ಕೃಷಿಕರು ಆತ್ಮಹತ್ಯೆ ಮಾಡಿಕೊಂಡಂತಾಗಿದೆ.
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ತೋಟಚಾವಡಿ ನಾರಾಯಣ ನಾಯಕ್ (55) ಅವರು ರವಿವಾರ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರು ಯಕ್ಷಗಾನದಲ್ಲಿ ಚೆಂಡೆ ಮದ್ದಳೆ ವಾದಕರಾಗಿಯೂ ಪ್ರಸಿದ್ಧರಾಗಿದ್ದರು.
ನಾರಾಯಣ ನಾಯಕ್ ಅವರ ಅಡಿಕೆ ಕೃಷಿಗೆ ಎಲೆಚುಕ್ಕಿ ರೋಗ ಬಾಧಿಸಿ ತೋಟ ಸರ್ವ ನಾಶವಾಗಿತ್ತು. ಅಪಾರ ನಷ್ಟ ಅನುಭವಿಸಿದ್ದರು. ರಬ್ಬರ್ ಇಳುವರಿಯಲ್ಲೂ ಕುಂಠಿತವಾಗಿದ್ದು, ಜೀವನ ನಿರ್ವಹಣೆ ನಡೆಸುವುದು ಹೇಗೆ ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಡೆತ್‌ನೋಟ್ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಎರಡನೇ ಘಟನೆ: ಅಡಿಕೆ ಹಳದಿ ರೋಗ ಹಾಗೂ ಅಡಿಕೆ ಎಲೆಚುಕ್ಕಿ ರೋಗದಿಂದ ನೊಂದು ಜ. 4ರಂದು ಆಲೆಟ್ಟಿ ಗ್ರಾಮದ ಜಗದೀಶ್ (56) ಎಂಬ ಕೃಷಿಕರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.