ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿ ಮಾದರಿಯಾದ ಇನ್ನಾ ಗ್ರಾ.ಪಂ.
Team Udayavani, Aug 10, 2017, 7:05 AM IST
ಬೆಳ್ಮಣ್: ಗ್ರಾಮದಲ್ಲಿ ಯಾವುದೇ ರಸ್ತೆ ಹದಗೆಟ್ಟರೆ ಅಥವಾ ಚರಂಡಿ ವ್ಯವಸ್ಥೆಗಳು ಸರಿಯಿಲ್ಲದಿದ್ದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಸರಕಾರದ ಅನುದಾನವನ್ನು ಕಾಯುವ ಕಾಲದಲ್ಲಿ ಇನ್ನಾ ಗ್ರಾಮ ಪಂಚಾಯತ್ ಸದಸ್ಯ ಅಲೆನ್ ಲೂವಿಸ್ ಡಿ’ಸೋಜಾ ತನ್ನ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ನಡೆಸಿ ಇತರರಿಗೆ ಮಾದರಿಯೆನಿಸಿದ್ದಾರೆ.
ಪಂಚಾಯತ್ ಸದಸ್ಯನಾಗಿ ತನ್ನ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ತೋರಿಸಿದ ಪಂ. ಸದಸ್ಯರ ಈ ಪರಿಕಲ್ಪನೆ ಗ್ರಾಮಸ್ಥರ ಶ್ಲಾಘನೆಗೆ ಪಾತ್ರವಾಗಿದೆ.
ಇನ್ನಾ ಗ್ರಾಮ ಪಂಚಾಯತ್‌ನ ಮಠದ ಕೆರೆ ಕೊಯ್ನಾರ್ ಸಾಂತೂರು ಕೊಪ್ಲ ರಸ್ತೆ ಹಾಗೂ ಕಾಯ್ನಾಲು ರಸ್ತೆ ಮಳೆಗಾಲದಲ್ಲಿ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯ ವಾಗಿ ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದ್ದು ಮಣ್ಣಿನ ರಸ್ತೆಯಲ್ಲಿ ವಾಹನ ಸಂಚಾರ ನಡೆಸಲಸಾಧ್ಯವಾಗಿತ್ತು. ಹೀಗಾಗಿ ಸ್ಥಳೀಯ ಇನ್ನಾ ಗ್ರಾಮ ಪಂಚಾಯತ್ ಸದಸ್ಯ ಅಲೆನ್ ಡಿ’ಸೋಜಾ ರವಿವಾರ ಸರಕಾರ ಹಾಗೂ ಇಲಾಖೆಯ ಯಾವುದೇ ಅನುದಾನವನ್ನು ಕಾಯದೆ ತಮ್ಮ ಸ್ವಂತ ಖರ್ಚಿನಲ್ಲಿ ಜಲ್ಲಿ ಹುಡಿ, ಮಣ್ಣು ಹಾಕಿಸಿ ರಸ್ತೆಯನ್ನು ಸಮತಟ್ಟು ಮಾಡಿ ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿದ್ದಾರೆ.
ಸಹಕರಿಸಿದ ಯುವಕ ಸಂಘ: ಗ್ರಾಮ ಪಂಚಾಯತ್ ಸದಸ್ಯ ಅಲೆನ್ ಡಿ’ಸೋಜಾರ ಈ ಸಮಾಜಮುಖೀ ಕಾರ್ಯಕ್ಕೆ ಸ್ಥಳಿಯ ಕಾಂಜರಕಟ್ಟೆ ಫ್ರೆಂಡ್ಸ್‌ನ ಯುವಕರು ಸಹಕಾರ ನೀಡಿದರು. ಬೆಳಗ್ಗಿನಿಂದಲೇ ರಸ್ತೆಯ ದುರಸ್ತಿ ಕಾರ್ಯದಲ್ಲಿ ತೊಡಗಿ ಅಲೆನ್ ಡಿಸೋಜಾರೊಂದಿಗೆ ಕೈ ಜೋಡಿಸಿದರು. ಅಲೆನ್ ಡಿ’ಸೋಜಾ ತಾನೇ ಸ್ವತಃ ಹಾರೆ ಪಿಕ್ಕಾಸಿ ಹಿಡಿದು ರಸ್ತೆ ದುರಸ್ತಿ ಕಾರ್ಯ ಮಾಡಿ ಕರಸೇವೆಯ ಫೋಸು ಕೊಡುವ ಇತರ ಜನಪ್ರತಿನಿಧಿ ಗಳಿಗೆ ಸವಾಲಾದರು.
ಇನ್ನಾ ಗ್ರಾಮದ ಕಾಯ್ನಾಲು ಹಾಗೂ ಕೊಯ್ನಾರ್ ಎರಡು ರಸ್ತೆಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಗ್ರಾಮಸ್ಥರಿಗೆ ಬಾರಿ ಹರ್ಷ ವ್ಯಕ್ತವಾಗಿದೆ. ಜನಪ್ರತಿನಿ ಧಿಗಳು ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಲು ಅನುದಾನವನ್ನು ಕಾಯುತ್ತಾರೆ. ಅಲ್ಲದೆ ಅದರಲ್ಲಿ ಬರುವ ಕಮಿಷನ್‌ಗೆ ಕೈಯೊಡ್ಡುತ್ತಾರೆ, ಆದರೆ ಇಲ್ಲಿ ಅಲೆನ್ ಡಿ’ಸೋಜಾ ಮಾತ್ರ ತಮ್ಮ ಸ್ವಂತ ಖರ್ಚಿನಲ್ಲೇ ಸ್ವತಃ ತಾವೇ ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಿ ಗಮನ ಸೆಳೆದಿದ್ದಾರೆ ಎನ್ನುವ ಸ್ಥಳೀಯ ಕಾಂಜರಕಟ್ಟೆ ಫ್ರೆಂಡ್ಸ್‌ನ ಸದಸ್ಯರಾದ ಗೋವಿಂದ ರಾಜ್, ಸಚಿನ್ ಕುಮಾರ್, ಯೋಗೀಶ್ ಆಚಾರ್ಯ, ಸಂದೀಪ್ ಪೂಜಾರಿ, ಪ್ರವೀಣ್, ಸುನೀಲ್ ಮತ್ತಿತರರು ಅಲೆನ್‌ಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ರಸ್ತೆ ದುರಸ್ತಿ ಮಾಡಿದ್ದೇನೆ, ಈ ಕಾರ್ಯವನ್ನು ಗ್ರಾಮದ ಜನರ ಅನುಕೂಲತೆಗಾಗಿ ಮಾಡಿದ್ದೇನೆ.
-ಅಲೆನ್ ಡಿಸೋಜಾ, ಗ್ರಾ.ಪಂ. ಸದಸ್ಯ ಇನ್ನಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.