ನಗರೀಕರಣದ ಹೊಸ ಆಯಾಮದತ್ತ ಪಡುಬಿದ್ರಿ


Team Udayavani, Jul 24, 2017, 6:15 AM IST

2007ra2–2(padubidriya-yigi.gif

ಪಡುಬಿದ್ರಿ: ನಗರೀಕರಣದ ಹೊಸ ಆಯಾಮದತ್ತ ಪಡುಬಿದ್ರಿಯು ಹೊರಳುತ್ತಿದೆ.  ಪಡುಬಿದ್ರಿಯಲ್ಲಿ ಹೆದ್ದಾರಿ ಚತುಃಷ್ಪಥ ಕಾಮಗಾರಿಗಾಗಿ ಈಗಾಗಲೇ ಹಳೆಯ  ಕಟ್ಟಡಗಳನ್ನು ಕೆಡವಲು ಆರಂಭವಾಗಿದೆ. ಇನ್ನೂ ನಾಲ್ಕೈದು ಕಟ್ಟಡಗಳು ಹೆದ್ದಾರಿ ಕಾಮಗಾರಿಗೆ ಭಾಗಶ: ಬಲಿಯಾಗಲಿವೆ. 

ಪಡುಬಿದ್ರಿಯಲ್ಲಿ ಹೊಸ ಚತುಃಷ್ಪಥ ಹೆದ್ದಾರಿಯ ಸಮತೋಲಿತ  ಸ್ಥಿತಿ ಹೇಗಿರುತ್ತದೆ. ದ್ವಿಪಥಗಳು ಈಗಿನ ಕಟ್ಟಡಗಳ ಎದುರು ಎಷ್ಟು ಎತ್ತರದಲ್ಲಿ  ಹಾದು ಹೋಗುತ್ತವೆ ಎಂಬುದನ್ನು ಆಧರಿಸಿ ನೂತನ ಪ್ರಯೋಗಗಳನ್ನು ಮಾಡೋಣವೆಂದು ಕೆಲ ಕಟ್ಟಡದ ಮಾಲಕರು ಬಯಸಿದ್ದಾರೆ. ಹಾಗಾಗಿ ಹಿಂದಿನ  ಪಡುಬಿದ್ರಿಯನ್ನು ನೋಡಿದ ಮಂದಿಗೆ ಹೊಸ ರೂಪದತ್ತ ಬದಲಾಗುತ್ತಿರುವ  ಪಡುಬಿದ್ರಿಯ  ಪರಿಚಯವೂ ಅಷ್ಟು ಸುಲಭವಾಗಿ ಆಗಲಿಕ್ಕಿಲ್ಲ. ಎಲ್ಲವೂ ಕಾಲಗರ್ಭದಲ್ಲಿ ಅಡಗಿದಾಗ ಮತ್ತೆ ಹಳ್ಳಿಯ ರೂಪಕ್ಕಿಳಿದು ಪುಟಿದೆದ್ದು ಬರಬೇಕಿದೆ ನಮ್ಮ ಪಡುಬಿದ್ರಿ.

ಪಡುಬಿದ್ರಿಗೊಂದು ಇತಿಹಾಸವಿದೆ. ಜೈನರರಸರ ಆಳ್ವಿಕೆಯ ಬೀಡು ಇದಾಗಿರುವುದಕ್ಕೆ ಪುರಾವೆಗಳೂ ಇಲ್ಲಿ ಲಭ್ಯವಿವೆ. ಆದರೆ ಸುಮಾರು 2ದಶಕಗಳ ಹಿಂದೆಯೇ ನಗರೀಕರಣಕ್ಕೆ ತಯಾರಾಗಿದ್ದ  ಪಡುಬಿದ್ರಿ ಇದೀಗ ವಿಸ್ತಾರಗೊಳ್ಳತೊಡಗಿದೆ. ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ  ಈಗಾಗಲೇ ಬಹು ಮಹಡಿ ವಾಣಿಜ್ಯ ಸಂಕೀರ್ಣಗಳು ತಲೆ ಎತ್ತುತ್ತಿವೆ. ಕೆಲ ಸಂಕೀರ್ಣಗಳು  ತಮ್ಮ ವ್ಯಾಪಾರ ವಹಿವಾಟನ್ನೂ ಈಗಾಗಲೇ ನಡೆಸುತ್ತಿವೆ. ಪಡುಬಿದ್ರಿಯ ಗ್ರಾಮೀಣ ಒಳ  ಪ್ರದೇಶಗಳನ್ನೂ ವಾಣಿಜ್ಯ ಕೇಂದ್ರಗಳು ಇಂದು ವ್ಯಾಪಿಸುತ್ತಿವೆ. 

ಸವಾಲೆನಿಸುವ ಒಳಚರಂಡಿ ವ್ಯವಸ್ಥೆ
ಸ್ಥಳೀಯ  ಗ್ರಾ. ಪಂ. ಗೆ ಇಲ್ಲಿನ ಒಳ ಚರಂಡಿ ಯೋಜನೆಯು ಸವಾಲೆನಿಸಲಿದೆ. ಮುಂದೆ  ಚತುಃಷ್ಪಥ ಹೆದ್ದಾರಿ ಕಾಮಗಾರಿಯ ಬಳಿಕವೇ ಇದನ್ನು ನಿರ್ವಹಿಸಬೇಕಾಗಿರುವುದಾಗಿ  ಗ್ರಾ. ಪಂ. ಹೇಳಿಕೊಳ್ಳುತ್ತಿದೆ. ಈ ಮಳೆಗಾಲದಲ್ಲೂ ಹೆದ್ದಾರಿ ಬದಿ ಶೌಚದ ನೀರೂ  ಸೇರಿದಂತೆ ಮಲಿನ ನೀರು ಪಡುಬಿದ್ರಿಯ ಗಣಪತಿ ದೇಗುಲದತ್ತ ಹೋಗುತ್ತಿದ್ದು ಅನೇಕ ಬಾರಿ ಸ್ಥಳೀಯಾಡಳಿತದ ಗಮನಕ್ಕೂ ಸ್ಥಳೀಯರು ತಂದಿದ್ದಾರೆ.  ಇಂದಿನ ಯೋಜಿತ ನಗರೀಕರಣದ ಮಧ್ಯೆಯೂ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಪಕ್ಕದಲ್ಲಿನ ಕ್ಯಾಂಟೀನ್‌  ಒಂದರಿಂದ ಕಾರ್ಕಳ ಹಳೇ ರಸ್ತೆಯತ್ತ ಕೊಳಚೆ ನೀರು ಬರುತ್ತಿರುವುದು ಯಾರ  ಗಮನಕ್ಕೂ ಬಂದಿಲ್ಲ.  ಮೊದಲಾಗಿ ಹೊಸತು ನಗರೀಕರಣವು ಮುಂದೆ ನರಕೀಕರಣವಾಗದಿರಲಿ ಎಂಬ ಹಾರೈಕೆ ಪಡುಬಿದ್ರಿಯ ಜನತೆಯದ್ದಾಗಿದೆ.

ಕಾರ್ಕಳ ರಾಜ್ಯ ಹೆದ್ದಾರಿ – ರಾಷ್ಟ್ರೀಯ ಹೆದ್ದಾರಿಗಳ ಜೋಡಣೆಯ ಯಕ್ಷಪ್ರಶ್ನೆ
ಆದರೂ  ಬಲು ಮುಖ್ಯವಾಗಿ ಕಾರ್ಕಳ ರಾಜ್ಯ ಹೆದ್ದಾರಿಯನ್ನು ಪಡುಬಿದ್ರಿಗೆ ಹೇಗೆ  ಹೊಂದಿಸಿಕೊಳ್ಳಲಾಗುತ್ತದೆ. ಇಲ್ಲಿನ ವಾಹನ ದಟ್ಟಣೆಯನ್ನು ಹೇಗೆ  ನಿಭಾಯಿಸಲಾಗುತ್ತದೆ ಎನ್ನುವುದನ್ನು ಇದುವರೆಗೂ ನವಯುಗ ನಿರ್ಮಾಣ ಕಂಪೆನಿಯಾಗಲೀ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವಾಗಲೀ ತುಟಿ ಬಿಚ್ಚದಿರುವುದು  ಜನತೆಯ ಆತಂಕಕ್ಕೂ ಎಡೆ ಮಾಡಿಕೊಟ್ಟಿದೆ. ಹೆದ್ದಾರಿ ಪ್ರಾಧಿಕಾರದ ಕಠಿನ  ಕಾನೂನುಗಳೂ ಹೆದ್ದಾರಿ ಸನಿಹದಲ್ಲಿ ಹೊಸ ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಲು  ನಿರ್ಬಂಧಿಸಿವೆ.

ಹೊರ ಚಾಚಿಕೊಳ್ಳಲಿರುವ ಪಡುಬಿದ್ರಿ ನಗರ ಸ್ವರೂಪ
ಹಾಗಿದ್ದರೂ  ನಗರ ಪಂಚಾಯತ್‌ ಸ್ಥಾನಮಾನಕ್ಕೆ ನಿಕಟವೆನಿಸಿರುವ ಪಡುಬಿದ್ರಿಯು ಹೆದ್ದಾರಿಯ ಒಂದು  ಭಾಗದಲ್ಲಷ್ಟೇ ಅಲ್ಲದೆ ಹೃದಯಭಾಗದಿಂದ ಮೂಲ್ಕಿಯತ್ತ ಹೋಗುವ ಸುಮಾರು  ಮೂರು ಕಿ.ಮೀ. ದೂರದಲ್ಲೂ ವಾಣಿಜ್ಯ ಸಂಕೀರ್ಣ, ಸಭಾ ಭವನಗಳನ್ನು  ಸದ್ಯೋಭವಿಷ್ಯದಲ್ಲೇ ಹೊಂದಲಿದೆ. ಪಡುಬಿದ್ರಿಯ ಬಸ್‌ ನಿಲ್ದಾಣಗಳೂ  ಬದಲಾವಣೆಗೊಂಡು ಹೊರ ಚಾಚಿಕೊಳ್ಳಲಿವೆ. ಈಗಾಗಲೇ ಪಡುಬಿದ್ರಿ ಗ್ರಾಮ ಪಂಚಾಯತ್‌  ಕಟ್ಟಡವನ್ನು ನವೀಕರಿಸಲು ಮುಹೂರ್ತವನ್ನು ನಿಗದಿಪಡಿಸಲಾಗಿದೆ. 

ಆರಾಮ

ಟಾಪ್ ನ್ಯೂಸ್

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Shirva: ರಿಕ್ಷಾ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

7

Manipal: ಅಪಘಾತ ತಡೆಯಲು ಹೀಗೆ ಮಾಡಿ!

6

ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

accident2

Gangolli: ಸ್ಕೂಟರ್‌ – ಬೈಕ್‌ ಢಿಕ್ಕಿ; ಗಾಯ

ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

Congress Session: ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

accident

Shirva: ರಿಕ್ಷಾ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.