ಇನ್ನೂ ಪೂರ್ಣಗೊಳ್ಳದ ಪಡುಬಿದ್ರಿ ಗ್ರಾ. ಪಂ. ಕಟ್ಟಡ ಕಾಮಗಾರಿ
Team Udayavani, May 8, 2019, 6:10 AM IST
ಪಡುಬಿದ್ರಿ: ಎರಡು ವರ್ಷಗಳ ಹಿಂದೆ ನಿರ್ಮಾಣ ಕಾರ್ಯ ಆರಂಭವಾಗಿದ್ದ ಪಡುಬಿದ್ರಿ ಗ್ರಾ. ಪಂ. ಕಟ್ಟಡ ಕಾಮಗಾರಿ ಈಗ ತ್ರಿಶಂಕು ಸ್ಥಿತಿಯಲ್ಲಿದೆ.
1.5 ಕೋ.ರೂ. ವೆಚ್ಚದ ಅಂದಾಜಿನೊಂದಿಗೆ ಕಾಮಗಾರಿ ಶುರುವಾಗಿದ್ದು, ಎರಡು ಮಹಡಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಇನ್ನೂ ಪೂರ್ಣಗೊಂಡಿಲ್ಲ. ಗ್ರಾಮವಿಕಾಸ ಯೋಜನೆಯಡಿ ಸಿಗಬೇಕಿದ್ದ ಅನುದಾನ ಲಭ್ಯವಾಗದ ಕಾರಣ ಕಾಮಗಾರಿ ಕುಂಟುತ್ತಿದೆ.
18 ಸಾವಿರ ರೂ .ಬಾಡಿಗೆ
ಸದ್ಯ ಪಂಚಾಯತ್ ಬಾಡಿಗೆ ಕಟ್ಟಡದಲ್ಲಿದ್ದು, 18 ಸಾವಿರ ರೂ. ಮಾಸಿಗೆ ಬಾಡಿಗೆ ಭರಿಸುತ್ತಿದೆ. ಆದರೆ 2ನೇ ಮಹಡಿಯಲ್ಲಿ ಕಚೇರಿ ಇರುವುದರಿಂದ ಅಶಕ್ತರು, ಹಿರಿಯ ನಾಗರಿಕರಿಗೆ ಇದು ಸಮಸ್ಯೆಯಾಗಿದೆ. ಈ ಬಗ್ಗೆ ಉದಯವಾಣಿ ಹಿಂದೆಯೇ ವರದಿ ಮಾಡಿತ್ತು.
ಪೂರ್ಣಗೊಳಿಸಲು ಹೆಣಗಾಟ
ಗ್ರಾಮ ಸ್ವರಾಜ್ ಯೋಜನೆಯ 10 ಲಕ್ಷ ರೂ. ಅನುದಾನ ಮತ್ತು ಗ್ರಾಮ ವಿಕಾಸ ಯೋಜನೆಯಡಿಯ 10 ಲಕ್ಷ ರೂ. ಗಳನ್ನು ಬಳಸಿಕೊಂಡು ಪಂಚಾಯತ್ ಕಟ್ಟಡದ ನೆಲ ಮಹಡಿಯ ಕೆಲಸ ಮುಗಿಸುವ ಇರಾದೆಯನ್ನು ಆಡಳಿತ ಹೊಂದಿದೆ. ಆದರೆ ಕೆಲಸ ಸಕಾಲದಲ್ಲಿ ಪೂರ್ಣಗೊಳಿಸಲು ಹೆಣಗಾಡ
ಬೇಕಾಗಿದೆ. ನೆಲ ಮಹಡಿ ಮತ್ತು ಮೇಲಿನ ಎರಡಂತಸ್ತುಗಳ ಸಹಿತ ಮೇಲ್ಮಹಡಿಯಲ್ಲಿ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣಕ್ಕೂ ಕನಸು ಕಂಡಿದ್ದ ಪಂಚಾಯತ್ ಈಗ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಸಮಸ್ಯೆ ಎದುರಿಸುವಂತಾಗಿದೆ.
ಸಿಎಸ್‌ಆರ್ ನಿಧಿ ಪೂರೈಕೆಯಲ್ಲಿ ವಿಳಂಬ
ಯುಪಿಸಿಎಲ್ ತನ್ನದೇ ಯೋಜನೆ ಯಂತೆ ಕಟ್ಟಡದ ಕೆಲಸ ಕಾರ್ಯಗಳನ್ನು ಮಾಡಿತ್ತು. ಆದರೆ ಒಳಗಡೆ ಗೋಡೆ ನಿರ್ಮಾಣ ಬೇಡ. ಕಚೇರಿ ಸ್ವರೂಪಕ್ಕೆ ಅನು ಗುಣವಾಗಿ ಗಾಜು-ಫೈಬರ್ ಮೂಲಕ ವಿಭಾಗ ನಿರ್ಮಿಸುವಂತೆ ಪಂಚಾಯತ್ ಗುತ್ತಿಗೆದಾರರನ್ನು ಕೇಳಿಕೊಂಡಿತ್ತು. ಅದರಂತೆ ಒಳಾಂಗಣ ಗೋಡೆ ಕೆಡವಿದರೂ ಸಿಎಸ್‌ಆರ್ ನಿಧಿಯಿಂದ ಕೆಲಸಗಳಿಗೆ ಹಣ ಲಭ್ಯವಾಗದೆ ಇರುವುದರಿಂದ ಕೆಲಸಗಳು ಬಾಕಿಯಾಗಿದ್ದು ಗ್ರಾ.ಪಂ. ಅಸಹಾಯಕವಾಗಿದೆ.
ನೆಲ ಅಂತಸ್ತಿನ ಕಾಮಗಾರಿ ಶೀಘ್ರ ಪೂರ್ಣ
ಸಿಎಸ್‌ಆರ್ ನಿಧಿ ಬಿಡುಗಡೆ ಕುರಿತಾಗಿ ಸ್ಪಷ್ಟ ನಿಲುವನ್ನು ಕೇಳುತ್ತೇವೆ. ಗ್ರಾ.ಪಂ. ಅನುದಾನಗಳಡಿ ನೆಲ ಅಂತಸ್ತಿನ ಕಾಮಗಾರಿ ಮುಗಿಸಿಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ
- ದಮಯಂತಿ ಅಮೀನ್, ಗ್ರಾ. ಪಂ. ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.