ನಿಟ್ಟೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಪಡುಬಿದ್ರಿ ಗ್ರಾ.ಪಂ. ಸದಸ್ಯರ ಭೇಟಿ


Team Udayavani, Jun 28, 2018, 6:35 AM IST

2706ra2e.jpg

ಪಡುಬಿದ್ರಿ: ತನ್ನ ಪಂಚಾಯತ್‌ ವ್ಯಾಪಿªಯಲ್ಲಿ ಘನ ದ್ರವ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕೇಳಿ ಬರುತ್ತಿರುವ ಸಾರ್ವಜನಿಕ ವಿರೋಧಗಳನ್ನು ಬಗೆಹರಿಸಿಕೊಳ್ಳಲು ಕಾರ್ಕಳ ತಾ| ನಲ್ಲೇ ಪೈಲೆಟ್‌ ಪ್ರಾಜೆಕ್ಟ್ ಆಗಿ ನಿಟ್ಟೆ ಗ್ರಾ. ಪಂ. ಆವರಣದಲ್ಲೇ ಅನುಷ್ಠಾನಿಸಲಾಗಿರುವ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಘಟಕಕ್ಕೆ ಪಡುಬಿದ್ರಿ ಗ್ರಾ. ಪಂ. ಸದಸ್ಯರು ಪಿಡಿಒ ಪಂಚಾಕ್ಷರಿ ಸ್ವಾಮಿ ಹಾಗೂ ಅಧ್ಯಕ್ಷೆ ದಮಯಂತಿ ಅಮೀನ್‌  ಅವರ ನೇತೃತ್ವದಲ್ಲಿ ಜೂ. 27ರಂದು ಭೇಟಿಯಿತ್ತರು. 

ನಿರ್ವಹಣ ಘಟಕದ ಕಾರ್ಯ ಕರ್ತೆಯರಿಂದ ಪಂಚಾಯತ್‌ ಸದಸ್ಯರು ತಮಗೆ ಬೇಕಾದ ಮಾಹಿತಿ  ಸಂಗ್ರಹಿಸಿದರು. ದಿನಕ್ಕೆರಡು ಬಾರಿ ಗ್ರಾಮದ ಸುಮಾರು 300 ಮನೆಗಳು, ಹೊಟೇಲು ಮತ್ತು ಅಂಗಡಿ, ಮುಂಗಟ್ಟುಗಳಿಂದ ಸಂಗ್ರಹಿಸಿ ತರುವ ತ್ಯಾಜ್ಯಗಳನ್ನು ಬೇರ್ಪಡಿಸುವ ಕ್ರಮ ಗಳ ಮಾಹಿತಿಯನ್ನು ಕೇಳಿ ಪಡೆದು ಕೊಂಡರು. ಹಸಿ ತ್ಯಾಜ್ಯವನ್ನು ಗೊಬ್ಬರ ಗುಂಡಿಗೆ ಹಾಕಿ ಮುಂದಿನ ಐದು ತಿಂಗಳಲ್ಲಿ ತಮ್ಮಲ್ಲಿ ಗೊಬ್ಬರ ತಯಾರಾಗುತ್ತಿರುವ ಬಗ್ಗೆ  ವಿವರಿಸಿದರು. 

ಪ್ಲಾಸ್ಟಿಕ್‌ ತ್ಯಾಜ್ಯವೇ ಅಪರಿಮಿತವಾಗಿದ್ದು ಅವುಗಳನ್ನು ಬೇರ್ಪಡಿಸಿ ಒಣಗಿಸಿ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಮರು ಬಳಕೆಗೆ ವಿನಿಯೋಗಿಸಲು ಗ್ರಾ. ಪಂ. ವಿಕ್ರಯಿಸುತ್ತಿದ್ದು ಈಗಾಗಲೇ ಇಂತಹ ವಿಕ್ರಯದಿಂದ 1 ಲಕ್ಷ ರೂ. ಗಳಿಗೂ ಮಿಗಿಲಾದ ಸಂಪನ್ಮೂಲವನ್ನು ಪಂಚಾಯತ್‌ ಗಳಿಸಿರುವುದಾಗಿ ಪಡುಬಿದ್ರಿಯ ತಂಡಕ್ಕೆ ಮಾಹಿತಿಯನ್ನು ಒದಗಿಸಲಾಯಿತು.
 
ಈ ಸಂದರ್ಭದಲ್ಲಿ ಹಸಿರು ತ್ಯಾಜ್ಯಗಳಿಂದಲೇ ಸಾಕಲಾಗುತ್ತಿರುವ ಎರಡು ಗೋವುಗಳುಳ್ಳ  ಗೋಶಾಲೆಯನ್ನು, ತ್ಯಾಜ್ಯ ಸಂಸ್ಕರಣೆಯಿಂದಲೇ ತಯಾರಾಗು ತ್ತಿರುವ ವಿವಿಧ ತೋಟಗಾರಿಕೆ ಉತ್ಪನ್ನ ಗಳನ್ನು ವೀಕ್ಷಿಸಿದರು.

ನಿಟ್ಟೆ ಗ್ರಾ. ಪಂ. ಪಿಡಿಒ ಮಾಧವ ರಾವ್‌ ದೇಶಪಾಂಡೆ ಮಾತನಾಡಿ ಪ್ರತೀ ದಿನದ ತ್ಯಾಜ್ಯಗಳನ್ನು ಅಂದೇ ವಿಂಗಡಿಸುತ್ತಿದ್ದು ಗ್ರಾ. ಪಂ. ಸದಸ್ಯರು, ಗ್ರಾಮಸ್ಥರು ತಮಗೆ ಬೆಂಬಲ ನೀಡುತ್ತಿದ್ದಾರೆ. ಘನ ತ್ಯಾಜ್ಯಗಳನ್ನು ಸಂಪನ್ಮೂಲವಾಗಿ ತಾವು ಪರಿವರ್ತಿಸಲಾಗುತ್ತಿದ್ದು, ನಿಟ್ಟೆ ಗ್ರಾಮದ ಮದನಾಡು ಎಂಬಲ್ಲಿ 1.5ಎಕ್ರೆ ಜಾಗವನ್ನು ನಿಟ್ಟೆ ಗ್ರಾ.ಪಂ.ಗೆ ನೀಡಿದ್ದು ದೊಡ್ಡ ಮಟ್ಟದಲ್ಲೇ ಈಗ ಘನ, ದ್ರವ ತ್ಯಾಜ್ಯ ವಿಲೇವಾರಿ ಮಾಡುವುದಾಗಿ ಅವರು ಹೇಳಿದರು. 
ಪಡುಬಿದ್ರಿ ಗ್ರಾ.ಪಂ. ಪಿಡಿಒ ಪಂಚಾಕ್ಷರೀ ಸ್ವಾಮಿ ಘನ ದ್ರವ ತಾಜ್ಯಗಳ ವಿಲೇವಾರಿಗೆ ತಮಗೆ ಜಿಲ್ಲಾಡಳಿತ ಸ್ಥಳಾವಕಾಶ ನೀಡಬೇಕು. ಲ್ಯಾಂಡ್‌ ಆರ್ಮಿಗೆ ಗುತ್ತಿಗೆ ವಹಿಸಿಕೊಡಲಾಗಿದ್ದು ಮಾರುಕಟ್ಟೆ ಬದಿಯಲ್ಲೇ ಈ ಘಟಕವನ್ನು ಆರಂಭಿಸುವ ಯೋಜನೆಯಿದೆ. ಮತ್ತೆಲ್ಲೂ ಸಾಧ್ಯವಾಗ ದಿದ್ದಲ್ಲಿ ಪಂಚಾಯತ್‌ ವಠಾರದಲ್ಲೇ ಈ ಯೋಜನೆಯ ಅನುಷ್ಟಾನಕ್ಕೆ ಪಂ.  ಬದ್ಧವಿರುವುದಾಗಿ ಹೇಳಿದರು. 

ಟಾಪ್ ನ್ಯೂಸ್

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !

ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.