Padubidri ಪಣಿಯೂರಲ್ಲಿ ಮನೆಗಳ್ಳತನ ; 5 ಲ. ರೂ. ಮೌಲ್ಯದ ಚಿನ್ನಾಭರಣ ಕಳವು
Team Udayavani, Jan 11, 2024, 1:38 AM IST
ಪಡುಬಿದ್ರಿ: ಎಲ್ಲೂರು ಗ್ರಾಮದ ಪಣಿಯೂರು, ಕರಂಬಾರ್ ದರ್ಕಾಸ್ತು ಮನೆಯ ಎದುರಿನ ಬೀಗ ಮುರಿದು ಬುಧವಾರ ಮಧ್ಯಾಹ್ನದಿಂದ ಸಂಜೆಯ ನಡುವೆ ಒಳ ಪ್ರವೇಶಿಸಿರುವ ಕಳ್ಳರು, ಮನೆಯಲ್ಲಿನ ಕಪಾಟುಗಳನ್ನು ಜಾಲಾಡಿ, ಸುಮಾರು 5 ಲಕ್ಷ ರೂ. ಮೌಲ್ಯದ ಸುಮಾರು 100 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ಪ್ರಕರಣವು ದಾಖಲಾಗಿದೆ.
ಮನೆ ಯಜಮಾನ ಜಯರಾಮ ಮೂಲ್ಯ ಎಂಆರ್‌ಪಿಎಲ್‌ನಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದು ಬೆಳಗ್ಗೆ 7ಕ್ಕೆ ಕೆಲಸಕ್ಕೆ ಹೋಗಿದ್ದರು. ಅವರ ತಾಯಿಯೂ ಮಧ್ಯಾಹ್ನ ಕಂಚಿನಡ್ಕದ ಸೊಸೆಯ ಮನೆಗೆ ಹೋಗಿದ್ದರು. ಜಯರಾಮ ಮೂಲ್ಯರ ಇಬ್ಬರು ಮಕ್ಕಳೂ ಶಾಲೆಗೆ ಹೋಗಿದ್ದರು. ಸಂಜೆಯ ವೇಳೆಗೆ ಮಗ ಕೌಶಿಕ್ ಮನೆಗೆ ಬಂದಾಗ ಮನೆಯ ಬೀಗ ಮುರಿದಿರುವುದು ಕಂಡುಬಂದು ತಂದೆಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದರು.
ಆ ಕೂಡಲೇ ಹೊರಟು ಪತ್ನಿ ಜತೆಗೇ ಬಂದಿದ್ದ ಜಯರಾಮ ಮೂಲ್ಯರು ಮನೆಯೊಳಕ್ಕೆ ಹೋಗಿ ನೋಡಿದಾಗ ಕಳ್ಳರು ಮೂರು ಕಪಾಟುಗಳನ್ನು ಜಾಲಾ ಡಿದ್ದು ಒಂದು ಕಪಾಟಿನ ಬೀಗ ಮುರಿದು ಅದರಲ್ಲಿರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ತಿಳಿಯಿತು.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ವಿಶೇಷ ತಂಡವೊಂದರ ಜತೆಗೆ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಿಎಸ್‌ಐ ಪ್ರಸನ್ನ, ಕ್ರೈಂ ಎಸ್‌ಐ ಸುದರ್ಶನ ದೊಡ್ಡಮನಿ ಭೇಟಿ ನೀಡಿದ್ದು ತನಿಖೆಯು ಮುಂದುವರಿದಿದೆ.
ಉಚ್ಚಿಲದಲ್ಲಿ ಮನೆಗಳ್ಳತನ: ದೂರು ದಾಖಲು
ಪಡುಬಿದ್ರಿ: ದುಬಾೖಯಲ್ಲಿ ವ್ಯವಹಾರ ನಡೆಸುತ್ತಿರುವ ಮಹಮ್ಮದ್ ಇಬ್ರಾಹಿಂ ಅವರ ಉಚ್ಚಿಲ ಬಡಾ ಗ್ರಾಮದ ಮನೆಗೆ ಜ. 5ರಿಂದ ಜ. 10ರ ನಡುವೆ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಒಡೆದು ಒಳ ಪ್ರವೇಶಿಸಿ ಚಿನ್ನಾಭರಣ, ಸಿಸಿ ಕೆಮರಾದ ಡಿವಿಆರ್, ಮಿಕ್ಸಿಯನ್ನು ಕಳವು ಮಾಡಿ ಒಯ್ದಿರುವುದಾಗಿ ಇಬ್ರಾಹಿಂ ಅವರ ಅಣ್ಣ ಸೆಯ್ಯದ್ ಮರಾದ್ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.