ಪಡುಬಿದ್ರಿಯಲ್ಲಿ ಕೊಳಚೆ ನೀರಿನ ದುರ್ನಾತ
Team Udayavani, Apr 1, 2018, 6:15 AM IST
ಪಡುಬಿದ್ರಿ: ಕೊಳಚೆ ನೀರಿನ ಸಮಸ್ಯೆಯಿಂದಾಗಿ ಈಗ ಪಡುಬಿದ್ರಿಯಲ್ಲಿ ಜನ ಮೂಗುಮುಚ್ಚಿ ನಡೆದಾಡುವ ಸ್ಥಿತಿ. ಕಾರಣ, ಇಲ್ಲಿನ ಕೆಲ ಪ್ರಮುಖ ಹೊಟೇಲ್‌ಗಳು ಮತ್ತು ಮನೆಗಳಿಂದ ಕೊಳಚೆ ನೇರ ರಸ್ತೆಗೆ ಹರಿಯುತ್ತಿದ್ದು, ಪರಿಸರ ಹದಗೆಟ್ಟಿದೆ.
ರಸ್ತೆ ಪಕ್ಕದಲ್ಲೇ ಕೊಳಚೆ
ಪಡುಬಿದ್ರಿ ಪೇಟೆಯ ಎರಡು ಹೊಟೇಲ್‌ಗಳಿಗೆ “ಬೆರೆಂದಿ ಕೆರೆ’ ಪ್ರದೇಶ ದಲ್ಲೇ ಪಂಚಾಯತ್ ಒಪ್ಪಿಗೆಯೊಂದಿಗೆ ನಿರ್ಮಿಸಲಾಗಿರುವ ದ್ರವ ತ್ಯಾಜ್ಯ ನಿರ್ವಹಣ ಘಟಕವಿದೆ. ಆದರೆ ಇಲ್ಲೂ ಕೊಳಚೆ ಉಕ್ಕೇರಿ ಹರಿದಾಗ ಪರಿಸ್ಥಿತಿ ಬಿಗಡಾಯಿಸುತ್ತದೆ. ಇನ್ನು ಕೆಲ ಹೊಟೇಲ್ ಮಾಲಕರು ತಮ್ಮದೇ ಆದ ಕೊಳಚೆ ನೀರು ಶುದ್ಧೀಕರಣ ಘಟಕ ಹೊಂದಿದ್ದಾರೆ. ಮಳೆಗಾಲದಲ್ಲಿ ಪೇಟೆ ಮಂದಿ ಕೊಳಚೆ ನೀರನ್ನು ಯಾವುದೇ ಮುಲಾಜಿಲ್ಲದೆ ಹೊರ ಹರಿಯಲು ಬಿಡುತ್ತಿದ್ದಾರೆ. ಇತ್ತೀಚೆಗೆ ದೇಗುಲ ದಾರಿಯಲ್ಲಿನ ಹೊಟೇಲ್ ಒಂದರ ಕೊಳಚೆ, ಹೆದ್ದಾರಿ ಪಕ್ಕದಲ್ಲೇ ಸಂಗ್ರಹವಾಗಿ ದುರ್ನಾತ ಬೀರುತ್ತಿದ್ದರೂ ಸ್ಥಳೀಯಾಡಳಿತ ಇದರ ಉಸಾಬರಿಗೆ ಹೋಗಿಲ್ಲ.
ಘನ ತ್ಯಾಜ್ಯ ಸಮಸ್ಯೆ
ಹೆದ್ದಾರಿ, ಹಳ್ಳಿ ರಸ್ತೆಯಲ್ಲೂ ಘನ ತ್ಯಾಜ್ಯದ ಸಮಸ್ಯೆ ವಿಪರೀತವಾಗಿದೆ. ರಾಷ್ಟ್ರೀಯ ಹೆದ್ದಾರಿಯ ತೆಂಕ ಗ್ರಾ.ಪಂ. ವ್ಯಾಪ್ತಿಯ ಎರ್ಮಾಳು ಕಲ್ಸಂಕದಲ್ಲಿ ಅತ್ಯಧಿಕ ಘನತ್ಯಾಜ್ಯ ಎಸೆಯಲಾಗುತ್ತಿತ್ತು. ಆದರೆ ಅಲ್ಲೀಗ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಹಳ್ಳಿ ರಸ್ತೆಗಳಲ್ಲೆಲ್ಲ ತ್ಯಾಜ್ಯ ಎಸೆಯಲಾಗುತ್ತಿದೆ.
ತ್ಯಾಜ್ಯ ನಿರ್ವಹಣೆಗೆ ಜಾಗದ ಕೊರತೆ
ಇಲ್ಲಿನ ಗ್ರಾ.ಪಂ. ವಾರಕ್ಕೆ ಮೂರು ಬಾರಿ 6 ಲೋಡು ತ್ಯಾಜ್ಯವನ್ನು ಸಂಗ್ರಹಿಸುತ್ತಿದೆ. ಇದಕ್ಕೆ ಪ್ರತಿ ಮನೆಯಿಂದ 100 ರೂ. ನಂತೆ ತಿಂಗಳಿಗೆ 1.60 ಲಕ್ಷ ರೂ. ವರಮಾನ ಗಳಿಸುತ್ತಿದೆ. ಆದರೆ ತ್ಯಾಜ್ಯ ನಿವ ಹಣೆಗೆ ಜಾಗದ ಕೊರತೆ ಇದೆ.
ಸದ್ಯ ಸಂತೆ ಜಾಗದ ಪ್ರದೇಶದಲ್ಲೇ ಇವುಗಳ ಅಪೂರ್ಣ ನಿರ್ವಹಣೆಯನ್ನು ಗೈಯ್ಯ ಲಾಗುತ್ತಿದೆ. ಇನ್ನು ಪಾದೆ ಬೆಟ್ಟು ಹಾಗೂ ನಡಾÕಲು ಗ್ರಾಮದ ಖಾಸಗಿ ಜಾಗಗಳಲ್ಲಿ ಹಸಿರು ತ್ಯಾಜ್ಯ ನಿರ್ವಹಣೆ ಮಾಡಲಾಗು ತ್ತಿದ್ದು, ವಾಸನೆ ಅಧಿಕವಾದಾಗ ಅಲ್ಲಿ ತ್ಯಾಜ್ಯ ನಿರ್ವಹಣೆ ಪಂ.ಗೆ ಸಾಧ್ಯವಾಗುತ್ತಿಲ್ಲ.
ದೂರದೃಷ್ಟಿತ್ವ ಅಗತ್ಯ
ಹೀಗೆಯೇ ಪಡುಬಿದ್ರಿ ಬೆಳೆಯುತ್ತಿದ್ದು ಹೊಟೇಲ್ ಉದ್ದಿಮೆಯೊಂದಿಗೆ ವಸತಿ ಸಮುಚ್ಚಯಗಳೂ ಸದ್ಯ ಬಹು ಸಂಖ್ಯೆ ಯಲ್ಲಿವೆ. ಇಲ್ಲೆಲ್ಲೂ ತಾಜ್ಯ ನಿರ್ವಹಣೆಗಳು ಸಮರ್ಪಕವಾಗಿ ಆಗುತ್ತಿಲ್ಲ. ಪಡುಬಿದ್ರಿಗೆ ಸೂಕ್ತ ಒಳ ಚರಂಡಿ ವ್ಯವಸ್ಥೆ ಆಗಬೇಕಿದೆ. ಇದಕ್ಕೆ ದೂರದೃಷ್ಟಿಯ ಯೋಜನೆ ಅಗತ್ಯವಿದೆ.
ಅನುದಾನ ಸಾಕಾಗುತ್ತಿಲ್ಲ
ಘನ ತ್ಯಾಜ್ಯ ನಿರ್ವಹಣೆಗೆ ವಾಹನ, ಸಿಬಂದಿ ಕೊರತೆ ಇದೆ. ಅನುದಾನವೂ ಇಲ್ಲ. ಪಡುಬಿದ್ರಿ ಪುರಸಭೆ ದರ್ಜೆಗೇರಿದರೆ ಇದಕ್ಕೆ ಪರಿಹಾರ ಸಿಗಬಹುದು. ಈಗ ಪಂಚಾಯತ್‌ಗೆ ಬರುತ್ತಿರುವ ಲಕ್ಷ ಮೊತ್ತದ ಅನುದಾನದಲ್ಲಿ ಶೇ.60ರಷ್ಟು ಮೆಸ್ಕಾಂ ಬಿಲ್ ಪಾವತಿಗೆ ಮತ್ತು ಶೇ.40ರಷ್ಟು ಸಿಬಂದಿ ವೇತನಕ್ಕೆ ಖರ್ಚಾಗುತ್ತದೆ.
– ಪಂಚಾಕ್ಷರೀ ಸ್ವಾಮಿ,ಗ್ರಾ.ಪಂ.ಪಿಡಿಒ
ಜಿಲ್ಲಾಧಿಕಾರಿಗಳಿಗೆ ಮೌಖೀಕ ಮನವಿ
ಕೊಳಚೆ ಸಮಸ್ಯೆ ಪರಿಹರಿಸಲು ಹಿಂದಿನ ದಾಖಲೆಗಳೊಂದಿಗೆ ತಿಂಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಪಡುಬಿದ್ರಿ ಪಿಡಿಒ ಬಳಿಯೂ ಚರ್ಚಿಸಿದ್ದೇನೆ. ಆದರೆ ಫಲ ಕಂಡಿಲ್ಲ.
– ರಾಮದಾಸ ಆರ್ಯ,ನಿವೃತ್ತ ಶಿಕ್ಷಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.