ಪಡುಬಿದ್ರಿ ಗ್ರಾಮ: ಒಳ ರಸ್ತೆಗಳಲ್ಲಿ ಬೀದಿದೀಪ ಸಮಸ್ಯೆ
Team Udayavani, Apr 13, 2019, 6:31 AM IST
ಮೋರಿ ದುರಸ್ತಿಗಾಗಿ ತಂದು ಹಾಕಿರುವ ಜಲ್ಲಿಕಲ್ಲುಗಳು ರಸ್ತೆಯಲ್ಲೆಲ್ಲಾ ಹರಡಿವೆ.
ವಿಶೇಷ ವರದಿ-ಪಡುಬಿದ್ರಿ: ಪಡುಬಿದ್ರಿಯ ಗ್ರಾಮದ ಒಳರಸ್ತೆಗಳ ಬೀದಿದೀಪಗಳು ರಾತ್ರಿ ಸಂದರ್ಭ ಉರಿಯುವುದಿಲ್ಲ. ಈ ರಸ್ತೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರಿಂದ ಬಾಲಗಣೇಶ ದೇವಸ್ಥಾನ ಮೂಲಕ ಪಲಿಮಾರು ಗ್ರಾಮದ ಅವರಾಲು ಮಟ್ಟುವಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ನೂರಾರು ಜನರು ಈ ದಾರಿಯಾಗಿ ಸಾಗಬೇಕು. ಇದೇ ರಸ್ತೆಯೆಲ್ಲೆಲ್ಲಾ ಹರಡಿರುವ ಜಲ್ಲಿಕಲ್ಲುಗಳಿಂದಾಗಿ ಪಾದಚಾರಿ ಗಳಿಗೆ ನಡೆಯಲಾಗದ ಸ್ಥಿತಿ ಇದೆ. ಪಡುಬಿದ್ರಿ ಬೆರಂದಿಕೆರೆ ಯಲ್ಲಿ ಉರಿಯದ ದಾರಿದೀಪಗಳಿಂದಾಗಿ ರಸ್ತೆಯಲ್ಲೇ ವಿಷಜಂತುಗಳು ಓಡಾಡುತ್ತಿದ್ದು ಈಚೆಗಷ್ಟೇ ಬಾಲಕ ನೋರ್ವನಿಗೆ ವಿಷಜಂತು ಕಡಿದು ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸುಮಾರು ಐದರಿಂದ ಆರು ಕಿಮೀ. ದೂರದ ಈ ರಸ್ತೆಯಲ್ಲಿ ಒಂದು ಬಸ್ ಸಂಚರಿಸುತ್ತಿದ್ದು ಅನಂತರ ನಡೆದುಕೊಂಡು ಹೋಗಬೇಕಿದೆ. ಈ ಪ್ರಮುಖ ರಸ್ತೆಯಲ್ಲಿ ದಾರಿ ದೀಪ ಅಳವಡಿಸಿದ್ದರೂ ಅವುಗಳು ಉರಿಯುವುದಿಲ್ಲ. ಇದರ ಹತ್ತಿರದಲ್ಲಿ ಇರುವ ಮೆಸ್ಕಾಂ ಇಲಾಖೆಗೆ ಕಾಯ್ದಿರಿಸಿದ್ದ ಜಮೀನು ಪಾಳು ಬಿದ್ದಿದ್ದು, ವಿಷಜಂತುಗಳ ವಾಸ ಸ್ಥಾನವಾಗಿದೆ.
ದುರಸ್ತಿಯಾಗದ ಮೋರಿ
ಈ ರಸ್ತೆಯಲ್ಲಿ ಮೋರಿಯೊಂದು ಕುಸಿದು ವರ್ಷವಾಗುತ್ತಾ ಬಂದರೂ ಇನ್ನೂ ದುರಸ್ತಿಯಾಗಿಲ್ಲ. ಕಳೆದ ಎರಡು ತಿಂಗಳ ಹಿಂದೆ ಮೋರಿ ದುರಸ್ತಿಗಾಗಿ ಜಲ್ಲಿಕಲ್ಲನ್ನು ತಂದು ರಸ್ತೆಯಲ್ಲಿಯೇ ಸುರಿಯಲಾಗಿದ್ದು ಅದು ರಸ್ತೆ ಎಲ್ಲÉ ಹರಡಿದೆೆ. ಇದರಿಂದ ಪಾದಚಾರಿಗಳ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ಬೀದಿ ದೀಪಗಳ ದುರಸ್ತಿ, ಪಾಳು ಗಿಡಗಂಟಿಗಳನ್ನು ಕಡಿದು ಪರಿಸರ ಸ್ವತ್ಛಗೊಳಿಸುವತ್ತ ಪಂಚಾಯತ್ ಆಸಕ್ತಿ ವಹಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಶೀಘ್ರ ಅಳವಡಿಕೆ
ದಾರಿ ದೀಪ ಕೆಟ್ಟು ಹೋಗಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಬೀದಿ ದೀಪಗಳ ಸರಬರಾಜು ವಿಳಂಬದಿಂದ ತೊಂದರೆಯಾಗಿತ್ತು. ಬೀದಿ ದೀಪಗಳು ಇದೀಗ ಬಂದಿದ್ದು, ಗುತ್ತಿಗೆದಾರರಿಗೆ ತಿಳಿಸಿ ಅದನ್ನು ಶೀಘ್ರ ಅಳವಡಿಸಲಾಗುವುದು.
-ಪಂಚಾಕ್ಷರಿ ಸ್ವಾಮಿ ಕೆರಿಮಠ, ಪಡುಬಿದ್ರಿ ಗ್ರಾ.ಪಂ. ಪಿಡಿಒ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.