ಪಡುಕೋಣೆ : ಪರವಾನಿಗೆಯಿದ್ದರೂ ಸರಕಾರಿ ಬಸ್ ಬರುತ್ತಿಲ್ಲ
Team Udayavani, Feb 3, 2020, 5:13 AM IST
ಹೆಮ್ಮಾಡಿ: ಪಡುಕೋಣೆ, ನಾಡ ಗುಡ್ಡೆಯಂಗಡಿ, ಹರ್ಕೂರು ಮೂರು ಕೈ ಭಾಗಕ್ಕೆ ಈ ಹಿಂದೆ ಸರಕಾರಿ ಬಸ್ ನೀಡಲಾಗಿದ್ದರೂ, ಈಗ ಮಾತ್ರ ಈ ಊರಿಗೆ ಬಸ್ ಬರುತ್ತಿಲ್ಲ. ಇನ್ನು ಹಿಂದೆ ಇದ್ದ ಖಾಸಗಿ ಬಸ್‌ಗಳ ಸಂಖ್ಯೆಯಲ್ಲಿಯೂ ಗಣನೀಯ ಕಡಿಮೆಯಾಗಿದ್ದು, ಕೆಲವೇ ಕೆಲವು ಬಸ್‌ಗಳು ಮಾತ್ರ ಬರುತ್ತಿವೆ. ಈ ಪ್ರದೇಶಗಳಿಂದ ಕುಂದಾಪುರಕ್ಕೆ ಶಾಲಾ- ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಪ್ರತಿ ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
3 ವರ್ಷಗಳ ಹಿಂದೆ ರಾಜ್ಯ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿದ್ದ ಕೆ. ಗೋಪಾಲ ಪೂಜಾರಿಯವರು ಪಡುಕೋಣೆ – ನಾಡಗುಡ್ಡೆಯಂಗಡಿ – ಹರ್ಕೂರು ಮೂರುಕೈ – ಕಟ್ಟಿನಮಕ್ಕಿ – ಬಂಟ್ವಾಡಿ ಮೂಲಕವಾಗಿ ಕುಂದಾಪುರ ಮಾರ್ಗಕ್ಕೆ ಸರಕಾರಿ ಬಸ್ ನೀಡಿದ್ದರು. ಆದರೆ ಕಳೆದ 2 ವರ್ಷಗಳಿಂದ ಇಲ್ಲಿಗೆ ಆ ಸರಕಾರಿ ಬಸ್ ಬರುತ್ತಿಲ್ಲ. ಇದರಿಂದ ಕುಂದಾಪುರ ಕಡೆಗೆ ಹೋಗುವ ಜನ ಸಾಮಾನ್ಯರು, ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಖಾಸಗಿ ಬಸ್ ಕಡಿಮೆ
ಪಡುಕೋಣೆ, ನಾಡಗುಡ್ಡೆಯಂಗಡಿ, ಹಡವು, ಬಡಾಕೆರೆ, ಸೇನಾಪುರ ಭಾಗಕ್ಕೆ ಹಿಂದೆ ಪ್ರತಿ ದಿನ 10-12 ಖಾಸಗಿ ಬಸ್‌ಗಳು ಬರುತ್ತಿದ್ದವು. ಆದರೆ ಈಗ ಕೇವಲ 3-4 ಬಸ್‌ಗಳು ಮಾತ್ರ ಬರುತ್ತಿವೆ. ಹಿಂದೆ 30 ಟ್ರಿಪ್ ಬಸ್ ಇದ್ದ ಮಾರ್ಗದಲ್ಲಿ ಈಗ ಬರೀ 10 ಟ್ರಿಪ್ ಕೂಡ ಇಲ್ಲ ಎನ್ನುವುದು ಊರವರ ಆರೋಪ.
ನೇತಾಡುವ ಅನಿವಾರ್ಯತೆ
ಬೆಳಗ್ಗೆ ಸಂಜೆ ವೇಳೆ ಈ ಮಾರ್ಗದಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಕೆಲಸಕ್ಕೆ, ಜನ, ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಫುಟ್‌ಬೋರ್ಡ್‌ಗಳಲ್ಲಿ ನೇತಾಡಿಕೊಂಡು ಹೋಗುತ್ತಾರೆ.
ಸರಕಾರಿ ಬಸ್ ನೀಡಲಿ
ಪಡುಕೋಣೆ, ನಾಡಗುಡ್ಡೆಯಂಗಡಿ ಭಾಗಕ್ಕೆ ಈ ಹಿಂದೆ ಹತ್ತಾರು ಬಸ್‌ಗಳು ಬರುತ್ತಿದ್ದವು. ಆದರೆ ಈಗ ಈ ಹೊಂಡಗಳಿಂದ ಕೂಡಿದ ರಸ್ತೆಯಿಂದಾಗಿ ಪರ್ಮಿಟ್ ಇದ್ದರೂ ಬಸ್ ಬರುತ್ತಿಲ್ಲ. ಒಂದು ಸರಕಾರಿ ಬಸ್ ಕೂಡ ಬರುತ್ತಿಲ್ಲ. ಈಗ ಕೆಲವೇ ಬಸ್‌ಗಳು ಇರುವುದರಿಂದ, ಅದು ಕೂಡ ಸಣ್ಣ ಬಸ್ ಆಗಿರುವುದರಿಂದ ಎಲ್ಲ ಬಸ್‌ಗಳು ಬೆಳಗ್ಗೆ ಹಾಗೂ ಸಂಜೆ ವೇಳೆ ತುಂಬಿದ್ದು, ನೇತಾಡಿಕೊಂಡು ಹೋಗುತ್ತಿದ್ದಾರೆ. ಈ ಮಾರ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಸರಕಾರಿ ಬಸ್ ನೀಡಲಿ.
-ಅರವಿಂದ ಪೂಜಾರಿ,
ಹೊಯ್ಸಳ ಕಲ್ಚರಲ್ ಟ್ರಸ್ಟ್ ನಾಡ
ಸೂಕ್ತ ಕ್ರಮ
ಕೆಲವು ಪರವಾನಿಗೆಯಿದ್ದರೂ, ಅದು ಟೈಮಿಂಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ಮಾಹಿತಿ ತಿಳಿದುಕೊಂಡು, ವಿಚಾರಿಸಲಾಗುವುದು. ಎಲ್ಲೆಲ್ಲ ಸ್ಥಗಿತ ಗೊಂಡಿದೆ. ಆ ಬಗ್ಗೆ ಶೀಘ್ರ ಮಾಹಿತಿ ಪಡೆಯಲಾಗುವುದು. ಆ ಭಾಗದ ಜನರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮಕ್ಕೆ ಪ್ರಯತ್ನಿಸಲಾಗುವುದು.
-ರಾಮಕೃಷ್ಣ ರೈ ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ
ಬಸ್ ಮೊಟಕು
ಪಡುಕೋಣೆಯಿಂದ ಗುಡ್ಡೆ
ಯಂಗಡಿಯಾಗಿ ಹಕೂìರು ಮೂರುಕೈ ವರೆಗಿನ 4 ಕಿ.ಮೀ. ರಸ್ತೆಯ ದುಃಸ್ಥಿತಿಯಿಂದಾಗಿ ಈ ಮಾರ್ಗ ದಲ್ಲಿ ಬರುತ್ತಿದ್ದ ಬಸ್‌ಗಳು ಒಂದೊಂ ದಾಗಿಯೇ ಸಂಚಾರವನ್ನು ಮೊಟಕು ಗೊಳಿಸುತ್ತಾ ಬಂದಿವೆ. ಆದರೆ ಈಗ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿ, ಕಾಮಗಾರಿಯೂ ಆರಂಭವಾಗು ತ್ತಿದ್ದು, ಇನ್ನಾದರೂ ಈ ಭಾಗದಲ್ಲಿ ಹಿಂದೆ ಬರುತ್ತಿದ್ದ ಬಸ್‌ಗಳ ಸಂಚಾರ ಮತ್ತೆ ಆರಂಭವಾಗಲಿ ಎನ್ನುವುದು ಊರವರ ಆಗ್ರಹವಾಗಿದೆ.
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.