ಸಾಂಸ್ಕೃತಿಕ ವೈಭವಕ್ಕೆ ಪೇಜಾವರ ಶ್ರೀಗಳ ಕಲಾತ್ಮಕ ಸಿಂಚನ
Team Udayavani, Jan 18, 2018, 2:32 PM IST
ಉಡುಪಿ: 2016ರ ಜ. 18ರಿಂದ 2018ರ ಜ. 17ರ ವರೆಗೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಪರ್ಯಾಯದ 2 ವರ್ಷಗಳಲ್ಲಿ ಸಾಂಸ್ಕೃತಿಕ ನಗರಿಯಾದ ಶ್ರೀ ಕೃಷ್ಣನ ಅಂಗಣದಲ್ಲಿ ನಿರಂತರ ಕಲಾಸುಗ್ಗಿ ಮೇಳೈಸಿತು.
ಮಠದಿಂದ ಪ್ರಸಿದ್ಧ ಸಾಂಸ್ಕೃತಿಕ ಕಲಾವಿದರನ್ನು ಆಹ್ವಾನಿಸಿ ಸಂಗೀತ, ನೃತ್ಯ, ನಾಟಕ, ಹರಿಕಥೆ, ಯಕ್ಷಗಾನಗಳಂತಹ ಇನ್ನಿತರ ವೈವಿಧ್ಯಮಯ ಕಲಾ ಪ್ರಾಕಾರಗಳನ್ನು ಸಂಯೋಜಿಸಿದ್ದಲ್ಲದೆ, ಅವಕಾಶ ಕೋರಿ ಅರ್ಜಿ ಸಲ್ಲಿಸಿದವರಿಗೂ ಸಾಧ್ಯವಿದ್ದಷ್ಟು ವೇದಿಕೆ ಒದಗಿಸಿಕೊಟ್ಟಿದೆ. ಸಂಜೆ 4ರ ಅನಂತರ ಮಧ್ವಮಂಟಪ, 7ರ ಅನಂತರ ರಾಜಾಂಗಣದಲ್ಲಿ ಹಾಗೂ ರಜಾದಿನಗಳಲ್ಲಿ ಅಪರಾಹ್ನ, ಸಂಜೆ ಮತ್ತು ರಾತ್ರಿ ಎಂದು ಮೂರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಬೆಂಗಳೂರು, ಮೈಸೂರು, ಚೈನ್ನೈ, ಮುಂಬಯಿ ಮೊದಲಾದ ಕಡೆಯ ಸಂಘ-ಸಂಸ್ಥೆಗಳು, ಊರಿನ ಸಂಘಟನೆಗಳಿಗೆ ರಾಜಾಂಗಣದಲ್ಲಿ ಪ್ರದರ್ಶನಕ್ಕೆ ಸ್ಥಳೀಯ ಆತಿಥ್ಯದೊಂದಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಯಕ್ಷಗಾನ ಸಪ್ತಾಹ, ಹರಿಕಥಾ ಸಪ್ತಾಹ ಹಾಗೂ ಸರಣಿ ನೃತ್ಯ ಸಂಗೀತ ಕಾರ್ಯಕ್ರಮಗಳು ಜರಗಿದವು. ಸೇವಾರೂಪದಲ್ಲಿ ಕಾರ್ಯಕ್ರಮ ನೀಡಿದವರಿಗೂ ಶ್ರೀಪಾದರು ಪ್ರಸಾದ ರೂಪದಲ್ಲಿ ಕಿರು ಸಂಭಾವನೆ ಸಹಿತ ಪ್ರಯಾಣ ವೆಚ್ಚ ಕೊಡುತ್ತಿದ್ದರು. ಸಂಭಾವನೆ ಸಹಿತ ಬಯಲಾಟದ ಹೆಚ್ಚಿನ ಮೇಳಗಳಿಗೆ ಅವಕಾಶ ನೀಡಲಾಗಿತ್ತು. ಶ್ರೀಪಾದರಿಗೆ ಅತೀ ಪ್ರಿಯವಾಗಿರುವ ಅವರ ಬಯಕೆಯಂತೆ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ಲಭಿಸಿತ್ತು.
ಪ್ರತಿನಿತ್ಯ 5.45ರಿಂದ ಸಂಜೆ 7ರ ವರೆಗೆ ಪರಿಣಿತ ವಿದ್ವಾಂಸರಿಂದ ಹಾಗೂ ಶ್ರೀಪಾದದ್ವಯರಿಂದ ಉಪನ್ಯಾಸ ನಡೆಯುತ್ತಿತ್ತು. ರಾಮನವಮಿ, ಕೃಷ್ಣಾಷ್ಟಮಿ, ನವರಾತ್ರಿ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಪ್ರಸಿದ್ಧ ಸಾಹಿತಿಗಳನ್ನು ಕರೆಸಿ ಸರಳ ಉಪನ್ಯಾಸಗಳು ನಡೆಯುತ್ತಿದ್ದವು.
ಗರಿಷ್ಠ ಸಂಖ್ಯೆಯ ವೈವಿಧ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಜನತೆಗೆ ಸಾಧ್ಯವಾಯಿತು. ಸೆಪ್ಟಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ರಾಜಾಂಗಣದ ದುರಸ್ತಿ ಕಾರ್ಯ ನಿಮಿತ್ತ ಪಾರ್ಕಿಂಗ್ ಪ್ರದೇಶದಲ್ಲಿ ವಿಶಾಲವಾದ ತಾತ್ಕಾಲಿಕ ರಾಜಾಂಗಣವನ್ನು ನಿರ್ಮಿಸಿ ನಿರಂತರ ಕಾರ್ಯಕ್ರಮ ನಡೆಯುವಂತೆ ವ್ಯವಸ್ಥೆಗೊಳಿಸಿದ್ದರು.
ರಸಿಕ ಪ್ರೇಕ್ಷಕರಿಗೆ ಗರಿಷ್ಠ ಪ್ರಮಾಣದ ಕಾರ್ಯಕ್ರಮ ಏರ್ಪಡಿಸಿದ ಸಂತೃಪ್ತಿ ಶ್ರೀಗಳಿಗಿದ್ದರೆ, ಜತೆಯಲ್ಲೇ ಅವಕಾಶ ಕೋರಿದ ಕಲಾವಿದರೆಲ್ಲರಿಗೆ ವೇದಿಕೆಯನ್ನು ಒದಗಿಸಲಾಗಲಿಲ್ಲ ಎನ್ನುವ ಕೊರಗು ಶ್ರೀಪಾದರಿಗಿದೆ. ಸ್ವತಃ ತಾನೇ ಪ್ರದರ್ಶನವನ್ನು ಅತ್ಯಾಸಕ್ತಿ, ಕುತೂಹಲಗಳಿಂದ ವೀಕ್ಷಿಸಿ ಕಲಾವಿದರಿಗೆ ಧನ್ಯತೆಯ ಸಂತೋಷ ನೀಡಿಯೇ ಪ್ರಸಾದ ಕೊಡುತ್ತಿದ್ದುದು ಶ್ರೀಪಾದರ ವೈಶಿಷ್ಟéವಾಗಿದೆ. ಆರೋಗ್ಯ ಸುಸ್ಥಿತಿಯಲ್ಲಿ ಇಲ್ಲದಿರುವಾಗಲೂ ಗಾಲಿ ಕುರ್ಚಿಯಲ್ಲಿ ಬಂದು ಕಾರ್ಯಕ್ರಮ ವೀಕ್ಷಿಸಿ ಕಲಾವಿದರ ಯೋಗ-ಕ್ಷೇಮ ವಿಚಾರಿಸಿ ಆಪ್ತತೆಯ ಭಾವ ತೋರುತ್ತಿದ್ದರು.
1947-48: ಇತಿಹಾಸದ ಮರುಸೃಷ್ಟಿ: 2017-18
ಹಿರಿಯ ಪತ್ರಕರ್ತರಾಗಿದ್ದ ಎಂ.ವಿ. ಹೆಗ್ಡೆ ಅವರು ರಚಿಸಿ ಪ್ರಕಟಿಸಿದ್ದ ತಾಳಮದ್ದಳೆ 1947ರ ಆ. 14ರಂದು ಉಡುಪಿಯ ಶ್ರೀ ಅನಂತೇಶ್ವರ ಹೆಬ್ಟಾಗಿಲಿನಲ್ಲಿ ಜರಗಿತ್ತು. ಅನಂತರ 1948ರಲ್ಲಿಯೂ ಹೈದರಾಬಾದ್ ಪ್ರಾಂತ ಸ್ವತಂತ್ರವಾದಾಗ “ಹೈದರಾಬಾದ್ ವಿಜಯ’ ತಾಳಮದ್ದಲೆ ಭೋಜನಶಾಲೆಯಲ್ಲಿ ಪ್ರಸ್ತುತಗೊಂಡಿತು. ಎರಡೂ ಸಂದರ್ಭ ಉಪಸ್ಥಿತರಿದ್ದ ಪೇಜಾವರ ಮಠದ ಶ್ರೀಪಾದರು ಐದನೆಯ ಬಾರಿಯ ಐತಿಹಾಸಿಕ ಪರ್ಯಾಯದಲ್ಲಿ 70 ವರ್ಷಗಳ ಬಳಿಕ 2017ರ ಆ. 14 ಮತ್ತು 2018ರ ಡಿ. 17ರಂದು ಮತ್ತೂಮ್ಮೆ ಸಂಘಟಕ ಸುಧಾಕರ ಆಚಾರ್ಯರ ಆಯೋಜನೆಯಲ್ಲಿ ಪ್ರಸ್ತುತಿಗೊಂಡಿತು.
ಅಂತಾರಾಷ್ಟ್ರೀಯ ಕಲಾವಿದರು
ಪಂಡಿತ್ ರಾಜನ್ ಮಿಶ್ರ, ಸಾಜನ್ ಮಿಶ್ರ, ಪಂ| ವೆಂಕಟೇಶ್ ಕುಮಾರ್, ಪಂ| ಜಯತೀರ್ಥ ಮೇವುಂಡಿ, ಜಾಕೀರ್ ಹುಸೇನ್, ಕದ್ರಿ ಗೋಪಾಲನಾಥ್, ಜೇಸುದಾಸ್, ಡಾ| ಪದ್ಮಾ ಸುಬ್ರಹ್ಮಣ್ಯಂ, ಬಾಂಬೆ ಜಯಶ್ರೀ, ಸುಧಾ ರಘುನಾಥನ್, ಕರೈಕುಡಿ ಮಣಿ, ಕುಮರೇಶ್, ರಾಹುಲ್ ಶರ್ಮ, ಶಂಕರಕಂದ ಸ್ವಾಮಿ, ಲಕ್ಷ್ಮೀ ಗೋಪಾಲಸ್ವಾಮಿ, ಆರೂರು ಅನಂತಕೃಷ್ಣ ಶರ್ಮ ಇನ್ನಿತರರು ಕಾರ್ಯಕ್ರಮ ನೀಡಿದ್ದರು.
ಯಕ್ಷಗಾನ – ತಾಳಮದ್ದಳೆ- 250
ಚಿಟ್ಟಾಣಿ ಯಕ್ಷಗಾನ ಸಪ್ತಾಹ, ಧಾರೇಶ್ವರ ಯಕ್ಷಗಾನ ಬಳಗದ ಸಪ್ತಾಹ, ಬಳ್ಕೂರು ಕೃಷ್ಣಯಾಜಿ ಯಕ್ಷಗಾನ ಬಳಗದ ಪಂಚಾಹ, ಯಕ್ಷ ಶಿಕ್ಷಣ ಟ್ರಸ್ಟ್, ಯಕ್ಷಗಾನ (ವೃತ್ತಿ¤ಪರರು ಮತ್ತು ಹವ್ಯಾಸಿ ಕಲಾವಿದರು), ಸಂಗೀತ-230, ನೃತ್ಯ6-220
ನಾಟಕ-ನೃತ್ಯ ನಾಟಕ-20, ಹರಿಕಥೆ-45, ಇನ್ನಿತರ ಸಂಕೀರ್ಣ ಕಾರ್ಯಕ್ರಮಗಳು-10 (ಬಿಲ್ಲು ವಿದ್ಯೆ, ಇಂದ್ರಜಾಲ) ಎರಡು ವರ್ಷದಲ್ಲಿ ಒಟ್ಟು ಸುಮಾರು 770ಕ್ಕೂ ಮಿಕ್ಕಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೂಸೂತ್ರವಾಗಿ ನಡೆಯಲ್ಪಟ್ಟು ಕಲಾಭಿಮಾನಿಗಳು, ಪ್ರೇಕ್ಷಕರು, ಧನ್ಯರಾದರು.
ಎಸ್.ಜಿ. ನಾಯ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.