ಪೇಜಾವರ ಶ್ರೀ ಸನ್ಯಾಸಕ್ಕೆ 80: ಸಮ್ಮಾನ
Team Udayavani, Nov 30, 2017, 9:47 AM IST
ಉಡುಪಿ: ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸನ್ಯಾಸ ಸ್ವೀಕರಿಸಿ 80 ವರ್ಷವಾದ ಹಿನ್ನೆಲೆಯಲ್ಲಿ ರಾಜಾಂ ಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರನ್ನು ಅಭಿನಂದಿಸಲಾಯಿತು.
“ಸನ್ಯಾಸ’ದ ಕಲ್ಪನೆ ಜಗತ್ತಿಗೆ ಭಾರತ ಕೊಟ್ಟ ದೊಡ್ಡ ಕೊಡುಗೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಬಣ್ಣಿಸಿದರೆ, ಹಲವು ಆಯಾಮಗಳಲ್ಲಿ ಕೊಡುಗೆ ಸಲ್ಲಿಸಿದ ಪೇಜಾವರ ಶ್ರೀಗಳು ಕೆಲವೇ ಕೆಲವು ಜನರಂತೆ ಅಜರಾಮರರು ಎಂದು ಅಧ್ಯಕ್ಷತೆ ವಹಿಸಿದ್ದ ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ವಿಶ್ಲೇಷಿಸಿದರು.
“ನೊ ಫುಲ್ ಸ್ಟಾಪ್ಸ್ ಇನ್ ಇಂಡಿಯ’
ಭಾರತದ ಸಾಮಾಜಿಕ, ಸಾಂಸ್ಕೃತಿಕ ಕೊಡುಗೆ, ವೈಭವವನ್ನು ಅರ್ಥ ಮಾಡಿ ಕೊಳ್ಳಬೇಕಾದರೆ ಮಾರ್ಕ್ ಟುಲಿ ಬರೆದ “ನೊ ಫುಲ್ ಸ್ಟಾಪ್ಸ್ ಇನ್ ಇಂಡಿಯ’ ಪುಸ್ತಕವನ್ನು ಓದಬೇಕು. ನಮ ಗೆಲ್ಲರಿಗೂ ಅಪರೂಪಕ್ಕೊಮ್ಮೆ ವಿಭೂತಿ ಪುರುಷರ ಸಹವಾಸ ದೊರಕು ತ್ತದೆ. 80 ವರ್ಷಗಳ ತಪಸ್ಸಿನ ರಾಶಿ ಒಂದೆಡೆ ಸಿಗು ವುದು ಸುಲಭವಲ್ಲ. ಆದರೆ ಇದಕ್ಕೆ ಸಾಕ್ಷಿ ಯಾಗಿ ನಾವಿದ್ದೇವೆ ಎಂದು ಅನಂತ ಕುಮಾರ್ ಹೆಗಡೆ ಹೇಳಿದರು.
ನೋಡುವುದಷ್ಟೆ , ಮಾಡುವುದಲ್ಲ
ಗುರುವಾರ ಗೀತಾಜಯಂತಿ. ಪ್ರತಿಯೊಬ್ಬರಿಗೆ ಬಂದ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಎನ್ನುವುದು ಸಕಲ ಮಾನವ ಜನಾಂಗಕ್ಕೆ ಗೀತೆ ಕೊಟ್ಟ ಮುಖ್ಯ ಸಂದೇಶ. ಯತಿಗಳಿಗೆ ಮುಖ್ಯವಾದ ಧರ್ಮಪ್ರಸಾರ ಮತ್ತು ಎಲ್ಲರಿಗೂ ಅನ್ವಯವಾಗುವ ಸೇವಾ ಕಾರ್ಯವನ್ನು ಯಥಾಶಕ್ತಿ ಮಾಡು ತ್ತಿದ್ದೇನೆ. ಅಂದು ಕೃಷ್ಣ ಗೋವರ್ಧನ ಗಿರಿಯನ್ನು ಒಂದೇ ಬೆರಳಿನಿಂದ ಎತ್ತಿ ಹಿಡಿದರೆ, ಇಂದು ರಾಷ್ಟ್ರ ಮತ್ತು ಹಿಂದೂ ಧರ್ಮವೆಂಬ ಗೋವರ್ಧನ ಪರ್ವತವನ್ನು ಎಲ್ಲರೂ ಸೇರಿ ಎತ್ತಿ ಹಿಡಿಯ ಬೇಕು ಎಂದು ಶ್ರೀ ಪೇಜಾ ವರ ಶ್ರೀಗಳು ಹೇಳಿದರು. ಅಭಿನಂದಿಸುವವರು ಆರನೆಯ ಪರ್ಯಾಯವನ್ನೂ ಮಾಡಲಿ ಎಂದು ಹಾರೈಸಿದ್ದಕ್ಕೆ “ಅದೇನಾದರೂ ಆದರೆ ನೋಡುವುದು ಮಾತ್ರ, ಮಾಡುವುದು ಅಲ್ಲ’ ಎಂದು ಶ್ರೀಗಳು ಹೇಳಿದರು. ಕಿರಿಯ ಶ್ರೀಗಳು ಅಭಿನಂದಿಸಿದರು.
ಕಾನೂನಿನಿಂದಲೇ ಎಲ್ಲ ಆಗುತ್ತ?
ಅಭಿನಂದನ ಭಾಷಣ ಮಾಡಿದ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾ ಪೀಠದ ವಿಶ್ರಾಂತ ಪ್ರಾಂಶುಪಾಲ ಪ್ರೊ| ಎ. ಹರಿದಾಸ ಭಟ್ಟರು, ಕಾನೂನಿ ನಿಂದಲೇ ಎಲ್ಲವನ್ನೂ ಸರಿಪಡಿಸ ಬಹುದು ಎಂದು ಹೇಳಲಾಗದು. ಕಾನೂನೆಂದರೆ ಅದು ಕುರುಡನ ಕೈಯಲ್ಲಿ ಕೊಟ್ಟ ಬಡಿಗೆಯಂತೆ ಎಂಬ ಧೋರಣೆ ಶ್ರೀಪಾದರದ್ದು ಎಂದರು. ಇದನ್ನು ನ್ಯಾ| ವಿಶ್ವನಾಥ ಶೆಟ್ಟಿ ಅವರು ಸಮರ್ಥಿಸಿ ಲೋಕಾಯುಕ್ತ ಸಂಸ್ಥೆ ಯಿಂದಲೇ ಭ್ರಷ್ಟಾಚಾರವನ್ನು ದೂರ ಮಾಡಲು ಆಗದು. ಒಳ್ಳೆಯ ಸಮಾಜ ವನ್ನು ನಿರ್ಮಾಣ ಮಾಡಿದರೆ ಮಾತ್ರ ಇದು ಸಾಧ್ಯ ಎಂದರು. ಒಂದೊಂದು ಕ್ರಾಂತಿಕಾರಕ ನಿರ್ಧಾರವನ್ನು ತಳೆ ಯುವ ಮುನ್ನ ಹಲವು ಜನರಲ್ಲಿ ವಿಮರ್ಶೆ ಮಾಡಿ ಸಾಕಷ್ಟು ಚಿಂತನೆ ನಡೆಸುತ್ತಾರೆ ಎಂದು ಹರಿದಾಸ ಭಟ್ ಬೆಟ್ಟು ಮಾಡಿದರು.
ವಿಜಯೀಂದ್ರ ಆಚಾರ್ಯ ಸ್ವಾಗತಿಸಿ, ವಾಸುದೇವ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.