ಪಲಿಮಾರು ಪರ್ಯಾಯ: ಪೈಂಟಿಂಗ್‌-ಸಿವಿಲ್‌ ಕೆಲಸ ಶೀಘ್ರವೇ ಪೂರ್ಣ


Team Udayavani, Jan 4, 2018, 12:04 PM IST

04-19.jpg

ಉಡುಪಿ: ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯದ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠ ಹಾಗೂ ಪಲಿಮಾರು ಮಠದಲ್ಲಿ  ಪೈಂಟಿಂಗ್‌ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ. 90 ರಷ್ಟು ಪೈಂಟಿಂಗ್‌ ಪೂರ್ಣಗೊಂಡಿದೆ. ಜ. 18ರ ಶ್ರೀಗಳ ಪರ್ಯಾಯ ಪೀಠಾರೋಹಣದ ದಿನ ಹಲವು ರೀತಿಯಲ್ಲಿ ಅಲಂಕಾರ ಗೊಳಿಸಲು ಸಿದ್ಧತೆ ನಡೆಯುತ್ತಿದೆ. 

ಎರಡು ತಿಂಗಳಿನಿಂದ ನಿರಂತರ ಕೆಲಸ 
ಪರ್ಯಾಯದ ಹಿನ್ನೆಲೆಯಲ್ಲಿ ಪೈಂಟಿಂಗ್‌ ಹಾಗೂ ಇತರ ಕೆಲವು ಸಿವಿಲ್‌ ಕಾಮಗಾರಿಗಳು ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದೆ. ಶ್ರೀಕೃಷ್ಣ ಮಠ, ಭೋಜನ ಶಾಲೆ, ಒಳಭಾಗದ ಕೆಲವು ಛತ್ರಗಳಲ್ಲಿ ಪೈಂಟಿಂಗ್‌ ಪೂರ್ಣಗೊಂಡಿದೆ. ಪಲಿಮಾರು ಮಠದ ಹಿಂಭಾಗದಲ್ಲಿ ಸಿವಿಲ್‌ ಕೆಲಸ ಹಾಗೂ ಪೈಂಟಿಂಗ್‌ ಬಾಕಿಯಿದೆ. ಮೂರ್‍ನಾಲ್ಕು ದಿನಗಳ ಒಳಗಾಗಿ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿದೆ. ಪ್ರತಿದಿನ 15 ರಿಂದ 20 ಮಂದಿ ಕಾರ್ಮಿಕರು ಈ ಕೆಲಸದಲ್ಲಿ ತೊಡಗಿದ್ದಾರೆ.  25-30 ಲಕ್ಷ ರೂ. ವೆಚ್ಚದಲ್ಲಿ ಪೈಂಟಿಂಗ್‌ ನಡೆಸಲಾಗಿದೆ.  ವೆಂಕಟೇಶ್‌ ಶೇಟ್‌, ಆನಂದ್‌ ಹಾಗೂ ಜನಾರ್ದನ್‌ ಅವರ ನೇತೃತ್ವದಲ್ಲಿ ಪೈಂಟಿಂಗ್‌ ನಡೆಯುತ್ತಿದೆ.  

ಭಜನಾ ತಂಡದ ವಾಸ್ತವ್ಯಕ್ಕೆ ವ್ಯವಸ್ಥೆ
ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಿರಂತರ ಭಜನಾ ಸೇವೆ ನಡೆಯಲಿದ್ದು, ಭಜನಾ ಸೇವೆ ನಡೆಸಿಕೊಡಲು ವಿವಿಧ ಭಾಗಗಳಿಂದ ಆಗಮಿಸುವವರಿಗೆ ವಾಸ್ತವ್ಯಕ್ಕಾಗಿ ಪಲಿಮಾರು ಮಠದ ಹಿಂಭಾಗದಲ್ಲಿರುವ ಸ್ಥಳವನ್ನು ವಾಸ್ತವ್ಯಕ್ಕೆ ಪೂರಕವಾಗುವಂತೆ ನಿರ್ಮಾಣ ಮಾಡಲಾಗುತ್ತಿದೆ. ಶೌಚಾ ಲಯ, ಸ್ನಾನಗೃಹ ನಿರ್ಮಾಣದ ಕಾಮ ಗಾರಿಯೂ ನಡೆಯುತ್ತಿದೆ. ವಿದ್ಯಾಮಾನ್ಯ ಸಭಾಗೃಹದಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಕೆಲಸ ಶೀಘ್ರವೇ ಮುಗಿಯಲಿದೆ. ಸುಮಾರು 12 ಸಾವಿರ ಲೀ. ನೀರು ತುಂಬಿಸುವಂತಹ ನೀರಿನ ಟ್ಯಾಂಕ್‌ ಕೂಡ ಮಠದ ಹಿಂಭಾಗದಲ್ಲಿ ನಿರ್ಮಿಸಲಾಗುತ್ತಿದೆ. 

ಪಲಿಮಾರು ಮಠದ ಮುಂಭಾಗದ ದ್ವಾರದ ಎರಡು ಭಾಗಗಳಲ್ಲಿ  ಪುರುಷೋತ್ತಮ ಅಡ್ವೆ ಅವರಿಂದ ಜಯ-ವಿಜಯ ದ್ವಾರಪಾಲಕ ರಚನೆಯಾಗಲಿದೆ. ವಿಜಯ ನಗರದ ಕಾವಿ ಚಿತ್ರಕಲಾ ಶೈಲಿಯಲ್ಲಿ ಇದು ಮೂಡಿಬರಲಿದೆ. ಮೂರ್‍ನಾಲ್ಕು ದಿನದ ಒಳಗಾಗಿ ಚಿತ್ರಕಲಾ ರಚನೆ ಮುಗಿಯಲಿದೆ. 

14 ವರ್ಷಗಳ ಹಿಂದೆ ನಡೆದ ಪಲಿಮಾರು ಶ್ರೀಗಳ ಮೊದಲ ಪರ್ಯಾಯದ ಅವಧಿಯಲ್ಲಿ ಪೈಂಟಿಂಗ್‌ ಹಾಗೂ ಇತರ ಕೆಲವು ಸಿವಿಲ್‌ ಕಾಮಗಾರಿಯನ್ನೂ ನಾವೇ ನಡೆಸಿದ್ದೇವೆ. ಈ ಬಾರಿಯೂ ನಮಗೆ ಜವಾಬ್ದಾರಿ ನೀಡಿದ್ದಾರೆ. ಎರಡು ತಿಂಗಳಿನಿಂದ ಕೆಲಸ ನಡೆಯುತ್ತಿದ್ದು, ಕೆಲವು ದಿನ ರಾತ್ರಿಯೂ ಕೆಲಸ ನಡೆಸಿದ್ದೇವೆ. ಹೆಚ್ಚಿನ ಕೆಲಸ ಮುಗಿದಿದೆ. 
ವೆಂಕಟೇಶ್‌ ಶೇಟ್‌, ಪೈಂಟಿಂಗ್‌ ಉಸ್ತುವಾರಿ

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ

13

Malpe ಫಿಶರೀಸ್‌ ಕಾಲೇಜು: ದುರ್ವಾಸನೆಯಲ್ಲೇ ಪಾಠ

12

Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!

5

Udupi: ಜಿಲ್ಲೆಯ ಬ್ಲ್ಯಾಕ್‌ ಸ್ಪಾಟ್‌ 30ರಿಂದ 20ಕ್ಕೆ ಇಳಿಕೆ

Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ

Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.