ಪಲಿಮಾರು ಮಠ: ಉತ್ತರಾಧಿಕಾರಿ ಸ್ವೀಕಾರದ ವಿವಿಧ ಪ್ರಕ್ರಿಯೆ ಆರಂಭ
Team Udayavani, May 9, 2019, 6:00 AM IST
ಶಿಷ್ಯಸ್ವೀಕಾರದ ಅಂಗವಾಗಿ ಶ್ರೀ ವಿದ್ಯಾಧೀಶತೀರ್ಥರು ಶೈಲೇಶ ಉಪಾಧ್ಯಾಯರಿಗೆ ಮಂತ್ರಾಕ್ಷತೆ ನೀಡಿದರು.
ಉಡುಪಿ: ಶ್ರೀ ಪಲಿಮಾರು ಮಠದ ಶ್ರಿ ಯೋಗದೀಪಿಕಾ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದ ಕಂಬ್ಲಿಕಟ್ಟ ಶೈಲೇಶ ಉಪಾಧ್ಯಾಯ ವಟುವಿಗೆ ಪ್ರಣವೋಪದೇಶ ಪುರಸ್ಸರ ಸನ್ಯಾಸ ದೀಕ್ಷೆ ನೀಡಿ ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಲಿರುವ ಪೂರ್ವಭಾವಿ ಕಾರ್ಯಕ್ರಮ ಬುಧವಾರ ಶ್ರೀಕೃಷ್ಣ ಮಠದಲ್ಲಿ ನಡೆಯಿತು.
ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶೈಲೇಶ ಉಪಾಧ್ಯಾಯರಿಗೆ ಶಿಷ್ಯ ಸ್ವೀಕಾರದ ಮೊದಲ ಪ್ರಕ್ರಿಯೆಯಾಗಿ ಅನುಗ್ರಹ ಮಂತ್ರಾಕ್ಷತೆ ನೀಡಿದರು.
ಶ್ರೇಯ ಪ್ರಾಪ್ತಿಗಾಗಿ ಗಣಪತಿ ಹವನ, ಬ್ರಹ್ಮಕೂರ್ಚ, ತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ನವಗ್ರಹ ಹೋಮ, ಸಂಜೀವಿನಿ ಮೃತ್ಯುಂಜಯ ಮೊದಲಾದ ಸರ್ವಪ್ರಾಯಶ್ಚಿತ್ತ ಹೋಮಗಳನ್ನು ನಡೆಸಲಾಯಿತು. ಇದಕ್ಕೂ ಮುನ್ನ ಶೈಲೇಶ ಅವರು ಅಧ್ಯಯನ ನಡೆಸಿದ ಋಗ್ವೇದ ಮಂಗಲೋತ್ಸವವನ್ನು ನಡೆಸಿದರು. ಈ ಸಂದರ್ಭದಲ್ಲಿ ವಟುವಿನ ಮಾತಾ ಪಿತೃಗಳು ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು. ಇನ್ನು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.