ಪಲಿಮಾರು ಶ್ರೀಗಳ ಉತ್ತರಾಧಿಕಾರಿ ಆಯ್ಕೆ
ಮೇ 10ರಂದು ಶೈಲೇಶ ಉಪಾಧ್ಯಾಯ ಸನ್ಯಾಸ ಸ್ವೀಕಾರ
Team Udayavani, Mar 28, 2019, 6:00 AM IST
ಪಲಿಮಾರು ಮಠಾಧೀಶರು ಹಾಗೂ ಹೆತ್ತವರ ಜತೆ ಶೈಲೇಶ ಉಪಾಧ್ಯಾಯ.
ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠಾಧೀಶವಿದ್ಯಾಧೀಶ ತೀರ್ಥ ಶ್ರೀಪಾದರು ಪಲಿಮಾರು ಮೂಲಮಠದಲ್ಲಿರುವ ಯೋಗದೀಪಿಕಾ ಗುರುಕುಲದ ವಿದ್ಯಾರ್ಥಿ ಶೈಲೇಶ ಉಪಾಧ್ಯಾಯ ಅವರನ್ನು ಉತ್ತರಾಧಿ ಕಾರಿಯಾಗಿ ಆಯ್ಕೆ ಮಾಡಿದ್ದಾರೆ.
ಶ್ರೀ ಮಧ್ವರಿಂದ ಆರಂಭಗೊಂಡು ಶ್ರೀ ಹೃಷೀಕೇಶತೀರ್ಥರಿಂದ ಮುನ್ನಡೆದ ಶ್ರೀ ಮಠಕ್ಕೆ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು 32ನೇ ಪೀಠಾಧಿಪತಿಗಳು. ಈಗ ಅವರಿಗೆ 63 ವರ್ಷ.
“ಶೈಲೇಶ ಉಪಾಧ್ಯಾಯ ಸ್ವ ಇಚ್ಛೆ ಯಿಂದ ಸನ್ಯಾಸ ಸ್ವೀಕಾರಕ್ಕೆ ಮುಂದೆ ಬಂದಿದ್ದಾನೆ. ಮಂಗಳವಾರ ಅವನ ಹೆತ್ತವರು, ಮನೆಯವರು ಒಪ್ಪಿಗೆ ನೀಡಿ ದ್ದಾರೆ’ ಎಂದು ಶ್ರೀಗಳು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ದೇವರು ನಮಗೆ ಎರಡು ಸೌಭಾಗ್ಯ ಗಳನ್ನು ನೀಡಿದ್ದಾರೆ. ಮೊದಲನೆ ಯದು ಶ್ರೀಕೃಷ್ಣನ, ಪ್ರಾಣದೇವರ ಪೂಜೆ. ಎರಡನೆಯದು ಜ್ಞಾನ ಸಂಪತ್ತನ್ನು ಬೆಳೆಸುವುದು. ಈ ಪರಂಪರೆಯನ್ನು ಉಳಿಸಿ ಬೆಳೆಸಲು ಯೋಗ್ಯ ವಟುವಿನ ನಿರೀಕ್ಷೆಯಲ್ಲಿದ್ದಾಗ ದೇವರ ಅನುಗ್ರಹ ದಿಂದ ನಮ್ಮ ವಿದ್ಯಾಪೀಠದ ವಿದ್ಯಾರ್ಥಿ ದೊರಕಿದ್ದಾನೆ.
ಸನ್ಯಾಸ ಎಂದರೆ ವಸ್ತ್ರ ಬದಲಾವಣೆ ಅಥವಾ ಬಾಹ್ಯವೇಷವನ್ನು ಬದಲಿಸುವುದಲ್ಲ. ಮಾನಸಿಕ ಪಕ್ವತೆಯೊಂದಿಗೆ ಮನಸ್ಸಿನಲ್ಲಿ ಯೇ ಸನ್ಯಾಸತ್ವದ ಪ್ರೇರಣೆಯಾಗಬೇಕು. ಇಂತಹ ಸ್ವಯಂ ಪ್ರೇರಣೆ ಈ ವಟುವಿಗೆ ಆಗಿದೆ’ ಎಂದರು ಶ್ರೀಗಳು.
ಸನ್ಯಾಸವೆಂದರೆ ಒಂದೆಡೆ ತ್ಯಾಗ ವಾದರೆ ಇನ್ನೊಂದೆಡೆ ಜವಾಬ್ದಾರಿ ಸ್ವೀಕಾರ ಎಂದರ್ಥ. ಎಲ್ಲವನ್ನೂ ತ್ಯಜಿಸಿ ಪೀಠಾರೋಹಣ ಮಾಡುವುದರಲ್ಲಿ ತ್ಯಾಗ ಮತ್ತು ಸ್ವೀಕಾರ (ಜವಾಬ್ದಾರಿ) ಎರಡೂ ಇವೆ ಎಂದರು.
ಅಜ್ಜ ಅಷ್ಟಮಠಗಳ ಪುರೋಹಿತರು
ಮಲ್ಪೆ ಸಮೀಪದ ಕೊಡವೂರು ಕಂಬಳಕಟ್ಟ ಸುರೇಂದ್ರ ತಂತ್ರಿ ಮತ್ತು ಲಕ್ಷ್ಮೀ ಸುರೇಂದ್ರ ದಂಪತಿಯ ಹಿರಿಯ ಪುತ್ರನಾದ ಶೈಲೇಶ ಉಪಾಧ್ಯಾಯ (20) ಉಡುಪಿ ವಿದ್ಯೋದಯ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಸಂಸ್ಕೃತ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ ಪೂರ್ಣ ಗೊಳಿಸಿ 3 ವರ್ಷಗಳಿಂದ ಗುರುಕುಲದಲ್ಲಿ ವೇದಾಧ್ಯಯನ ಮಾಡುತ್ತಿದ್ದಾರೆ. ಇದು 12 ವರ್ಷಗಳ ಅಧ್ಯಯನವಾಗಿದ್ದು, ಮುಂದಿನ ಅಧ್ಯಯನ ಶ್ರೀಕೃಷ್ಣ ಮಠದ ಲ್ಲಿಯೇ ನಡೆಯಲಿದೆ. ಅವರ ಅಜ್ಜ ವಾದಿರಾಜ ಉಪಾಧ್ಯ ಅಷ್ಟಮಠಗಳ ಪುರೋಹಿತರಾಗಿದ್ದರು. ಸಹೋದರ ವಿಶ್ವೇಶ ಉಪಾಧ್ಯಾಯ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.
“ದೇವರನ್ನು ಒಲಿಸಿಕೊಳ್ಳುವೆ’
“ನನ್ನನ್ನು ಶಿಷ್ಯನಾಗಿ ಸ್ವೀಕರಿಸುವಿರಾ?’ ಎಂದು ಕೇಳಿದ್ದೆ. ಶ್ರೀಪಾದರು ಒಪ್ಪಿದರು. ನನ್ನ ಮನೆಯಲ್ಲಿ ಮೊದಲು ಒಪ್ಪಲಿಲ್ಲ. ಅನಂತರ ಒಪ್ಪಿದ್ದಾರೆ. ಶ್ರೀಕೃಷ್ಣ, ಶ್ರೀ ರಾಮನ ಪೂಜೆಗೈದು ದೇವರನ್ನು ಒಲಿಸಿ ಕೊಳ್ಳಬೇಕು. ಮುಖ್ಯಪ್ರಾಣನನ್ನು ನಂಬಿಕೊಂಡು ಬಂದಿದ್ದೇನೆ. ಸನ್ಯಾಸ ಸ್ವೀಕಾರಕ್ಕೂ ಮುಖ್ಯಪ್ರಾಣನೇ ಪ್ರೇರಣೆ’ಎಂದು ಶೈಲೇಶ್ ಉಪಾಧ್ಯಾಯ ಪತ್ರ ಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
– ಮಾ. 26ರಂದು ಶೈಲೇಶ ಉಪಾಧ್ಯಾಯ ಅವರ ಕುಟುಂ ಬದ ಹಿರಿಯರೆಲ್ಲರೂ ಶ್ರೀಗಳ ಬಳಿ ಬಂದು ತಮ್ಮ ಕುಟುಂಬದ ಕುಡಿಯ ಸನ್ಯಾಸಾಶ್ರಮ ಸ್ವೀಕಾರದ ನಿರ್ಧಾರಕ್ಕೆ ಒಪ್ಪಿಗೆಯನ್ನು ಸೂಚಿಸಿ ಅವರನ್ನು ಶ್ರೀಕೃಷ್ಣ ದೇವರ ಎದುರು ಶ್ರೀಸಂಸ್ಥಾನಕ್ಕೆ ಒಪ್ಪಿಸಿದರು.
– ಆಶ್ರಮ ಸ್ವೀಕಾರ ಪ್ರಕ್ರಿಯೆ ಮೇ 9ರಿಂದ ಆರಂಭಗೊಳ್ಳಲಿದೆ.
– ಮೇ 10ರಂದು ಬ್ರಾಹ್ಮಿà ಮುಹೂರ್ತದಲ್ಲಿ ವಟುವು ಪ್ರಣವ ಮಂತ್ರದೀಕ್ಷಾ ಪುರಸ್ಸರ ವಾಗಿ ಸನ್ಯಾಸ ಆಶ್ರಮವನ್ನು ಸ್ವೀಕರಿಸಲಿದ್ದಾರೆ.
– ಮೇ 11ರಂದು ಅಷ್ಟ ಮಹಾಮಂತ್ರಗಳ ಉಪದೇಶ.
– ಮೇ 12ರಂದು ಪಟ್ಟಾ ಭಿಷೇಕ ನಡೆಯಲಿದೆ.
– ಈ ಎಲ್ಲ ಕಾರ್ಯಕ್ರಮಗಳು ಸರ್ವಜ್ಞ ಸಿಂಹಾಸನದಲ್ಲಿಯೇ ನಡೆಯಲಿವೆ.
ಸನ್ಯಾಸಾಶ್ರಮವನ್ನು ಬಲವಂತವಾಗಿ ಕೊಡಲಾಗದು. ಆಸಕ್ತಿಯೂ ಇರಬೇಕು; ಶಾಸ್ತ್ರೋಕ್ತ ಅಂಶಗಳ ಬೆಂಬಲವೂ ಇರಬೇಕು. ವಟುವಿನ ಹೆತ್ತವರ ಒಪ್ಪಿಗೆಯೂ ಇರಬೇಕು. ನಾವು ವಟುವಿನ ಕುಂಡಲಿಯನ್ನು ಮೂವರು ಜೋತಿಷಿಗಳಿಗೆ ಕೊಟ್ಟಿದ್ದೆವು. ಫಲಿತ ಅಭಿಪ್ರಾಯ ಒಂದೇ ಆಗಿತ್ತು. ಶ್ರೀಮಠಕ್ಕೆ ಉತ್ತರಾಧಿಕಾರಿಯಾಗಿ ಇವರ ನೇಮಕ ಉತ್ತಮ ನಿರ್ಧಾರವಾಗಲಿದೆ ಎಂಬುದು. ವಟುವಿನ ಹೆತ್ತವರು ಕೇರಳದ ಪ್ರಮುಖ ಜೋತಿಷಿಗಳಲ್ಲಿ ವಿಚಾರಿಸಿದಾಗ ಅಲ್ಲಿಯೂ ಧನಾತ್ಮಕ ಫಲಿತಾಂಶವೇ ದೊರಕಿದೆ. ವಟುವಿಗೂ ಸನ್ಯಾಸದಲ್ಲಿ ಆಸಕ್ತಿ ಗಮನಾರ್ಹ.
– ಶ್ರೀ ವಿದ್ಯಾಧೀಶತೀರ್ಥರು,ಶ್ರೀ ಪಲಿಮಾರು ಮಠಾಧೀಶರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.