ಜಗತ್ತು, ಮಾನವ ಸೃಷ್ಟಿಯ ಕಾಲಕ್ಕೆ ಹೊರಳಿ ಬಂದಾಗ…


Team Udayavani, Jan 2, 2018, 6:00 AM IST

Palimar-Sri-2017.jpg

ವಾಲ್ಮೀಕಿಯವರು ಗಂಗೆ ಕುರಿತು ಗಂಗಾಷ್ಟಕ ಬರೆದಿದ್ದಾರೆ. ಆದಿಕವಿಯಾದ ಕಾರಣ ಪ್ರಾಯಃ ಇದುವೇ ಮೊದಲ ಅಷ್ಟಕವೆನ್ನಬಹುದು. “ಹರಿವಂಶ’ ಪುರಾಣದಲ್ಲಿ  ಸ್ಮರಣೀಯರಾದ ರಾಜರ್ಷಿ, ಋಷಿಮುನಿಗಳು, ನದಿ, ಪರ್ವತಗಳು, ದೇವಾನುದೇವತೆಗಳು ನಮ್ಮನ್ನು ಕಾಪಾಡಲಿ ಎಂಬ ಪ್ರಾರ್ಥನೆ ಇದೆ. ಇದು ವಿಸ್ತೃತ ವಿವರಣೆ. ಇಂತಹ ಅಂಶಗಳೇ ಶ್ರೀಪಲಿಮಾರು ಮಠದ ಪರಂಪರೆಯ ಶ್ರೀರಾಜರಾಜೇಶ್ವರಯತಿಗಳಿಗೆ ಮಂಗಲಾಷ್ಟಕ ಬರೆಯಲು ಸ್ಫೂರ್ತಿ ಎನ್ನಬಹುದು. ಬೃಹದ್ಗ†ಂಥಗಳ ಸಾರವನ್ನು ಮೈಕ್ರೋ ಅಥವಾ ನ್ಯಾನೋ ಆಗಿ ಎಂಟು ಶ್ಲೋಕಗಳಲ್ಲಿ ಕೊಟ್ಟದ್ದು ಕವಿಶಕ್ತಿ.  ಆರಂಭಗೊಳ್ಳುತ್ತಿದೆ. 

ಲಕ್ಷ್ಮೀರ್ಯಸ್ಯ ಪರಿಗ್ರಹಃ ಕಮಲಭೂಃ ಸೂನುರ್ಗರುತ್ಮಾನ್‌ ರಥಃ
ಪೌತ್ರಶ್ಚಂದ್ರವಿಭೂಷಣಃ ಸುರಗುರುಃ ಶೇಷಶ್ಚ ಶಯ್ನಾ ಪುನಃ|
ಬ್ರಹ್ಮಾಂಡಂ ವರಮಂದಿರಂ ಸುರಗಣಾ ಯಸ್ಯ ಪ್ರಭೋಃ ಸೇವಕಾಃ
ಸ ತ್ತೈಲೋಕ್ಯಕುಟುಂಬಪಾಲನಪರಃ ಕುರ್ಯಾದ್ಧರಿರ್ಮಮಂಗಲಮ್‌|| 
ಶ್ರೀರಾಜರಾಜೇಶ್ವರಯತಿಗಳು ಮಂಗಲಾಷ್ಟಕವನ್ನು ಲಕ್ಷ್ಮೀದೇವಿಯಿಂದ ಆರಂಭಿಸಿದ್ದಾರೆ. ಇದಕ್ಕಾಗಿಯೇ ಇದು ಮಂಗಲಪ್ರದ ಎಂಬ ನಂಬಿಕೆ ಇದೆ. ಈಗ ನಾವು “ಹಣ’ವನ್ನೇ  ಮಂಗಲಪ್ರದವೆಂದು ಭಾವಿಸುತ್ತಿರುವುದರಿಂದ ಈಗಿನ ಕಾಲಕ್ಕೂ ಸೂಕ್ತವಾಗಿ ಕಾಣುತ್ತದೆ. ಲಕ್ಷ್ಮೀ, ಶ್ರೀಮನ್ನಾರಾಯಣ ಅನಂತಪದ್ಮನಾಭನ ರೂಪದಲ್ಲಿರುವಾಗ ಹೊಕ್ಕುಳಲ್ಲಿರುವ ಕಮಲದ ನಾಳದಲ್ಲಿ ಜನಿಸಿದ ಬ್ರಹ್ಮ, ಗರುಡ ಶೇಷ ರುದ್ರ ಮೊದಲಾದ ದೇವತೆಗಳನ್ನು ಪ್ರಥಮ ಚರಣದಲ್ಲಿ ಸ್ಮರಿಸಲಾಗಿದೆ. ಮುಂದೆ ಬ್ರಹ್ಮಾಂಡವನ್ನು ಉಲ್ಲೇಖೀಸಿ ವೈಶ್ವಿ‌ಕ ಚಿಂತನೆಯನ್ನು ಹರಿಬಿಟ್ಟಿದ್ದಾರೆ. ಪರಿವಾರದೇವತೆಗಳ ಸೇವೆಯೊಂದಿಗೆ ಮೂರು ಲೋಕವೆಂಬ ಕುಟುಂಬದ ಪರಿಪಾಲನೆ ನಡೆಸುತ್ತಿರುವ ಭಗವಂತ ನಮ್ಮನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ಜಗತ್ತಿನ ಸೃಷ್ಟಿಯ ಹಿಂದೆ ಹಿಂದೆ ಹೋದಂತೆ ಅದು ಅದ್ಭುತ ಕಲ್ಪನೆಯೊಂದಿಗೆ ತೆರೆಯುತ್ತದೆ. ಅದ್ಭುತವನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿರಿಸಿ “ಮೈಕ್ರೋಚಿಪ್‌’ನಂತೆ ರಾಜರಾಜೇಶ್ವರಯತಿಗಳು ಕೊಟ್ಟಿದ್ದಾರೆ. 

ಬ್ರಹ್ಮಾ ವಾಯುಗಿರೀಶಶೇಷಗರುಡಾ ದೇವೇಂದ್ರಕಾಮೌ ಗುರು
ಶ್ಚಂದ್ರಾಕೌì ವರುಣಾನಲೌ ಮನುಯಮೌ ವಿತ್ತೇಶವಿಘ್ನೇಶ್ವರೌ|
ನಾಸತೌÂ ನಿರೃತಿರ್ಮರುದ್‌ಗಣಯುತಾಃ ಪರ್ಜನ್ಯಮಿತ್ರಾದಯಃ
ಸಸ್ತ್ರೀಕಾಃ ಸುರಪುಂಗವಾಃ ಪ್ರತಿದಿನಂ ಕುರ್ವಂತು ನೋ ಮಂಗಲಮ್‌||
ಬ್ರಹ್ಮ, ವಾಯು, ಶಿವ, ಶೇಷ, ಗರುಡ, ದೇವೇಂದ್ರ, ಕಾಮ (ಮನ್ಮಥ), ದೇವಗುರುವಾದ ಬ್ರಹಸ್ಪತಿ, ಸೂರ್ಯಚಂದ್ರ, ವರುಣ, ಅಗ್ನಿ, ಯಮ, ಕುಬೇರ, ಗಣಪತಿ, ನಿರೃತಿ, ಪರ್ಜನ್ಯ- ಮಿತ್ರಾದಿ ಹಿರಿಯ ದೇವಗಣಗಳು ನಮಗೆ ಸನ್ಮಂಗಲವನ್ನುಂಟುಮಾಡಲಿ ಎಂಬ ಪ್ರಾರ್ಥನೆ ಇಲ್ಲಿದೆ. ನಾಸತೌÂ ಅಂದರೆ ಅಶ್ವಿ‌ನಿಕುಮಾರರು. ಇವರು ವೈದ್ಯದೇವತೆಗಳು. ಯಾರ ಸ್ಮರಣೆಯಿಂದಲಾದರೂ ಆರೋಗ್ಯಭಾಗ್ಯ ಸಿಗಲಿ ಎಂಬ ಈ ಕಾಲಘಟ್ಟದಲ್ಲಿ ಅಶ್ವಿ‌ನಿಕುಮಾರರ ಸ್ಮರಣೆಗೆ ಬಹಳ ಮಹತ್ವವಿದೆ. ನಿರೃತಿ ಎಂದರೆ ನೈಋತ್ಯ ದಿಕ್ಕಿನ ದಿಕಾ³ಲಕ. ವಿತ್ತೇಶನೆಂದರೆ ಕುಬೇರ. ಈಗಂತೂ ಎಲ್ಲರಿಗೂ ಬೇಕು ಕುಬೇರತ್ವ. ಯಮ, ವರುಣ, ಇಂದ್ರ, ಅನಲ (ಅಗ್ನಿ), ವಾಯು, ರುದ್ರ ಈ ಮೂಲಕ ಎಂಟು ದಿಕಾ³ಲಕರ ಸ್ಮರಣೆ ಇದೆ. ಪರ್ಜನ್ಯ ಅಂದರೆ ಮೋಡದ ದೇವತೆ. ಮೋಡವೆಂದರೆ ಅದೊಂದು ಶುಷ್ಕವಾದ ಮೇಟೀರಿಯಲ್‌ ಅಲ್ಲ. ಅದನ್ನು ನಿಯಂತ್ರಿಸುವ ದೇವತೆಯೊಬ್ಬನಿದ್ದಾನೆಂಬ ಸೂಚನೆ ಕೊಡಲಾಗುತ್ತಿದೆ. ಮಿತ್ರ ಎಂದರೆ 12 ಮಂದಿ ಆದಿತ್ಯರಲ್ಲಿ ಒಬ್ಬ. ಅದಿತಿಯ ಮಕ್ಕಳು ಆದಿತ್ಯರು. ವಿವಸ್ವಂತ ಒಬ್ಬ ಆದಿತ್ಯ. ಈಗ ನಾವು ಕಾಣುತ್ತಿರುವ ಸೂರ್ಯನನ್ನು ವಿವಸ್ವಂತ ಎಂದು ಕರೆಯುತ್ತಾರೆ. ಅಗಾಧವಾದ ಶಾಖ ಕೊಟ್ಟು ಜಗತ್ತನ್ನು ಸಲಹುವವನೀತ. ಈಗೀಗ ಈತನ ಉಷ್ಣಾಂಶದಿಂದ ವಿದ್ಯುತ್‌ ಮೊದಲಾದ ಅಮೂಲ್ಯ ಶಕ್ತಿಯನ್ನು ಉತ್ಪಾದಿಸಬಹುದೆಂದು ಜನಪ್ರಿಯವಾಗಿದೆ, ಭವಿಷ್ಯದ ದೊಡ್ಡ ಆಶಾಕಿರಣವೂ ಇದಾಗಿದೆ.

ಇಲ್ಲಿ ಮನುವನ್ನು ಸ್ಮರಿಸಲಾಗಿದೆ. ಸ್ವಾಯಂಭುವಮನು ಮನುಕುಲದ ಮೂಲ ಪುರುಷ. ಮನುವಿನಿಂದ ಮಾನವನೆಂಬ ಹೆಸರು ಬಂತು. ಒಟ್ಟು 14 ಮನುಗಳು. ಇವರಲ್ಲಿ ಮೊದಲ ಮನುವೇ ಈತ. ಬ್ರಹ್ಮದೇವ ಜಗತ್ತನ್ನು ಸೃಷ್ಟಿಸಿದ ಬಳಿಕ ಸ್ವಾಯಂಭುವ ಮತ್ತು ಶತರೂಪಾದೇವಿ ಎಂಬ ಮಾನವಜೋಡಿಯನ್ನು ನಿರ್ಮಿಸಿದ. ಇದು ಮೊದಲ ಮಾನವ ಜೋಡಿ. ಇವರಿಂದ ಮಾನವ ಸಂತತಿ ಬೆಳೆಯಿತೆಂಬ ನಂಬಿಕೆ ಇದೆ. ಇದು ಯಾವಾಗ ಇರಬಹುದು?

ಒಬ್ಬೊಬ್ಬ ಮನುವಿನ ಆಡಳಿತಾವಧಿ 71 ಮಹಾಯುಗ. ಒಂದು ಮಹಾಯುಗವೆಂದರೆ ಕೃತ, ತ್ರೇತ, ದ್ವಾಪರ, ಕಲಿಯುಗ. ಈಗ ನಡೆಯುತ್ತಿರುವುದು ಏಳನೆಯ ಮನುವಿನ ಅವಧಿ. ಈಗಿನ ಮನುವಿನ ಹೆಸರು ವೈವಸ್ವತ. ಈತ ದ್ವಾದಶ ಆದಿತ್ಯರಲ್ಲಿ ಒಬ್ಬನಾದ ವಿವಸ್ವಂತನ ಮಗ. ಸ್ವಾಯಂಭುವ ಮನುವಾಗಿ ಅಂದರೆ ಮಾನವ ಜಾತಿ ಹುಟ್ಟಿ 195,58,85,118 ವರ್ಷ ಕಳೆದಿದೆ. ಇದನ್ನು ಪ್ರತಿ ಪಂಚಾಂಗದಲ್ಲಿ ಬರೆದಿರುತ್ತಾರೆ. ಇದರಲ್ಲಿ ಆರು ಮನ್ವಂತರ, ಏಳನೆಯ ಮನ್ವಂತರದಲ್ಲಿ 27 ಮಹಾಯುಗ, 28ನೆಯ ಮಹಾಯುಗದಲ್ಲಿ ಮೂರು ಯುಗ, ನಾಲ್ಕನೆಯದಾದ ಕಲಿಯುಗದಲ್ಲಿ 5,115 ವರ್ಷ ಸೇರಿದೆ. ವೈವಸ್ವತ ಮನ್ವಂತರ ಆರಂಭವಾಗಿ 27 ಮಹಾಯುಗ (1,16,64,000 ವರ್ಷ) + ಮೂರು ಯುಗ (28,88,000 ವರ್ಷ) + ಕಲಿಯುಗದಲ್ಲಿ 5,115 ವರ್ಷ ಕಳೆದಿದೆ. ಹೀಗೆ ಅಗಾಧವಾದ, ಕಲ್ಪಿಸಲೂ ಅಸಾಧ್ಯವೆನಿಸಿದ ಲೆಕ್ಕಾಚಾರಗಳನ್ನು ಹುದುಗಿಸಿದ ಪ್ರಾಚೀನತೆಯನ್ನು ರಾಜರಾಜೇಶ್ವರಯತಿಗಳು ಕೊಟ್ಟು ಇಂತಹ ಮಹನೀಯರನ್ನು ನಿತ್ಯ ಸ್ಮರಿಸುವಂತೆ ಮಾಡಿದ್ದಾರೆ. 

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !

ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.