![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Aug 8, 2024, 8:49 PM IST
ಉಡುಪಿ : ಕಾರ್ಕಳ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ , ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆಗಸ್ಟ್ 9 ರಿಂದ(ಶುಕ್ರವಾರ) ಆಗಸ್ಟ್ 11 ರ(ಭಾನುವಾರ) ವರೆಗೆ ಶತಚಂಡಿಕಾ ಮಹಾ ಯಾಗ ನೆರವೇರಲಿದೆ.
ಆ. 9 ರಂದು ಬೆಳಗ್ಗೆ 7 ಗಂಟೆಯಿಂದ ಫಲಾನ್ಯಾಸ, ಪ್ರಾರ್ಥನೆ, ಮಹಾಸಂಕಲ್ಪ, ಪುಣ್ಯಾಹವಾಚನ ಇತ್ಯಾದಿಗಳ ಬಳಿಕ ಯಾಗ ಮಂಟಪ ಪ್ರವೇಶಿಸಿಸುವ ಮೂಲಕ ಶತಚಂಡಿಕಾ ಪಾರಾಯಣ ಆರಂಭವಾಗಲಿದೆ. ‘ವಿಷ್ಣುಯಾಗ’ದ ಬಳಿಕ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಶಾಂತಿ ಮಂತ್ರ ಪಠಣ, ಭಜನ ಕಾರ್ಯಕ್ರಮ ನಡೆಯಲಿದೆ.
ಆ 10 ರಂದು ಬೆಳಗ್ಗೆ ‘ಶತರುದ್ರ ಯಾಗ’ ನಡೆಯಲಿದ್ದು ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ 5 ರಿಂದ ”ಶ್ರೀ ಚಕ್ರ ಆರಾಧನೆ”, ಅಷ್ಠಾವಧಾನ ಸೇವೆ ನಡೆಯಲಿದೆ.
ಆ 11 ರಂದು ಬೆಳಗ್ಗೆ 7 ಗಂಟೆಯಿಂದ ‘ಶತ ಚಂಡಿಕಾ ಮಹಾ ಯಾಗ’ ಪ್ರಾರಂಭವಾಗಲಿದ್ದು ಮಧ್ಯಾಹ್ನ ಪೂರ್ಣಾಹುತಿ ನಡೆದ ಬಳಿಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಕನ್ನಿಕಾ ಪೂಜೆ, ಸುವಾಸಿನಿ ಆರಾಧನೆ, ಬಲಿ ಪ್ರಧಾನ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.