ಪಾಂಬೂರು: ಬೋನಿಗೆ ಬಿದ್ದ ಚಿರತೆ
Team Udayavani, Aug 8, 2018, 10:10 AM IST
ಶಿರ್ವ: ಪಡುಬೆಳ್ಳೆ, ಸಡಂಬೈಲು, ಪಾಂಬೂರು, ಬಂಟ ಕಲ್ಲು ಪರಿಸರದಲ್ಲಿ ಆಗಾಗ ಕಾಣಿಸಿ ಕೊಳ್ಳುತ್ತ ನಾಗರಿಕರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಮಂಗಳವಾರ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದಿದೆ.
ಸುಮಾರು 8 ವರ್ಷದ ಗಂಡು ಚಿರತೆ ಕಳೆದ ಕೆಲವು ಸಮಯದಿಂದ ಊರಿಗೆ ನುಗ್ಗಿ ನಾಟಿಕೋಳಿ, ಸಾಕುನಾಯಿಗಳನ್ನು ಕೊಂದು ತಿನ್ನುತ್ತ ಸ್ಥಳೀಯರ ನಿದ್ದೆಗೆಡಿಸಿತ್ತು. ಅವರ ಆಗ್ರಹದ ಮೇರೆಗೆ ಅರಣ್ಯ ಇಲಾಖೆ ಸಿಬಂದಿ ಪಾಂಬೂರು ದಿಂಡೊಟ್ಟು ಜಾರ್ಜ್ ಫ್ಲೋರಿನ್ ಸಲ್ದಾನ ಅವರ ಮನೆಯ ಸಮೀಪ ಬೋನು ಇರಿಸಿದ್ದರು. ಮೂರು ದಿನಗಳ ಬಳಿಕ ಚಿರತೆ ಬೋನಿಗೆ ಬಿದ್ದಿದ್ದು, ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ.
ಉದಯವಾಣಿ ವರದಿ
ಪಾಂಬೂರು ಪರಿಸರದಲ್ಲಿ ಚಿರತೆ ಹಾವಳಿಯ ಬಗ್ಗೆ ಜು. 4ರಂದು ಉದಯವಾಣಿ ಸಮಗ್ರ ವರದಿ ಪ್ರಕಟಿಸಿತ್ತು. ಬಂಟಕಲ್ಲಿನ ಪೋಸ್ಟ್ ಮಾಸ್ಟರ್‌ಪಡುಬೆಳ್ಳೆ ಸಡಂಬೈಲಿನ ಭಾಸ್ಕರ ಶೆಟ್ಟಿ ಅವರ ಮನೆಯಂಗಳಕ್ಕೆ ಬಂದ ಚಿರತೆ ಮನೆಯವರ ಎದುರೇ ಸಾಕುನಾಯಿಯನ್ನು ಎಳೆದು ಕೊಂಡು ಹೋಗಿತ್ತು. ಚಿರತೆ ಗಾತ್ರ ದಲ್ಲಿ ದೊಡ್ಡದಿದ್ದು ನಾಯಿಯನ್ನು ಕಚ್ಚಿ ಸರಾಗವಾಗಿ ಎತ್ತಿಕೊಂಡು ಹೋಗಿತ್ತು ಎಂದು ಭಾಸ್ಕರ ಶೆಟ್ಟಿ ತಿಳಿಸಿ ದ್ದರು. ಇದರಿಂದ ಎಚ್ಚೆತ್ತ ಅರಣ್ಯಾಧಿ ಕಾರಿಗಳು ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೋನು ಇಟ್ಟಿದ್ದರು.
ಶಾಲಾ ಮಕ್ಕಳಿಂದ ವೀಕ್ಷಣೆ
ಪಾಂಬೂರು ಪರಿಸರದ ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಗೆ ಚಿರತೆ ಯನ್ನು ವೀಕ್ಷಿಸಲು ಅರಣ್ಯಾಧಿ ಕಾರಿಗಳು ಅವಕಾಶ ಕಲ್ಪಿಸಿ ಕೊಟ್ಟಿದ್ದರು.
ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಮತ್ತು ಉಪ ವಲಯ ಅರಣ್ಯಾಧಿಕಾರಿ ದಯಾನಂದ ಕೆ. ಅವರ ಮಾರ್ಗದರ್ಶನದಂತೆ ಬೆಳ್ಳೆ ಗಸ್ತಿನ ಅರಣ್ಯ ರಕ್ಷಕ ಗಣಪತಿ ನಾಯಕ್ ಮತ್ತು ಅರಣ್ಯ ವೀಕ್ಷಕ ಪರಶುರಾಮ ಮೇಠಿ ಕಾರ್ಯಾ ಚರಣೆ ನಡೆಸಿದ್ದರು.
ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಎಸ್.ಕೆ. ಬಾರ್ಡರ್‌ನ ವನ್ಯಜೀವಿ ವಿಭಾಗದ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.