ಪಪ್ಪಾಯಿ ಬೇಡಿಕೆಯಿದ್ದರೂ, ಪೂರೈಕೆ ಇಲ್ಲ
Team Udayavani, Apr 18, 2017, 3:53 PM IST
ಪಪ್ಪಾಯಿ ಹಣ್ಣಿಗೆ ಬೇಡಿಕೆ ಇದೆ. ಆದರೆ ಬೆಳೆಯುವವರೂ ಇಲ್ಲ, ಮಾರುಕಟ್ಟೆಗೆ ಪೂರೈಕೆ ಮಾಡುವವರೂ ಇಲ್ಲ. ಹೀಗಾಗಿ
ಹೊರಪ್ರದೇಶಗಳಿಂದ ತರಿಸಿಕೊಳ್ಳಲಾಗುತ್ತದೆ ಮಾತ್ರಧಿವಲ್ಲ ದುಬಾರಿ ಬೆಲೆಗೆ ಮಾರಾಟವೂ ಆಗುತ್ತಿದೆ. ಮನೆ ಬಳಕೆಗೆ ಬೇಕಾದರೆ 1- 2 ಗಿಡವನ್ನಷ್ಟೇ ನೆಡಲಾಗುತ್ತಿದೆ. ನಿರ್ವಹಣೆ ಕಷ್ಟವೆಂಬ ಕಾರಣಕ್ಕೆ ವಾಣಿಜ್ಯ ದೃಷ್ಟಿಯಿಂದ ಇಲ್ಲಿ ಪಪ್ಪಾಯಿ ಬೆಳೆದಿಲ್ಲ.
ಆರೋಗ್ಯದಾಯಕ ಬಳಕೆಯ ಹಣ್ಣಾಗಿ, ತಂಪು ಪಾನೀಯ ಹಾಗೂ ಐಸ್‌ಕ್ರೀಂಗಳಲ್ಲಿ ಬಳಕೆಯಾಗುವ ಪಪ್ಪಾಯಿ ಹಣ್ಣುಗಳಿಗೆ ಇಂದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದರೆ ಕರಾವಳಿ ಭಾಗಗಳಲ್ಲಿ ವ್ಯಾಪಾರದ ದೃಷ್ಟಿಯಿಂದ ಪಪ್ಪಾಯಿ ಬೆಳೆಯುವ ಕೃಷಿಕರ ಕೊರತೆಯಿದೆ. ಪಪ್ಪಾಯಿ ಹಣ್ಣು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಮುಖ್ಯವಾಗಿ ಮೂಲವ್ಯಾಧಿ, ಚರ್ಮವ್ಯಾಧಿ, ಅಜೀರ್ಣ, ಮೂತ್ರಪಿಂಡದ ಸಮಸ್ಯೆ ಸಹಿಧಿತ ಹಲವು ರೋಗ ಗಳ ಉಪಶಮನದಲ್ಲಿ ಪಪ್ಪಾಯಿ ಹಣ್ಣನ್ನು ಬಳಕೆ ಮಾಡ ಲಾಗುತ್ತಿದೆ. ಈ ಕಾರಣಕ್ಕಾಗಿ ಹಾಗೂ ವಾಣಿಜ್ಯ ಉದ್ದೇಶ ದಿಂದಲೂ ಪಪ್ಪಾಯಿ ಹಣ್ಣುಗಳಿಗೆ ಬೇಡಿಕೆ ಇದೆ.
ಹೀಗೆ ಬೆಳೆಯಬಹುದು
ಪಪ್ಪಾಯಿಯನ್ನು ಎಡೆ ಬೆಳೆಯಾಗಿಯೂ ಬೆಳೆಯಲು ಸಾಧ್ಯವಿದೆ. ಮಳೆಗಾಲದಲ್ಲಿ ಬುಡದಲ್ಲಿ ನೀರು ನಿಲ್ಲುವ ಕಾರಣದಿಂದ 1 ಅಡಿ ಆಳದ ಗುಂಡಿ ಮಾತ್ರ ತೋಡಿ ಗಿಡವನ್ನು ನೆಡಬೇಕು. ಇದಕ್ಕೆ ರಾಸಾಯನಿಕ ಗೊಬ್ಬರ ಅಗತ್ಯವಿಲ್ಲ. ಕಾಂಪೋಸ್ಟ್ ಮತ್ತು ಎರೆಗೊಬ್ಬರ ತುಂಬಿಸಿ ಗಿಡ ನಾಟಿ ಮಾಡಬಹುದು. ಅನಂತರದಲ್ಲಿ ಸುಡುಮಣ್ಣು, ಕಟ್ಟಿಗೆಯ ಬೂದಿಯಿಂದ ಗಿಡಗಳು ಸೊಕ್ಕಿ ನಿಲ್ಲಲು ಸಹಾಯಕವಾಗುತ್ತದೆ. ಕಪ್ಪು, ಕೆಂಪು ಮಣ್ಣು, ಮೆಕ್ಕಲು ಮಣ್ಣು ಪಪ್ಪಾಯಿ ಬೆಳೆಗೆ ಪೂರಕ.
ಹಲವು ತಳಿಗಳು
ಪ್ರಸ್ತುತ ಮಾರುಕಟ್ಟೆಯಲ್ಲಿ ತೈವಾನ್ 786 ತಳಿ ಹೆಚ್ಚು ಲಗ್ಗೆಯಿಟ್ಟಿದೆ. ನಮ್ಮಲ್ಲಿ ರೆಡ್ ಲೇಡಿ, ವಾಷಿಂಗ್ಟನ್, ಕೂರ್ಗ್ ಹನಿಡ್ನೂ, ಸನ್‌ರೈಸ್, ಸೋಲೋ, ಸೂರ್ಯ ಹಾಗೂ ಸ್ಥಳೀಯ ತಳಿಗಳು ಬಳಕೆಯಲ್ಲಿವೆ.
ರೋಗ ಬಾಧೆ
ಮಳೆ ಹೆಚ್ಚಾದರೆ ಕೊಳೆರೋಗ ಬಂದು ಮೊದಲು ಕಾಯಿಗಳಿಗೆ, ಬಳಿಕ ಮರಕ್ಕೆ ಹಾನಿ ಯಾಗುತ್ತದೆ. ಹಣ್ಣು ಚುಕ್ಕಿರೋಗ, ಹಣ್ಣು ಕೊಳೆರೋಗ, ಚಿಬ್ಬು ರೋಗ, ಬೂದಿರೋಗ ಮತ್ತು ಫಂಗಸ್, ಬಿಳಿಹೇನು ಮೊದಲಾದ ರೋಗಗಳು ಬಾಧಿಸುತ್ತವೆ. ಬಯೋ ಪೈಟ್ ಅಥವಾ ಬೋಡೋì ದ್ರಾವಣ ಸಿಂಪಡಿಸುವುದರಿಂದ ಹೆಚ್ಚಿನ ರೋಗಗಳನ್ನು ನಿಯಂತ್ರಿಸಬಹುದು.
ಪದಾರ್ಥದಲ್ಲಿ ಬಳಕೆ
ಪಪ್ಪಾಯಿ ಹಣ್ಣು ಜೀರ್ಣ ಕ್ರಿಯೆಗೆ ಸಹಕಾರಿಯಾಗಿದ್ದು, ಜೀರ್ಣಾಂಗದ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ಎ ವಿಟಮಿನ್ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೂ ಇದು ಸಹಕಾರಿ. ಗ್ಯಾಸ್ಟ್ರಿಕ್ ಸಮಸ್ಯೆಗೆ, ಮುಖ ಸೌಂದರ್ಯವರ್ಧಕವಾಗಿಯೂ ಪಪ್ಪಾಯಿ ಪ್ರಯೋಜನಕಾರಿಯಾಗಿದೆ. ಪಪ್ಪಾಯಿ ಕಾಯಿಯಿಂದ ಪಲ್ಯ, ಸಾಂಬಾರು, ತೆಂಗಿನ ಕಾಯಿಯೊಂದಿಗೆ ಮಜ್ಜಿಗೆ ಹುಳಿಯನ್ನೂ ತಯಾರಿಸಬಹುದು.
ಬಳಕೆಗೆ ಮಾತ್ರ
ಸ್ಥಳೀಯವಾಗಿ ಪ್ರತಿ ಮನೆಗಳಲ್ಲೂ ಒಂದೆರಡು ಪಪ್ಪಾಯಿ ಗಿಡಗಳು ಇವೆ. ಬೇರೆ ಬೇರೆ ತಳಿಗಳೂ ಕಂಡುಬರುತ್ತವೆ. ದಿನ ಬಳಕೆಯ ಪದಾರ್ಥಗಳಲ್ಲೂ ಪಪ್ಪಾಯಿ, ಕಾಯಿ, ಹಣ್ಣುಗಳು ಬಳಕೆಯಾಗುತ್ತವೆ. ಆದರೆ ಬಳಕೆಗೆ ಬೇಕಾದಷ್ಟು ಮಾತ್ರ ಪಪ್ಪಾಯಿಗಳನ್ನು ಬೆಳೆಯುವ ಕಾರಣದಿಂದ ಈ ಭಾಗದಿಂದ ಮಾರುಕಟ್ಟೆಗೆ ಪೂರೈಕೆಯಾಗುವ ಪಪ್ಪಾಯಿ ಹಣ್ಣುಗಳ ಪ್ರಮಾಣ ಮಾತ್ರ ಕಡಿಮೆಯಿದೆ.
ಯಾಕೆ ಕಡಿಮೆ ?
ಕರಾವಳಿ ಭಾಗದಲ್ಲಿ ಎಡೆ ಬೆಳೆಯಾಗಿ ಈಗಾಗಲೇ ಸಾಕಷ್ಟು ಬೆಳೆಗಳಿವೆ. ಪಪ್ಪಾಯಿ ಗಿಡಗಳ ನಿರ್ವಹಣೆ ಕಷ್ಟ. ಮಳೆ, ಗಾಳಿಗೆ ಪಪ್ಪಾಯಿ ಕೃಷಿ ನಾಶವಾಗುತ್ತದೆ ಎನ್ನುವ ಮುಖ್ಯ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಅಥವಾ ವಾಣಿಜ್ಯ ಉದ್ದೇಶದಿಂದ ಪಪ್ಪಾಯಿ ಬೆಳೆಯುತ್ತಿಲ್ಲ ಎನ್ನುವುದು ಕೃಷಿಕರ ಅಭಿಪ್ರಾಯ.
ಕೆ.ಜಿ.ಗೆ 40 ರೂ.
ದೊಡ್ಡ ಗಾತ್ರದ ಹಣ್ಣುಗಳಿಗಿಂತಲೂ ಮಿತ ಗಾತ್ರದ ಹಣ್ಣುಗಳಿಗೆ ಬೇಡಿಕೆ ಇದೆ. ಬೇಸಗೆ ಕಾಲವಾಗಿರುವುದರಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ತೈವಾನಿ ಜಾತಿಯ ಪಪ್ಪಾಯಿ ಕೆ.ಜಿ. ಯೊಂದರ 40 ರೂ. ಬೆಲೆಗೆ ಮಾರಾಟವಾಗುತ್ತಿದೆ. ಈ ಭಾಗದ ಮಾರುಕಟ್ಟೆಗಳಲ್ಲಿ ಬೇಡಿಕೆ ಇದ್ದರೂ ಪೂರೈಕೆ ಮಾತ್ರ ಸ್ಥಳೀಯವಾಗಿ ಆಗುತ್ತಿಲ್ಲ. ಶಿರಸಿ ಮೊದಲಾದ ಕಡೆಗಳಿಂದ ಆಮದಾಗುತ್ತದೆ.
ನಗರವಾಸಿಗಳು ಪಪ್ಪಾಯಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಉಳಿದಂತೆ ಪಾನೀಯ, ಐಸ್‌ಕ್ರೀಂ ಅಂಗಡಿಗಳಲ್ಲಿ ಪಪ್ಪಾಯಿ ಬೇಕೇ ಬೇಕು. ಪುತ್ತೂರಿನಂತಹ ನಗರದಲ್ಲಿ ಪಾನೀಯ ಅಂಗಡಿಗಳಲ್ಲಿ ದಿನವೊಂದರ 50 ಕೆ.ಜಿ. ಪಪ್ಪಾಯಿ ಹಣ್ಣು ಬಳಕೆಯಾಗುತ್ತದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.